ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಹೊರಡಿಸುವ ಬಗ್ಗೆ ಬಿಜೆಪಿ ಚಿಂತಿಸಿಲ್ಲ -ಕೈಲಾಶ್ ವರ್ಗಿಯಾ

ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಹೊರಡಿಸುವ ಬಗ್ಗೆ ಬಿಜೆಪಿ ಚಿಂತಿಸಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವರ್ಗಿಯಾ ತಿಳಿಸಿದ್ದಾರೆ.

Last Updated : Dec 2, 2018, 03:08 PM IST
ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಹೊರಡಿಸುವ ಬಗ್ಗೆ ಬಿಜೆಪಿ ಚಿಂತಿಸಿಲ್ಲ -ಕೈಲಾಶ್ ವರ್ಗಿಯಾ  title=

ನವದೆಹಲಿ: ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಹೊರಡಿಸುವ ಬಗ್ಗೆ ಬಿಜೆಪಿ ಚಿಂತಿಸಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವರ್ಗಿಯಾ ತಿಳಿಸಿದ್ದಾರೆ.

ಪಿಟಿಗೆ ಅವರು ತಿಳಿಸಿರುವಂತೆ ರಾಮಮಂದಿರವನ್ನು ಬಿಜೆಪಿ ಹೊರತು ಇನ್ನ್ಯಾವುದೇ ಪಕ್ಷಕ್ಕೆ ನಿರ್ಮಿಸಲು ಸಾಧ್ಯವಿಲ್ಲ ಎಂದರು. ಅವರ ಪ್ರಕಾರ, ಪ್ರತಿಪಕ್ಷವು  ಅಲ್ಪಸಂಖ್ಯಾತರ ಮತಗಳನ್ನು ಒಗ್ಗೂಡಿಸಲು ಮತ್ತು ಧ್ರುವೀಕರಣಕ್ಕೆ ಒಳಪಡಿಸಲು ಮಂದಿರ ಒಳ್ಳೆಯದಕ್ಕಿಂತ ಹೆಚ್ಚಿನ ಹಾನಿಯನ್ನು ಉಂಟು ಮಾಡಲಿದೆ ಎನ್ನುವುದನ್ನು ಬಿಂಬಿಸಿದೆ ಎಂದು ಅವರು ತಿಳಿಸಿದರು. 

ಈ ವಿಷಯದ ಕುರಿತು ನಾವು ಮತ್ತೊಮ್ಮೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದೇವೆ.ಈ ವಿವಾದವು ನ್ಯಾಯಾಲಯದಲ್ಲಿದ್ದಾಗ, ನಾವು ಅವಸರ ಮಾಡಬಾರದು ಮತ್ತು ಇದಕ್ಕೆ ನಿರ್ಧಾರ ತೆಗೆದುಕೊಳ್ಳಲು ಸಾಕಷ್ಟು ಸಮಯವನ್ನು ನೀಡಬೇಕು ಎಂದು ಅವರು ತಿಳಿಸಿದರು.

"ಆದರೆ ಜನರ ಆಕಾಂಕ್ಷೆಗಳು ಹೆಚ್ಚಾಗುತ್ತಿದ್ದರೆ, ಸರ್ಕಾರವು ಈ ವಿಚಾರವಾಗಿ ಒಂದು ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಸದ್ಯಕ್ಕೆ ಪಕ್ಷವು ಯಾವುದೇ ಸುಗ್ರೀವಾಜ್ಞೆಯನ್ನು ಹೊರಡಿಸುವ ಬಗ್ಗೆ ಚಿಂತಿಸುತ್ತಿಲ್ಲ ಎಂದು ಅವರು ಪಿಟಿಐಗೆ ತಿಳಿಸಿದರು.

ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದ ಪ್ರಕರಣದಲ್ಲಿ ಅರ್ಜಿಗಳ ಆರಂಭಿಕ ವಿಚಾರಣೆಯನ್ನು ಸುಪ್ರೀಂಕೋರ್ಟ್ ಇತ್ತೀಚೆಗೆ ನಿರಾಕರಿಸಿದೆ. ಮುಂಬರುವ ಜನವರಿಯ ಮೊದಲ ವಾರದದಲ್ಲಿ ವಿಚಾರಣೆಯನ್ನು ಸೂಕ್ತ ಬೆಂಚ್ ಕೈಗೆತ್ತಿಕೊಳ್ಳಲಿದೆ ಎಂದು ಅವರು ತಿಳಿಸಿತ್ತು.

Trending News