ʼUSAನಲ್ಲಿ ಮೆಗಾಸ್ಟಾರ್‌ ಅಬ್ಬರʼ : 1 ಮಿಲಿಯನ್‌ ಡಾಲರ್‌ ಗಡಿ ದಾಟಿದ ವಾಲ್ಟೇರ್‌ ವೀರಯ್ಯ..!

ಮೆಗಾಸ್ಟಾರ್‌ ಚಿರಂಜೀವಿ ನಟಿಸಿರುವ ತೆಲುಗು ಆಕ್ಷನ್-ಪ್ಯಾಕ್ಡ್ ಎಂಟರ್‌ಟೈನರ್ ʼವಾಲ್ಟೇರ್ ವೀರಯ್ಯʼ ಜನವರಿ 13 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಅಬ್ಬರಿಸುತ್ತಿದೆ. ಇದು ಜನವರಿ 12, ಒಂದು ದಿನ ಮುಂಚಿತವಾಗಿ ಥಿಯೇಟರ್‌ಗಳಲ್ಲಿ ಬಂದ ನಂದಮೂರಿ ಬಾಲಕೃಷ್ಣ ಅಭಿನಯದ ವೀರ ಸಿಂಹ ರೆಡ್ಡಿಯೊಂದಿಗೆ ಮೆಗಾ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಪೈಪೋಟಿ ಶುರು ಮಾಡಿವೆ. ಎರಡೂ ಚಿತ್ರಗಳನ್ನು ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ.

Written by - Krishna N K | Last Updated : Jan 15, 2023, 07:08 PM IST
  • ಮೆಗಾಸ್ಟಾರ್‌ ಚಿರಂಜೀವಿ ನಟಿಸಿರುವ ತೆಲುಗು ಆಕ್ಷನ್-ಪ್ಯಾಕ್ಡ್ ಎಂಟರ್‌ಟೈನರ್ ʼವಾಲ್ಟೇರ್ ವೀರಯ್ಯʼ̤
  • ಜನವರಿ 13 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಅಬ್ಬರಿಸುತ್ತಿದೆ.
  • USA ಬಾಕ್ಸ್ ಆಫೀಸ್‌ನಲ್ಲಿ ಈ ಚಿತ್ರವು $1 ಮಿಲಿಯನ್ ಗಡಿ ದಾಟಿದೆ.
ʼUSAನಲ್ಲಿ ಮೆಗಾಸ್ಟಾರ್‌ ಅಬ್ಬರʼ : 1 ಮಿಲಿಯನ್‌ ಡಾಲರ್‌ ಗಡಿ ದಾಟಿದ ವಾಲ್ಟೇರ್‌ ವೀರಯ್ಯ..! title=

Waltair Veerayya box office collection day 2 : ಮೆಗಾಸ್ಟಾರ್‌ ಚಿರಂಜೀವಿ ನಟಿಸಿರುವ ತೆಲುಗು ಆಕ್ಷನ್-ಪ್ಯಾಕ್ಡ್ ಎಂಟರ್‌ಟೈನರ್ ʼವಾಲ್ಟೇರ್ ವೀರಯ್ಯʼ ಜನವರಿ 13 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಅಬ್ಬರಿಸುತ್ತಿದೆ. ಇದು ಜನವರಿ 12, ಒಂದು ದಿನ ಮುಂಚಿತವಾಗಿ ಥಿಯೇಟರ್‌ಗಳಲ್ಲಿ ಬಂದ ನಂದಮೂರಿ ಬಾಲಕೃಷ್ಣ ಅಭಿನಯದ ವೀರ ಸಿಂಹ ರೆಡ್ಡಿಯೊಂದಿಗೆ ಮೆಗಾ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಪೈಪೋಟಿ ಶುರು ಮಾಡಿವೆ. ಎರಡೂ ಚಿತ್ರಗಳನ್ನು ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ.

ಬಾಬಿ ಕೊಳ್ಳಿ ಎಂದೇ ಖ್ಯಾತರಾಗಿರುವ ಕೆ ಎಸ್ ರವೀಂದ್ರ ನಿರ್ದೇಶನದ ʼವಾಲ್ಟೇರ್‌ ವೀರಯ್ಯʼ ಚಿತ್ರವು ಶ್ರುತಿ ಹಾಸನ್, ರವಿತೇಜ, ಪ್ರಕಾಶ್ ರಾಜ್, ಕ್ಯಾಥರೀನ್ ತ್ರೇಸಾ, ಬಾಬಿ ಸಿಂಹ, ಸತ್ಯರಾಜ್, ರಾಜೇಂದ್ರ ಪ್ರಸಾದ್, ಮತ್ತು ನಾಸರ್ ಅವರನ್ನೊಳಗೊಂಡಿದೆ. ಊರ್ವಶಿ ರೌಟೇಲಾ ಕೂಡ ಈ ಚಿತ್ರದಲ್ಲಿ ಬಾಸ್ ಪಾರ್ಟಿ ಎಂಬ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

 
 
 
 

 
 
 
 
 
 
 
 
 
 
 

A post shared by Mythri Movie Makers (@mythriofficial)

ಇದನ್ನೂ ಓದಿ: Arjun Janya : 'ಲವ್ ಯು ಗಾಡ್ ಫಾದರ್' ಎಂದು ಕಿಚ್ವನಿಗೆ ವಿಶೇಷ ಗಿಫ್ಟ್ ನೀಡಿದ ಅರ್ಜುನ್ ಜನ್ಯ!

USA ಬಾಕ್ಸ್ ಆಫೀಸ್‌ನಲ್ಲಿ ಈ ಚಿತ್ರವು $1 ಮಿಲಿಯನ್ ಗಡಿ ದಾಟಿದೆ. ಭಾರತ ಮತ್ತು ವಿದೇಶಗಳಲ್ಲಿ ಮೆಗಾಸ್ಟಾರ್‌ ಸಿನಿಮಾ ಅಬ್ಬರ ಜೋರಾಗಿದೆ. ಇನ್ನು ಯುಎಸ್‌ಎ ಬಾಕ್ಸ್‌ ಆಫೀಸ್‌ ಕುರಿತು ಮೈತ್ರಿ ಮೂವೀ ಮೇಕರ್ಸ್‌ ತಮ್ಮ ಸಾಮಾಜಿಕ ಜಾಲತಾನದಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಸಂಭ್ರಮಾಚರಣೆ ಮಾಡಿದ್ದಾರೆ. ʼವಾಲ್ಟೇರ್ ವೀರಯ್ಯ, ಮೆಗಾ ಮಾಸ್ ಬ್ಲಾಕ್‌ಬಸ್ಟರ್, US ಬಾಕ್ಸ್ ಆಫೀಸ್ ಪೀಸ್‌ ಪೀಸ್‌, ಎನ್ನುವ ಶೀರ್ಷಿಕೆಯನ್ನೂ ಸಹ ನೀಡಿದ್ದಾರೆ.

ಇಂಡಿಯನ್‌ ಬಾಕ್ಸ್‌ ಆಫೀಸ್‌ ವಿಚಾರಕ್ಕೆ ಬಂದ್ರೆ, ಚಿರಂಜೀವಿ-ನಟಿಸಿದ ಚಿತ್ರವು ತನ್ನ ಮೊದಲ ದಿನ ಥಿಯೇಟ್ರಿಕಲ್ ಬಿಡುಗಡೆಯಲ್ಲಿ ರೂ 29.6 ಕೋಟಿ ಗಳಿಸುವ ಮೂಲಕ ಭಾರತದಲ್ಲಿ ಬೃಹತ್ ಓಪನಿಂಗ್ ಪಡೆದುಕೊಂಡಿತು. ಎರಡನೇ ದಿನದಲ್ಲಿ ರೂ 19.8 ಕೋಟಿ ಗಳಿಸಿತು. ಎರಡು ದಿನಗಳ ಒಟ್ಟು ಇಂಡಿಯಾ ನೆಟ್ ಕಲೆಕ್ಷನ್ ರೂ.49.40 ಕೋಟಿ. ( ವ್ಯಾಪಾರ ಟ್ರ್ಯಾಕಿಂಗ್ ವೆಬ್‌ಸೈಟ್ Sacnilk.com ಪ್ರಕಾರ) ಆಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News