Arjun Janya : 'ಲವ್ ಯು ಗಾಡ್ ಫಾದರ್' ಎಂದು ಕಿಚ್ವನಿಗೆ ವಿಶೇಷ ಗಿಫ್ಟ್ ನೀಡಿದ ಅರ್ಜುನ್ ಜನ್ಯ!

ಕಿಚ್ವ ಸುದೀಪ್ ಚಿತ್ರರಂಗದಲ್ಲಿ ಅದೆಷ್ಟೋ ಮಂದಿಗೆ ಇನ್ಸ್ ಪೈರ್ ಆಗಿರುವ ಉದಾಹರಣೆ ಹಲವುಇದೆ. ಎಲ್ಲರಿಗೂ ತಿಳಿದಂತೆ ಕನ್ನಡದ ಹೆಸರಾಂತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್  ರವರ ಬಾಂಧವ್ಯ ಎಂತ್ತದ್ದು ಎಂಬುದು ಇಡೀ ಕನ್ನಡಿಗರಿಗೆ ತಿಳಿದಿರುವ ವಿಷಯ. ನನ್ನ ಸಿನಿ ಜರ್ನಿಗೆ ಇನ್ಸ್ ಪೈರ್, ಗಾಡ್ ಫಾದರ್ ಅಂದ್ರೆ ಅದೂ ಸುದೀಪ್ ರವರೇ ಎಂದು ಹಲವು ಕಾರ್ಯಕ್ರಮಗಳಲ್ಲಿ ಅರ್ಜುನ್ ಜನ್ಯ ಹಲವು ಬಾರಿ ಹೇಳಿಕೊಂಡಿದ್ದಾರೆ. 

Written by - K Karthik Rao | Last Updated : Jan 15, 2023, 06:27 PM IST
  • ಕಿಚ್ವ ಸುದೀಪ್ ಚಿತ್ರರಂಗದಲ್ಲಿ ಅದೆಷ್ಟೋ ಮಂದಿಗೆ ಇನ್ಸ್ ಪೈರ್
  • ಅರ್ಜುನ್ ಜನ್ಯ ಕಿಚ್ಚ ಸುದೀಪ್ ಗೆ ನೀಡಿರುವ ಉಡುಗರೆ
  • ಸಂತಸವನ್ನು ಟ್ವಿಟರ್ ಖಾತೆಯಲ್ಲಿ ವಿಡಿಯೋ ಮೂಲಕ ಹಂಚಿಕೊಂಡಿರುವ ಜನ್ಯ
Arjun Janya : 'ಲವ್ ಯು ಗಾಡ್ ಫಾದರ್' ಎಂದು ಕಿಚ್ವನಿಗೆ ವಿಶೇಷ ಗಿಫ್ಟ್ ನೀಡಿದ ಅರ್ಜುನ್ ಜನ್ಯ! title=

Arjun Janya Gift to Sudeep : ಕಿಚ್ವ ಸುದೀಪ್ ಚಿತ್ರರಂಗದಲ್ಲಿ ಅದೆಷ್ಟೋ ಮಂದಿಗೆ ಇನ್ಸ್ ಪೈರ್ ಆಗಿರುವ ಉದಾಹರಣೆ ಹಲವುಇದೆ. ಎಲ್ಲರಿಗೂ ತಿಳಿದಂತೆ ಕನ್ನಡದ ಹೆಸರಾಂತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್  ರವರ ಬಾಂಧವ್ಯ ಎಂತ್ತದ್ದು ಎಂಬುದು ಇಡೀ ಕನ್ನಡಿಗರಿಗೆ ತಿಳಿದಿರುವ ವಿಷಯ. ನನ್ನ ಸಿನಿ ಜರ್ನಿಗೆ ಇನ್ಸ್ ಪೈರ್, ಗಾಡ್ ಫಾದರ್ ಅಂದ್ರೆ ಅದೂ ಸುದೀಪ್ ರವರೇ ಎಂದು ಹಲವು ಕಾರ್ಯಕ್ರಮಗಳಲ್ಲಿ ಅರ್ಜುನ್ ಜನ್ಯ ಹಲವು ಬಾರಿ ಹೇಳಿಕೊಂಡಿದ್ದಾರೆ. 

ಈಗ ಈ ಬಾಂಧವ್ಯಕ್ಕೆ ಮತ್ತೊಂದು ಮೆರಗು ಬಂದಿದೆ. ಹೌದು, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಕಿಚ್ಚ ಸುದೀಪ್ ಗೆ ನೀಡಿರುವ ಉಡುಗರೆ ಇದೀಗ ಎಲ್ಲರ ಗಮನ ಸೆಳೆದಿದೆ. ಸುದೀಪ್ ಫ್ಯಾಷನ್ ಗೆ ಹೆಸರುವಾಸಿ ಯಾದವರು. ಅದೆಷ್ಟೋ ಫ್ಯಾನ್ಸ್ ಗೆ ಇವರು ಸ್ಟೈಲ್ ಐಕಾನ್ ಆಗಿದ್ದಾರೆ. ಅದ್ರಲ್ಲೂ ತಾವು ಉಡುವು ಬಟ್ಟೆಗಳ ಮೇಲೆ ಸುದೀಪ್ ಹೆಚ್ಚಿನ ಒಲವು ಅಂತಾನೆ ಹೇಳಬಹುದು. ಇದೇ ಕಾರಣಕ್ಕೆ ಇದೀಗ ಬಾದ್ ಷಾ ಗೆ ಜನ್ಯ ನೀಡಿರುವ ಉಡುಗೊರೆ ಎಲ್ಲರ ಗಮನ ಸೆಳಿದಿದೆ.

ಇದನ್ನೂ ಓದಿ : RRR ತೆಲುಗು ಸಿನಿಮಾ : ಗೋಲ್ಡನ್‌ ಪ್ರಶಸ್ತಿ ಬಂದ್ಮೇಲೆ ಹೀಗ್ಯಾಕಂದ್ರು ರಾಜಮೌಳಿ..!

ಅಭಿನಯ ಚಕ್ರವರ್ತಿಯನ್ನು ಭೇಟಿಯಾಗಿರುವ ಅರ್ಜುನ್ ಜನ್ಯ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ಹೌದು, ಸುದೀಪ್ ಗಾಗಿ ವಿಶೇಷವಾಗಿ ಡಿಸೈನ್ ಮಾಡಲಾಗಿರುವ ಜಾಕೆಟ್ ಅನ್ನು ಜನ್ಯ ಉಡುಗರೆಯಾಗಿ ನೀಡಿದ್ದಾರೆ. ಇದರಲ್ಲಿ ಮತ್ತೊಂದು ಗಮನಿಸ ಬೇಕಾದ ವಿಷಯವೆಂದರೆ ಜಾಕೆಟ್ ಹಿಂದೆ 'ಬಾಸ್' ಎಂದು ಬರೆಯಲಾಗಿದೆ. ಈ ಗಿಫ್ಟ್ ಕಿಚ್ಚನಿಗೆ ಸಂತೋಷವನ್ನು ತಂದಿದೆ.

ತಮ್ಮ ಈ ಸಂತಸವನ್ನು ಟ್ವಿಟರ್ ಖಾತೆಯಲ್ಲಿ ವಿಡಿಯೋ ಮೂಲಕ ಹಂಚಿಕೊಂಡಿರುವ ಜನ್ಯ, 'ಲವ್ ಯು ಗಾಡ್ ಫಾದರ್ ಕಿಚ್ಚ ಸುದೀಪ್ ಸರ್, ನಿಮ್ಮ ಪ್ರೀತಿ ಆಶಿರ್ವಾದ ಹೀಗೆ ಸದಾ ನನ್ನ ಮೇಲಿರಲಿ' ಎಂದು  ಹಂಚಿಕೊಂಡಿದ್ದಾರೆ. 

ಇನ್ನೂ ಈ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಅಭಿನಯ ಚಕ್ರವರ್ತಿ, ಜಾಕೇಟ್ ನೀಡಿದ್ದಕ್ಕೆ ಧನ್ಯವಾದಗಳು, ನನ್ನ ಪ್ರೀತಿ ಮತ್ತು ಅಪ್ಪುಗೆ ಸದಾ ನಿಮಗಿರುತ್ತದೆ ಎಂದು ಪ್ರೀತಿಯಿಂದ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ : Kranti : ಡೋಂಟ್ ಮೆಸ್ ವಿತ್ ಹಿಮ್.. 'ಕ್ರಾಂತಿ'ಯ ಮಾಸ್ ಹಾಡಿಗೆ ಫ್ಯಾನ್ಸ್‌ ಫಿದಾ!

ಇದಕ್ಕೆ ಕಿಚ್ಚನ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News