urfi javed : ಮಾಡೇಲ್, ಬಿಗ್ ಬಾಸ್ ಖ್ಯಾತಿಯ ಉರ್ಫಿ ಜಾವೇದ್ ತಮ್ಮ ಡಿಫರೆಂಟ್ ನೋಟದಿಂದಲೇ ಇಂಟರ್‌ನೆಟ್ ಸೆನ್ಸೇಷನ್ ಆಗಿದ್ದಾರೆ. ಇದೀಗ ಪುರಾತನ ಕಾಲದಲ್ಲಿ ಮಹಿಳೆಯರು ತೊಡುತ್ತಿದ್ದ ಬಟ್ಟೆಯ ಬಗ್ಗೆ ಮಾತನಾಡಿರುವ ಉರ್ಫಿ ತಮ್ಮನ್ನು ವಿರೋಧಿಸಿದ್ದ ಬಿಜೆಪಿ ಸಂಸದೆಗೆ ಇತಿಹಾಸದ ಪಾಠ ಮಾಡಿದ್ದಾರೆ. ಅಲ್ಲದೆ, ಈ ಕುರಿತು ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ಉರ್ಫಿ ತಮ್ಮ ಎದೆಯನ್ನು ರೆಕ್ಕೆಗಳಿಂದ ಮುಚ್ಚಿಕೊಂಡಿದ್ದು, ಆ ವಿಡಿಯೋ ಸಹ ವೈರಲ್ ಆಗಿದೆ.
ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಮತ್ತು ವಿಡಿಯೋ ಹಂಚಿಕೊಂಡಿದ್ದಾರೆ. ಉರ್ಫಿ ವಿಡಿಯೋ ನೋಡಿದ ನೆಟಿಜನ್‌ಗಳು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಅವರಲ್ಲಿ ಒಬ್ಬರು, "ಪ್ರತಿ ಮಹಿಳೆಗೆ ಸ್ವಾತಂತ್ರ್ಯದ ರೆಕ್ಕೆಗಳಿವೆ, ಅವಳು ಮಾತ್ರ ಅವುಗಳನ್ನು ಹರಡಬೇಕು. ಅವಳ ಕನಸುಗಳನ್ನು ನನಸಾಗಿಸಬೇಕು, ಸೂಪರ್ ಉರ್ಫಿ ಸಿಸ್ʼ ಎಂದು ಬರೆದಿದ್ದಾರೆ. ಅಲ್ಲದೆ, ʼಅಸ್ಲಿ ಪಠಾಣ್ ಇಲ್ಲೆ ಇದಾಳೆ, ಉಳಿದಿದ್ದೆಲ್ಲ ಮೋಸʼ ಅಂತ ನೆಟ್ಟಿಗರೊಬ್ಬರು ಕಾಲೆಳೆದಿದ್ದಾರೆ. ಇನನ್ನೊಬ್ಬ "ಫೈರ್ ಫೋಟೋ ಅಂತ ಉರ್ಫಿ ಅವತಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ.
This is how ancient Hindu women used to dress . Hindus were liberal , educated , women were allowed to choose their clothes , actively participated in sports, politics . They were sex and females body positive people. Go learn about Bhartiya Sanskriti first. pic.twitter.com/IeH1tHcEFG
— Uorfi (@uorfi_) January 14, 2023
ಇದನ್ನೂ ಓದಿ: Miss Universe 2022 : ಯುಸ್‌ನ ಚೆಲುವೆಯ ಮುಡಿಗೆ ಭುವನ ಸುಂದರಿ ಕಿರೀಟ, ಭಾರತದ ದಿವಿತಾ ರೈಗೆ ನಿರಾಸೆ
ಪ್ರಾಚೀನ ಹಿಂದೂ ಸಂಸ್ಕೃತಿ ಬಗ್ಗೆ ತಿಳಿದುಕೊಳ್ಳಿ : ಇತ್ತೀಚೆಗಷ್ಟೇ ಉರ್ಫಿ ಜಾವೇದ್ ವಿರುದ್ದ ಬಿಜೆಪಿ ನಾಯಕಿ ಚಿತ್ರಾ ಕಿಶೋರ್ ಅವರು ದೂರು ದಾಖಲಿಸಿದ್ದರು. ಇದಕ್ಕೆ ಉರ್ಫಿ, ನಗ್ನತೆಯನ್ನು ಹರಡುತ್ತಿದ್ದಾರೆ ಎಂದು ಆರೋಪಿಸುವ ಮೊದಲು ಬಿಜೆಪಿ ನಾಯಕಿ ಪ್ರಾಚೀನ ಹಿಂದೂ ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಬೇಕು ಅಂತ ತಕ್ಕ ಉತ್ತರ ನೀಡಿದ್ದರು. ಅಲ್ಲದೆ, ಹಿಂದೂಗಳು ಉದಾರವಾದಿಗಳು, ವಿದ್ಯಾವಂತರು, ಮಹಿಳೆಯರಿಗೆ ಬಟ್ಟೆಗಳನ್ನು ಆಯ್ಕೆ ಮಾಡಲು ಸ್ವತಂತ್ರ ನೀಡಿದ್ದರು ಅಂತ ಹೇಳಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಾಚೀನ ಶಿಲೆಯ ಫೋಟೋ ಹಂಚಿಕೊಂಡಿದ್ದರು.
ಅಲ್ಲದೆ, ಲೈಂಗಿಕತೆ ಮತ್ತು ಸ್ತ್ರೀ ದೇಹ ಧನಾತ್ಮಕ ವ್ಯಕ್ತಿಗಳಾಗಿದ್ದರು. ಮೊದಲು ಭಾರತೀಯ ಸಂಸ್ಕೃತಿಯ ಬಗ್ಗೆ ಕಲಿಯಿರಿ ಎಂದು ಹೇಳಿದ್ದರು. ಬಿಜೆಪಿ ನಾಯಕಿ ಚಿತ್ರಾ ಅವರು, ಉರ್ಫಿ ಜಾವೇದ್ ಅವರ ಡ್ರೆಸ್ಸಿಂಗ್ ಸೆನ್ಸ್‌ಗೆ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ಮಹಿಳಾ ಆಯೋಗವು ಏನಾದರೂ ಮಾಡುತ್ತದೆಯೇ ಅಥವಾ ಇಲ್ಲವೇ ಎಂದು ಪ್ರಶ್ನೆ ಮಾಡಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.