ನವದೆಹಲಿ: ನಾರ್ತ್ ವೆಸ್ಟರ್ನ್ ರೈಲ್ವೇಯಲ್ಲಿ ಎರಡು ಸಾವಿರಕ್ಕಿಂತ ಹೆಚ್ಚು ಉದ್ಯೋಗಾವಕಾಶ ಲಭ್ಯವಿದ್ದು, ನೀವು ರೈಲ್ವೇ ಇಲಾಖೆಯಲ್ಲಿ ಕೆಲಸ ಮಾಡಲು ಬಯಸಿದರೆ, ಸಾಧ್ಯವಾದಷ್ಟು ಬೇಗ ಅರ್ಜಿ ಸಲ್ಲಿಸಿ.
ನಾರ್ತ್ ವೆಸ್ಟರ್ನ್ ರೈಲ್ವೆ ಇಲಾಖೆ 2090 ಹುದ್ದೆಗಳಿಗಾಗಿ ಪ್ರೆಂಟಿಸ್ ಆಕ್ಟ್ 1961 ರ ಅಡಿಯಲ್ಲಿ ಅಪ್ರೆಂಟಿಸ್ ಟ್ರೈನಿಂಗ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಆಸಕ್ತಿ ಮತ್ತು ಅರ್ಹ ಅಭ್ಯರ್ಥಿಗಳು ಡಿಸೆಂಬರ್ 30 ರೊಳಗೆ www.rrcjaipur.in ಗೆ ಭೇಟಿ ನೀಡುವ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ಪೋಸ್ಟ್ಗಳ ವಿವರಗಳು:
ಒಟ್ಟು ಪೋಸ್ಟ್ಗಳು- 2090
ವಿಭಾಗ ಪೋಸ್ಟ್ಗಳ ವಿವರ ಈ ಕೆಳಕಂಡಂತಿವೆ:
- ಅಜ್ಮೇರ್ ವಿಭಾಗ - 420
- ಬಿಕಾನೆರ್ ವಿಭಾಗ 412
- ಜೈಪುರ ವಿಭಾಗ - 503
- ಜೋಧ್ಪುರ ವಿಭಾಗ- 410
- ಬಿಟಿಸಿ ಕ್ಯಾರೇಜ್ (ಅಜ್ಮೀರ್) - 166
- ಬಿಟಿಸಿ ಲೊಕೊ (ಅಜ್ಮೀರ್) - 57
- ಕ್ಯಾರೇಜ್ ಕಾರ್ಯಾಗಾರ (ಬಿಕಾನೆರ್) - 37
- ಕ್ಯಾರೇಜ್ ವರ್ಕ್ಷಾಪ್ (ಜೋಧ್ಪುರ) - 85
ಅರ್ಹತೆ:
ಅಭ್ಯರ್ಥಿಗಳು 50% ಅಂಕಗಳನ್ನು ಹೊಂದಿರಬೇಕು ಅಥವಾ ಹತ್ತನೆ ತರಗತಿ ಪಾಸ್ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಇದರ ಜೊತೆಗೆ, ಅಭ್ಯರ್ಥಿಯು NCVT/SCVT ಯಿಂದ ನೀಡುವ ಐಟಿಐ ಅಥವಾ ಅದರ ಸಮಾನತೆಯ ರಾಷ್ಟ್ರೀಯ ವಾಣಿಜ್ಯೋದ್ಯಮ ಪ್ರಮಾಣಪತ್ರದಲ್ಲಿ ಹೊಂದಿರಬೇಕು.
ವಯೋಮಿತಿ:
ಅಭ್ಯರ್ಥಿಯ ವಯಸ್ಸು ಡಿಸೆಂಬರ್ 30, 2018ರ ಒಳಗೆ 15 ವರ್ಷ ತುಂಬಿರಬೇಕು 24 ವರ್ಷ ಮೀರಿರಬಾರದು. ಮೀಸಲಾತಿ ವಿಭಾಗದ ಅಭ್ಯರ್ಥಿಗಳು ಸರ್ಕಾರದ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯಲ್ಲಿ ವಿಶ್ರಾಂತಿ ಪಡೆಯುತ್ತಾರೆ.
ಅರ್ಜಿ ಶುಲ್ಕ:
ಸಾಮಾನ್ಯ ಮತ್ತು ಒಬಿಸಿ ವರ್ಗದವರಿಗೆ ಅರ್ಜಿ ಶುಲ್ಕ 100 ರೂ. SC / ST/ದಿವ್ಯಾಂಗರು/ ಮಹಿಳೆಯರಿಗೆ ಯಾವುದೇ ಶುಲ್ಕವಿಲ್ಲ.
ಆಯ್ಕೆ ಪ್ರಕ್ರಿಯೆ:
10ನೇ ತರಗತಿಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ(ಮೆರಿಟ್ ಮೇರೆಗೆ) ಡಾಕ್ಯುಮೆಂಟ್ ಪರಿಶೀಲನೆಯ ನಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಹೀಗೆ ಅರ್ಜಿ ಸಲ್ಲಿಸಿ:
ಆಸಕ್ತ ಅಭ್ಯರ್ಥಿಗಳು ನಾರ್ಥ್ ವೆಸ್ಟರ್ನ್ ರೈಲ್ವೆಯ ಅಧಿಕೃತ www.rrcjaipur.in ಗೆ ಭೇಟಿ ನೀಡುವ ಮೂಲಕ ಈ ಹುದ್ದೆಗಳಿಗೆ ಡಿಸೆಂಬರ್ 30, ಸಂಜೆ 5 ಗಂಟೆವರೆಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಡಿಸೆಂಬರ್ 30, 2018