ಧರ್ಮವು ಯಾವ ಪಕ್ಷದ ಪಿತ್ರಾರ್ಜಿತ ಆಸ್ತಿಯೂ ಅಲ್ಲ- ಜ್ಯೋತಿರಾದಿತ್ಯ ಸಿಂಧ್ಯ

ಧರ್ಮವು ವೈಯಕ್ತಿಕ ವಿಷಯವಾಗಿದೆ ಅದು ಯಾವ ಪಕ್ಷದ ಪಿತ್ರಾರ್ಜಿತ ಆಸ್ತಿಯಲ್ಲ ಎಂದು ಕಾಂಗ್ರೆಸ್ ಪಕ್ಷದ ನಾಯಕ ಜ್ಯೋತಿರಾದಿತ್ಯ ಸಿಂಧ್ಯ ಅಭಿಪ್ರಾಯಪಟ್ಟಿದ್ದಾರೆ.

Last Updated : Dec 3, 2018, 01:35 PM IST
ಧರ್ಮವು ಯಾವ ಪಕ್ಷದ ಪಿತ್ರಾರ್ಜಿತ ಆಸ್ತಿಯೂ ಅಲ್ಲ- ಜ್ಯೋತಿರಾದಿತ್ಯ ಸಿಂಧ್ಯ title=

ಜೈಪುರ್: ಧರ್ಮವು ವೈಯಕ್ತಿಕ ವಿಷಯವಾಗಿದೆ ಅದು ಯಾವ ಪಕ್ಷದ ಪಿತ್ರಾರ್ಜಿತ ಆಸ್ತಿಯಲ್ಲ ಎಂದು ಕಾಂಗ್ರೆಸ್ ಪಕ್ಷದ ನಾಯಕ ಜ್ಯೋತಿರಾದಿತ್ಯ ಸಿಂಧ್ಯ ಅಭಿಪ್ರಾಯಪಟ್ಟಿದ್ದಾರೆ.

ರಾಹುಲ್ ಗಾಂಧಿ ಅವರು ಅವರ ಪಕ್ಷ ಧರ್ಮ ಮತ್ತು ಜಾತಿ ವಿಚಾರವಾಗಿ ಗೊಂದಲಕ್ಕಿಡಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಹೇಳಿಕೆ ತಿರುಗೇಟು ನೀಡಿರುವ ಜ್ಯೋತಿರಾದಿತ್ಯ ಸಿಂಧ್ಯ ಧರ್ಮವು ವೈಯಕ್ತಿಕ ವಿಷಯವಾಗಿದೆ ಮತ್ತು ಯಾವುದೇ ರಾಜಕೀಯ ಪಕ್ಷದ ಆಸ್ತಿಯೂ ಅಲ್ಲ ಎಂದು ತಿಳಿಸಿದರು.

"ಯಾವುದೇ ವ್ಯಕ್ತಿಯ ಧರ್ಮದ ಬಗೆಗಿನ ನಂಬಿಕೆ ಅವರ ವೈಯಕ್ತಿಕ ವಿಷಯವಾಗಿದ್ದು, ನೀವು ಎಲ್ಲಿ ಹೋಗುತ್ತೀರಿ, ಯಾವ ನಂಬಿಕೆಯನ್ನು ನೀವು ಅನುಸರಿಸುತ್ತೀರಿ, ಅದು ವೈಯಕ್ತಿಕ ವಿಷಯ,ಮತ್ತು ಯಾವುದೇ ಧರ್ಮವು ಒಂದು ರಾಜಕೀಯ ಪಕ್ಷದ ಪಿತ್ರಾರ್ಜಿತ ಆಸ್ತಿಯಲ್ಲ" ಎಂದು ಸಿಂಧಿಯಾ ಸುದ್ದಿಗಾರರಿಗೆ ತಿಳಿಸಿದರು. 

ರಾಮಮಂದಿರ ವಿಷಯದ ಬಗ್ಗೆ ಕಾಂಗ್ರೆಸಿನ ನಿಲುವನ್ನು ಸ್ಪಷ್ಟಪಡಿಸಿದ ಸಿಂಧಿಯಾ, ಈ ಬಗ್ಗೆ ಸುಪ್ರೀಂಕೋರ್ಟ್ ತೀರ್ಮಾನ ಎಲ್ಲರಿಗೂ ಅನ್ವಯವಾಗಲಿದೆ ಮತ್ತು ಅದಕ್ಕೆ ಬದ್ಧವಾಗಿರುವ ಜವಾಬ್ದಾರಿ ಕಾಂಗ್ರೆಸ್ ಪಕ್ಷದ್ದು ಎಂದು ಹೇಳಿದರು.

Trending News