ನವದೆಹಲಿ: ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ನಟನೆಗೆ ಗುಡ್ ಬೈ ಹೇಳಿದ್ದಾರೆ, ಮುಂಬರುವ ಇಂಡಿಯನ್ 2 ಚಿತ್ರವೇ ಅವರ ಕೊನೆಯ ಸಿನಿಮಾ ಎಂದು ತಿಳಿದುಬಂದಿದೆ.
ತಮಿಳುನಾಡಿನ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಕಮಲ್ ಹಾಸನ್ ತಾವು ನಟನೆಗೆ ಗುಡ್ ಬೈ ಹೇಳಿರುವುದಾಗಿ ಘೋಷಿಸಿಕೊಂಡಿದ್ದಾರೆ.ಮಕ್ಕಳ ನಿಧಿ ಮೈಯಂ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಅಭ್ಯರ್ಥಿಗಳನ್ನು ಪಕ್ಷದಿಂದ ಕಣಕ್ಕೆ ಇಳಿಸಲಾಗುವುದು.ಇಂಡಿಯನ್-2 ಚಿತ್ರದ ನಂತರ ಸಿನಿಮಾ ರಂಗಕ್ಕೆ ವಿದಾಯ ಹೇಳುತ್ತೇನೆ ಎಂದು ಅವರು ತಿಳಿಸಿದ್ದಾರೆ.
ಬಾಲ್ಯದಿಂದಲೇ ಸಿನಿಮಾರಂಗಕ್ಕೆ ಪ್ರವೇಶಿಸಿದ್ದ ಕಮಲ್ ಹಾಸನ್ ಈಗ ನೂತನ ಪಕ್ಷವನ್ನು ಪ್ರಾರಂಭಿಸುವುದರ ಮೂಲಕ ಸಕ್ರೀಯ ರಾಜಕಾರಣಕ್ಕೆ ಪ್ರವೇಶಿಸಿದ್ದರು.ಪ್ರಮುಖವಾಗಿ ಜಯಲಲಿತಾ ಅವರ ನಿಧನದ ನಂತರ ರಾಜಕೀಯದಲ್ಲಿ ಭಾರಿ ಬದಲಾವಣೆಯಾಗಿದೆ.ಈ ಹಿನ್ನಲೆಯಲ್ಲಿ ಅವರು ಕೂಡ ರಾಜಕೀಯ ಪ್ರವೇಶಕ್ಕೆ ಮುನ್ನಡಿ ಇಟ್ಟಿದ್ದರು. ಇನ್ನೊಂದೆಡೆಗೆ ರಜನಿಕಾಂತ್ ಕೂಡ ರಾಜಕೀಯಕ್ಕೆ ಪ್ರವೇಶಿಸುವ ಬಯಕೆಯನ್ನು ವ್ಯಕ್ತಪಡಿಸುವುದರ ಮೂಲಕ ತಮಿಳುನಾಡಿನಲ್ಲಿ ರಾಜಕೀಯ ಸಂಚಲನ ಮೂಡಿಸಿದ್ದರು..