Breastfeeding Benefits For Child And Mother: ತಾಯಿಯ ಹಾಲು ಮಗುವಿಗೆ ಉತ್ತಮ ಆಹಾರ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಅದಕ್ಕಾಗಿಯೇ ಪ್ರತಿಯೊಬ್ಬ ವೈದ್ಯರು ಮಗುವಿಗೆ ಹಾಲುಣಿಸಲು ಸೂಚಿಸುತ್ತಾರೆ. ತಾಯಿಯ ಹಾಲು ಮಗುವಿನ ಬೆಳವಣಿಗೆಗೆ ಅಗತ್ಯವಾದ ಎಲ್ಲಾ ಪೋಷಕಾಂಶಗಳನ್ನು ನೀಡುತ್ತದೆ. ಜನನದ ನಂತರದ ಮೊದಲ 6 ತಿಂಗಳವರೆಗೆ ಮಗು ಪೌಷ್ಟಿಕಾಂಶಕ್ಕಾಗಿ ಹಾಲಿನ ಮೇಲೆ ಮಾತ್ರ ಅವಲಂಬಿತವಾಗಿರುತ್ತದೆ. ಆದರೆ ಸ್ತನ್ಯಪಾನವು ಏಕೆ ಮುಖ್ಯವಾಗಿದೆ ಎಂದು ನಿಮಗೆ ತಿಳಿದಿದೆಯೇ? ಇದು ಮಗುವಿಗೆ ಮಾತ್ರವಲ್ಲದೆ ತಾಯಿಗೂ ಪ್ರಯೋಜನಕಾರಿಯಾಗಿದೆ ಎಂದು ನಿಮಗೆ ಗೊತ್ತಾ?.
ಹುಟ್ಟಿನಿಂದಲೇ ಹಾಲುಣುವ ಮಗುವಿನ ದೇಹದಲ್ಲಿ ಸೋಂಕಿನ ಅಪಾಯವನ್ನು ಕಡಿಮೆ ಇರುತ್ತದೆ. ಅಷ್ಟೇ ಅಲ್ಲದೆ, ಕಿವಿ ಮತ್ತು ಉಸಿರಾಟದ ಕಾಯಿಲೆಗಳು ಸಂಭವಿಸುವುದಿಲ್ಲ. ಮಧುಮೇಹ, ಅಲರ್ಜಿ, ಅಸ್ತಮಾ ಮತ್ತು ಎಸ್ಜಿಮಾದಿಂದಲೂ ರಕ್ಷಣೆ ಸಿಗುತ್ತದೆ.
ಸ್ತನ್ಯಪಾನದಿಂದಾಗಿ, ನವಜಾತ ಶಿಶುವಿನ ಒಟ್ಟಾರೆ ದೇಹದ ಬೆಳವಣಿಗೆ ಉತ್ತಮವಾಗಿ ಇರುತ್ತದೆ. ಸಾಮಾನ್ಯವಾಗಿ ಜನನದ ಸಮಯದಲ್ಲಿ ಮಗುವಿನ ತೂಕವು ತುಂಬಾ ಕಡಿಮೆಯಿರುತ್ತದೆ. ಇದರ ನಂತರ ಹಾಲುಣಿಸುವ ಅಭ್ಯಾಸವನ್ನು ಮಾಡಿದರೆ, ನಂತರ ತೂಕವನ್ನು ಹೆಚ್ಚಿಸಬಹುದು.
ಮಗುವಿಗೆ ನಿಯಮಿತವಾಗಿ ಎದೆಹಾಲು ನೀಡಿದರೆ, ಮೆದುಳು ಸರಿಯಾಗಿ ಬೆಳೆಯುತ್ತದೆ. ಬಾಲ್ಯದಲ್ಲಿ ಎದೆಹಾಲು ಕುಡಿಸುವ ಶಿಶುಗಳು ಚುರುಕಾಗಿರುತ್ತಾರೆ ಎಂಬುದು ಹಲವು ಸಂಶೋಧನೆಗಳಲ್ಲಿ ಸಾಬೀತಾಗಿದೆ.
ತಾಯಿಯಾದ ನಂತರ ಪ್ರತಿ ಮಹಿಳೆ ತನ್ನ ಮಗುವಿಗೆ ಹಾಲುಣಿಸುವುದು ಅವಶ್ಯಕ. ಏಕೆಂದರೆ ಇದು ತಾಯಿಗೆ ಪ್ರಯೋಜನಕಾರಿಯಾಗಿದೆ. ಈ ಕಾರಣದಿಂದಾಗಿ, ತಾಯಂದಿರಲ್ಲಿ ಗರ್ಭಾಶಯದ ಕ್ಯಾನ್ಸರ್ ಅಪಾಯವು ಕಡಿಮೆಯಾಗುತ್ತದೆ. ಜೊತೆಗೆ ಅವರ ತೂಕ ಸಹ ನಿರ್ವ ಹಣೆಗೆ ಬರುತ್ತದೆ.
(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)