IND vs SL: ಭಾರತದ ಗೆಲುವಿನಲ್ಲಿಯೂ ವಿಲನ್ ಆದದ್ದು ಈ ಆಟಗಾರ! ಯಾಕೆ ಗೊತ್ತಾ?

IND vs SL 1st ODI Match : ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 67 ರನ್ ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಸುಲಭ ಜಯ ದಾಖಲಿಸಿತು. ಆದರೆ ಈ ಪಂದ್ಯದಲ್ಲಿ ತಂಡದ ಬಲಿಷ್ಠ ಆಟಗಾರ ಸಂಪೂರ್ಣ ವಿಫಲರಾದರು.

Written by - Chetana Devarmani | Last Updated : Jan 10, 2023, 10:44 PM IST
  • ಭಾರತ ಶ್ರೀಲಂಕಾ ಏಕದಿನ ಪಂದ್ಯ
  • ಭಾರತದ ಗೆಲುವಿನಲ್ಲಿಯೂ ವಿಲನ್ ಆದ ಆಟಗಾರ
  • ಸಂಪೂರ್ಣ ವಿಫಲರಾದ ಬಲಿಷ್ಠ ಆಟಗಾರ
IND vs SL: ಭಾರತದ ಗೆಲುವಿನಲ್ಲಿಯೂ ವಿಲನ್ ಆದದ್ದು ಈ ಆಟಗಾರ! ಯಾಕೆ ಗೊತ್ತಾ? title=

India Vs Sri Lanka 1st ODI: ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಿತು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಸುಲಭ ಜಯ ದಾಖಲಿಸಿತು. ಆದರೆ ಈ ಪಂದ್ಯದಲ್ಲಿ ತಂಡದ ಬಲಿಷ್ಠ ಆಟಗಾರ ಸಂಪೂರ್ಣ ವಿಫಲರಾದರು. ಈ ಆಟಗಾರ ಬಹಳ ಸಮಯದ ನಂತರ ತಂಡಕ್ಕೆ ಮರಳಿದ್ದರು, ಆದರೆ ಅವರು ತಮ್ಮ ಆಟ ಪ್ರದರ್ಶಿಸಲು ವಿಫಲರಾದರು.

ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 67 ರನ್ ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ನಾಯಕ ರೋಹಿತ್ ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್ ಮತ್ತು ಮೊಹಮ್ಮದ್ ಶಮಿಯನ್ನು ವೇಗದ ಬೌಲರ್‌ಗಳಾಗಿ ಸೇರಿಸಿದರು. ಮೊಹಮ್ಮದ್ ಸಿರಾಜ್ ಮತ್ತು ಉಮ್ರಾನ್ ಮಲಿಕ್ ಈ ಪಂದ್ಯದಲ್ಲಿ ಭಾರತದ ಅತ್ಯಂತ ಯಶಸ್ವಿ ಬೌಲರ್‌ಗಳಾಗಿದ್ದರು, ಆದರೆ ಮೊಹಮ್ಮದ್ ಶಮಿ ಅವರ ಅಭಿಮಾನಿಗಳನ್ನು ಬಹಳಷ್ಟು ನಿರಾಸೆಗೊಳಿಸಿದರು. ಈ ಪಂದ್ಯದಲ್ಲಿ ಮೊಹಮ್ಮದ್ ಶಮಿ ಭಾರತದ ಅತ್ಯಂತ ದುಬಾರಿ ಬೌಲರ್ ಆಗಿದ್ದರು.

ಇದನ್ನೂ ಓದಿ : IND vs SL: ಸಿಕ್ಕ ಸುವರ್ಣಾವಕಾಶ ಹಾಳು ಮಾಡಿಕೊಂಡ್ರು ಈ ಆಟಗಾರ! ಮೊದಲ ಪಂದ್ಯದಲ್ಲೇ ಹೊರೆಯಾದ್ರಾ?

ಭುಜದ ನೋವಿನಿಂದಾಗಿ ಮೊಹಮ್ಮದ್ ಶಮಿ ತಂಡದಿಂದ ಹೊರನಡೆದಿದ್ದರು. 2022 ರ ಟಿ 20 ವಿಶ್ವಕಪ್ ನಂತರ ತರಬೇತಿ ಅವಧಿಯಲ್ಲಿ ಅವರು ಗಾಯಗೊಂಡರು. ಈ ಸರಣಿಯಿಂದ ತಂಡಕ್ಕೆ ಮರಳಿದ್ದಾರೆ. ಈ ಪಂದ್ಯದಲ್ಲಿ 10 ಓವರ್‌ಗಳನ್ನು ಬೌಲಿಂಗ್ ಮಾಡುವಾಗ, ಮೊಹಮ್ಮದ್ ಶಮಿ 7.44 ರ ಓವರ್‌ನಲ್ಲಿ 67 ರನ್‌ಗಳನ್ನು ನೀಡಿದರು ಮತ್ತು ಕೇವಲ ಒಂದು ವಿಕೆಟ್ ಪಡೆದರು. 

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 373 ರನ್ ಗಳಿಸಿತು. ಈ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಭಾರತದ ಪರ ಗರಿಷ್ಠ 113 ರನ್ ಗಳಿಸಿದರೆ, ನಾಯಕ ರೋಹಿತ್ ಶರ್ಮಾ 83 ರನ್ ಗಳಿಸಿದರು. ಇವರಲ್ಲದೆ ಶುಭಮನ್ ಗಿಲ್ 70 ರನ್ ಮತ್ತು ಕೆಎಲ್ ರಾಹುಲ್ 39 ರನ್ ಗಳಿಸಿದರು. ಈ ಗುರಿಗೆ ಉತ್ತರವಾಗಿ ಶ್ರೀಲಂಕಾ ತಂಡ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 306 ರನ್ ಗಳಿಸಲಷ್ಟೇ ಶಕ್ತವಾಯಿತು. ಟೀಂ ಇಂಡಿಯಾ ಪರ ಉಮ್ರಾನ್ ಮಲಿಕ್ ಗರಿಷ್ಠ 3, ಮೊಹಮ್ಮದ್ ಸಿರಾಜ್ 2 ಹಾಗೂ ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ, ಯುಜ್ವೇಂದ್ರ ಚಹಾಲ್ ತಲಾ 1 ವಿಕೆಟ್ ಪಡೆದರು. 

ಇದನ್ನೂ ಓದಿ : IND vs SL 1st ODI Live : ಟೀಂ ಇಂಡಿಯಾಗೆ ಎರಡನೇ ಗೆಲವು ಖಚಿತ : ಎರಡು ವಿಕೆಟ್ ಪಡೆದ ಸಿರಾಜ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News