Lukcy Zodiac Sign For Partner: ನಮ್ಮ ಅಕ್ಕಪಕ್ಕದಲ್ಲಿ ಹಲವು ಜನರಿದ್ದು, ಈ ಜನರು ಕೇವಲ ತಮ್ಮ ಪಾಲಿಗೆ ಅಷ್ಟೇ ಅಲ್ಲ ಇತರರ ಪಾಲಿಗೂ ಕೂಡ ತುಂಬಾ ಲಕ್ಕಿ ಸಬೀತಾಗುತ್ತಾರೆ. ಅಂತಹ ಕೆಲ ರಾಶಿಗಳ ಜನರನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ, ಈ ಜನರು ಇತರರಿಗೆ ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಈ ಜನರು ಯಾರೊಂದಿಗೆ ಮದುವೆಯಾಗುತ್ತಾರೆ, ಅವರ ಅದೃಷ್ಟವೂ ಹೊಳೆಯುತ್ತದೆ. ಈ ಜನರ ಬಳಿ ಹಣ ಮತ್ತು ಧಾನ್ಯಗಳ ಕೊರತೆ ಎಂದಿಗೂ ಕೂಡ ಇರುವುದಿಲ್ಲ. ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,
ಕರ್ಕ ರಾಶಿ
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ರಾಶಿಗಳ ಜನರ ಸ್ವಭಾವವು ಸೌಮ್ಯವಾಗಿರುತ್ತದೆ. ಇವರು ಇತರರ ಬಗ್ಗೆ ಕಾಳಜಿ ಕೂಡ ವಹಿಸುತ್ತಾರೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ಜನರು ತಮಗಿಂತ ಇತರರಿಗೆ ಹೆಚ್ಚು ಅದೃಷ್ಟವಂತರೆಂದು ಸಾಬೀತಾಗುತ್ತಾರೆ. ಕರ್ಕ ರಾಶಿಯವರ ವಿವಾಹದ ನಂತರ, ತಮ್ಮ ಸಂಗಾತಿಯು ವೃತ್ತಿಜೀವನದ ಬೆಳವಣಿಗೆಗೆ ಕಾರಣರಾಗುತ್ತಾರೆ. ಅವರು ಸ್ವಭಾವತಃ ತುಂಬಾ ಭಾವನಾತ್ಮಕರು. ಅಷ್ಟೇ ಅಲ್ಲ, ಈ ಜನರು ಇತರರ ಭಾವನೆಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ.
ಸಿಂಹ ರಾಶಿ
ಈ ರಾಶಿಯವರು ಇತರರಿಗೂ ಅದೃಷ್ಟವಂತರು ಎನ್ನುತ್ತಾರೆ ಜ್ಯೋತಿಷಿಗಳು. ಈ ಜನರು ತಮ್ಮ ಸ್ವಂತ ಎಂದು ಪರಿಗಣಿಸುವ ವ್ಯಕ್ತಿಯ ಅದೃಷ್ಟವನ್ನು ಬೆಳಗುತ್ತಾರೆ. ಇವರೊಂದಿಗೆ ಸಂಬಂಧ ಹೊಂದಿರುವ ಜನರು ಕೂಡ ಜೀವನದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸುತ್ತಾರೆ. ಈ ರಾಶಿಯ ವ್ಯಕ್ತಿಯು ಏನು ಮಾಡಲು ನಿರ್ಧರಿಸಿದರೂ, ಅವರು ಅದನ್ನು ಪೂರ್ಣ ಪ್ರಾಮಾಣಿಕತೆಯಿಂದ ಪೂರ್ಣಗೊಳಿಸುತ್ತಾರೆ. ಅವರೊಳಗಿನ ಶಕ್ತಿಯು ಇತರ ಜನರನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ.
ಧನು ರಾಶಿ
ಧನು ರಾಶಿಯ ಜನರು ತುಂಬಾ ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಈ ಜನರ ಸಂಪರ್ಕಕ್ಕೆ ಬಂದವರು ತಮ್ಮ ಅದೃಷ್ಟವನ್ನು ಪಡೆಯುತ್ತಾರೆ. ಇವರಿಗೆ ಅದೃಷ್ಟದ ಬೆಂಬಲವನ್ನು ಸಿಗದೇ ಇರಬಹುದು, ಆದರೆ ಇವರ ಜೊತೆಗೆ ಸಂಪರ್ಕವನ್ನು ಹೊಂದಿರುವ ಜನರು ಖಂಡಿತವಾಗಿಯೂ ಪ್ರಗತಿ ಸಾಧಿಸುತ್ತಾರೆ. ಧನು ರಾಶಿಯ ಜನರು ಯಾರನ್ನು ಮದುವೆಯಾಗುತ್ತಾರೋ ಅವರ ಭವಿಷ್ಯವನ್ನೇ ಬದಲಾಯಿಸುತ್ತಾರೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ-Shani Auspicious Effect: ಶನಿಯ ಶುಭ ದೆಸೆ ಇದ್ದರೆ ಜೀವನದಲ್ಲಿ ಏನೆಲ್ಲಾ ಸಿಗುತ್ತದೆ ಗೊತ್ತಾ
ಕುಂಭ ರಾಶಿ
ಕುಂಭ ರಾಶಿಯವರು ಜೀವನದಲ್ಲಿ ಯಶಸ್ಸನ್ನು ಪಡೆಯಲು ಸಾಕಷ್ಟು ಶ್ರಮಿಸಬೇಕು. ಜೀವನದಲ್ಲಿ ಅನೇಕ ಬಾರಿ ಅದೃಷ್ಟ ಅವರಿಗೆ ಒಲವು ತೋರುವುದಿಲ್ಲ. ಆದರೆ ಇತರರಿಗೆ ಈ ಜನರು ಅದೃಷ್ಟವಂತರು ಎಂದು ಪರಿಗಣಿಸಲಾಗುತ್ತದೆ. ಯಾರೊಂದಿಗೆ ಬೆರೆಯುತ್ತಾರೋ ಅವರು ಬಹಳ ವೇಗವಾಗಿ ಮುನ್ನಡೆಯುತ್ತಾರೆ. ಇದರಿಂದಾಗಿ ಅನೇಕ ಬಾರಿ ಇವರು ಹಿಂದೆ ಉಳಿಯುತ್ತಾರೆ.
ಇದನ್ನೂ ಓದಿ-Relationship Tips: ಸಂಗಾತಿಗೆ ಸರ್ಪ್ರೈಸ್ ಕೊಡಬೇಕೇ? ಈ ಸಲಹೆ ಅನುಸರಿಸಿ, ಪ್ರೀತಿ ಹೆಚ್ಚಾಗುತ್ತೆ
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.