Gratuity-Pension Rule: ನಿಯಮಗಳಲ್ಲಿ ಮಹತ್ವದ ಬದಲಾವಣೆ ಮಾಡಿದೆ ಸರ್ಕಾರ!

Gratuity and Pension: ಕೇಂದ್ರ ನೌಕರರಿಗೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ಹೊಸ ನಿಯಮದ ಅಡಿಯಲ್ಲಿ, ನೌಕರರ ಒಂದು ತಪ್ಪು ಅವರ ಪಿಂಚಣಿ ಮತ್ತು ಗ್ರಾಚ್ಯುಟಿ ನಿಂತುಹೋಗಲು ಕಾರಣವಾಗಬಹುದು. ಕೇಂದ್ರ ಸರ್ಕಾರದ ಆ ಹೊಸ ನಿಯಮ ಯಾವುದು ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Jan 28, 2023, 08:10 AM IST
  • ಈ ನಿಯಮದ ಪ್ರಕಾರ, ಯಾವುದೇ ಪ್ರಾಧಿಕಾರವು ಅಂತಿಮ ಆದೇಶವನ್ನು ನೀಡುವ ಮೊದಲು ಕೇಂದ್ರ ಲೋಕಸೇವಾ ಆಯೋಗದಿಂದ ಸಲಹೆಗಳನ್ನು ಪಡೆದುಕೊಳ್ಳಬೇಕು.
  • ಪಿಂಚಣಿಯನ್ನು ತಡೆಹಿಡಿಯಲಾದ ಅಥವಾ ಹಿಂತೆಗೆದುಕೊಳ್ಳುವ ಯಾವುದೇ ಸಂದರ್ಭದಲ್ಲಿ, ಕನಿಷ್ಠ ಮೊತ್ತವು ತಿಂಗಳಿಗೆ ರೂ.9000 ಕ್ಕಿಂತ ಕಡಿಮೆ ಇರಬಾರದು,
  • ಇದನ್ನು ಈಗಾಗಲೇ ನಿಯಮ 44 ರ ಅಡಿಯಲ್ಲಿ ನಿಗದಿಪಡಿಸಲಾಗಿದೆ.
Gratuity-Pension Rule: ನಿಯಮಗಳಲ್ಲಿ ಮಹತ್ವದ ಬದಲಾವಣೆ ಮಾಡಿದೆ ಸರ್ಕಾರ! title=
ಗ್ರ್ಯಾಚುಟಿ ಹಾಗೂ ಪೆನ್ಷನ್ ನಿಯಮ

Gratuity and Pension New Rule: ಸರ್ಕಾರಿ  ನೌಕರರಿಗೆ ಸಂಬಂಧಿಸಿದ ಮಹತ್ವದ ನಿಯಮದಲ್ಲಿ ಕೇಂದ್ರ ಸರ್ಕಾರ ಬದಲಾವಣೆ ತಂದಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನೌಕರರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ನೌಕರರು ಇದನ್ನು ನಿರ್ಲಕ್ಷಿಸಿದರೆ, ನಿವೃತ್ತಿಯ ನಂತರ ಅವರು ತಮ್ಮ ಪಿಂಚಣಿ ಮತ್ತು ಗ್ರಾಚ್ಯುಟಿಯನ್ನು ಕಳೆದುಕೊಳ್ಳಬೇಕಾಗಬಹುದು.

ಸರ್ಕಾರಿ ನೌಕರರು ಕೆಲಸದಲ್ಲಿ ನಿರ್ಲಕ್ಷ್ಯ ವಹಿಸಿದರೆ, ನಿವೃತ್ತಿ ನಂತರ ಪಿಂಚಣಿ ಮತ್ತು ಗ್ರಾಚ್ಯುಟಿ ನಿಲ್ಲಿಸುವಂತೆ ಸೂಚನೆ ನೀಡಲಾಗಿದೆ. ಸರ್ಕಾರದ ಈ ಆದೇಶವು ಕೇಂದ್ರ ನೌಕರರಿಗೆ ಅನ್ವಯಿಸುತ್ತದೆ, ಆದರೆ ಮುಂದೆ, ರಾಜ್ಯಗಳು ಸಹ ಇದನ್ನು ಜಾರಿಗೆ ತರುವ ಸಾಧ್ಯತೆ ಇದೆ.

ಸರ್ಕಾರ ಹೊರಡಿಸಿರುವ ಆದೇಶ ಏನು?
ಕೇಂದ್ರ ಸರ್ಕಾರ ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ನಿಯಮಗಳು 2021 ರ ಕುರಿತು ಈ ಅಧಿಸೂಚನೆಯನ್ನು ಹೊರಡಿಸಿದೆ. ಇದರಲ್ಲಿ, ಕೇಂದ್ರ ಸರ್ಕಾರವು ಇತ್ತೀಚೆಗೆ CCS (ಪಿಂಚಣಿ) ನಿಯಮಗಳು 2021 ರ ನಿಯಮ 8 ರ ಬದಲಾವಣೆಯ ಬಗ್ಗೆ ಮಾಹಿತಿಯನ್ನು ನೀಡಿದೆ, ಇದರಲ್ಲಿ ಹೊಸ ನಿಬಂಧನೆಗಳನ್ನು ಸೇರಿಸಲಾಗಿದೆ. ಈ ಅಧಿಸೂಚನೆಯಲ್ಲಿ, ಕೇಂದ್ರ ನೌಕರರು ತಮ್ಮ ಸೇವಾ ಅವಧಿಯಲ್ಲಿ ಯಾವುದೇ ಗಂಭೀರ ಅಪರಾಧ ಅಥವಾ ನಿರ್ಲಕ್ಷ್ಯ ಧೋರಣೆ ತಳೆದರೆ, ನಿವೃತ್ತಿಯ ನಂತರ ಅವರ ಗ್ರಾಚ್ಯುಟಿ ಮತ್ತು ಪಿಂಚಣಿಯನ್ನು ನಿಲ್ಲಿಸಲಾಗುವುದು ಎಂದು ಹೇಳಲಾಗಿದೆ.

ಕೇಂದ್ರದಿಂದ ಬದಲಾದ ನಿಯಮಗಳ ಬಗ್ಗೆ ಮಾಹಿತಿಯನ್ನು ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೆ ಕಳುಹಿಸಲಾಗಿದೆ. ಅಷ್ಟೇ ಅಲ್ಲ, ತಪ್ಪಿತಸ್ಥ ನೌಕರರ ಬಗ್ಗೆ ಮಾಹಿತಿ ಬಂದರೆ ಅವರ ಪಿಂಚಣಿ ಮತ್ತು ಗ್ರಾಚ್ಯುಟಿ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ಸ್ಪಷ್ಟಪಡಿಸಲಾಗಿದೆ. ಆದರೆ, ಈ ಬಾರಿ ಸರ್ಕಾರ ಈ ನಿಯಮದ ಬಗ್ಗೆ ಕಟ್ಟುನಿಟ್ಟಾಗಿದೆ.

ಯಾರು ಕ್ರಮ ಜರುಗಿಸುತ್ತಾರೆ?
>> ನಿವೃತ್ತ ನೌಕರರ ನೇಮಕಾತಿ ಪ್ರಾಧಿಕಾರದಲ್ಲಿ ಭಾಗಿಯಾಗಿರುವ ಅಂತಹ ಅಧ್ಯಕ್ಷರು ಗ್ರಾಚ್ಯುಟಿ ಅಥವಾ ಪಿಂಚಣಿ ತಡೆಹಿಡಿಯುವ ಅಧಿಕಾರವನ್ನು ಹೊಂದಿದ್ದಾರೆ.
>> ನಿವೃತ್ತಿಯಾಗುವ ಉದ್ಯೋಗಿ ನೇಮಕಗೊಂಡಿರುವ ಸಂಬಂಧಿತ ಸಚಿವಾಲಯ ಅಥವಾ ಇಲಾಖೆಯೊಂದಿಗೆ ಸಂಬಂಧ ಹೊಂದಿರುವ ಅಂತಹ ಕಾರ್ಯದರ್ಶಿಗಳಿಗೆ ಪಿಂಚಣಿ ಮತ್ತು ಗ್ರಾಚ್ಯುಟಿಯನ್ನು ತಡೆಹಿಡಿಯುವ ಹಕ್ಕನ್ನು ಸಹ ನೀಡಲಾಗಿದೆ.
>> ನೌಕರನು ಆಡಿಟ್ ಮತ್ತು ಅಕೌಂಟ್ಸ್ ಇಲಾಖೆಯಿಂದ ನಿವೃತ್ತರಾಗಿದ್ದರೆ, ತಪ್ಪಿತಸ್ಥ ನೌಕರರ ನಿವೃತ್ತಿಯ ನಂತರ ಪಿಂಚಣಿ ಮತ್ತು ಗ್ರಾಚ್ಯುಟಿಯನ್ನು ತಡೆಹಿಡಿಯಲು ಸಿಎಜಿಗೆ ಅಧಿಕಾರ ನೀಡಲಾಗಿದೆ.

ಇದನ್ನೂ ಓದಿ-ಹಳೆ ಪೆನ್ಷನ್ ಯೋಜನೆಯ ಕುರಿತು ಇಲ್ಲಿದೆ ಒಂದು ಅಪ್ಡೇಟ್! ಈ ಸರ್ಕಾರಿ ನೌಕರರಿಗೆ ಸಿಗಲಿದೆ ಓಪಿಎಸ್ ಲಾಭ

ತಪ್ಪಿತಸ್ಥರ ವಿರುದ್ಧ ಹೇಗೆ ಕ್ರಮ ಕೈಗೊಳ್ಳಲಾಗುವುದು?
>> ನಿಯಮದ ಪ್ರಕಾರ, ಉದ್ಯೋಗಿಗಳ ವಿರುದ್ಧ ಯಾವುದೇ ಇಲಾಖಾವಾರು ಅಥವಾ ನ್ಯಾಯಾಂಗ ಕ್ರಮವನ್ನು ತೆಗೆದುಕೊಂಡರೆ, ನಂತರ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸುವುದು ಅಗತ್ಯವಾಗಿರುತ್ತದೆ.
>> ನೌಕರನು ನಿವೃತ್ತಿಯ ನಂತರ ಪುನಃ ನೇಮಕಗೊಂಡರೆ, ಅದೇ ನಿಯಮಗಳು ಆತನಿಗೂ ಅನ್ವಯಿಸುತ್ತವೆ.
>> ನೌಕರನು ನಿವೃತ್ತಿಯ ನಂತರ ಪಿಂಚಣಿ ಮತ್ತು ಗ್ರಾಚ್ಯುಟಿ ಪಾವತಿಯನ್ನು ತೆಗೆದುಕೊಂಡರೆ ಮತ್ತು ತಪ್ಪಿತಸ್ಥರೆಂದು ಕಂಡುಬಂದರೆ, ಪೂರ್ಣ ಅಥವಾ ಭಾಗಶಃ ಮೊತ್ತದ ಪಿಂಚಣಿ ಅಥವಾ ಗ್ರಾಚ್ಯುಟಿಯನ್ನು ಅವರಿಂದ ವಸೂಲಿ ಮಾಡಲಾಗುವುದು..
>> ಇಲಾಖೆಗೆ ಉಂಟಾದ ನಷ್ಟದ ಆಧಾರದ ಮೇಲೆ ಕ್ರಮ ನಿರ್ಣಯಿಸಲಾಗುವುದು.ನಿರ್ಣಯಿಸಲಾಗುತ್ತದೆ.
>> ಪ್ರಾಧಿಕಾರವು ಬಯಸಿದರೆ, ನೌಕರನ ಪಿಂಚಣಿ ಅಥವಾ ಗ್ರಾಚ್ಯುಟಿಯನ್ನು ಶಾಶ್ವತವಾಗಿ ಅಥವಾ ಸ್ವಲ್ಪ ಸಮಯದವರೆಗೆ ನಿಲ್ಲಿಸಬಹುದು.

ಇದನ್ನೂ ಓದಿ-ಮಾರುಕಟ್ಟೆಯ ಭಾರಿ ಕುಸಿತಕ್ಕೆ ಕಾರಣವಾದ ಅಡಾನಿ ಗ್ರೂಪ್, ಒಂದೇ ದಿನದಲ್ಲಿ ಹೂಡಿಕೆದಾರರ 8 ಲಕ್ಷ ಕೋಟಿ ರೂ. ಗುಳುಂ

ಅಂತಿಮ ಆದೇಶದ ಮೊದಲು ಸಲಹೆ ಪಡೆದುಕೊಳ್ಳಬೇಕು
ಈ ನಿಯಮದ ಪ್ರಕಾರ, ಯಾವುದೇ ಪ್ರಾಧಿಕಾರವು ಅಂತಿಮ ಆದೇಶವನ್ನು ನೀಡುವ ಮೊದಲು ಕೇಂದ್ರ ಲೋಕಸೇವಾ ಆಯೋಗದಿಂದ ಸಲಹೆಗಳನ್ನು ಪಡೆದುಕೊಳ್ಳಬೇಕು. ಪಿಂಚಣಿಯನ್ನು ತಡೆಹಿಡಿಯಲಾದ ಅಥವಾ ಹಿಂತೆಗೆದುಕೊಳ್ಳುವ ಯಾವುದೇ ಸಂದರ್ಭದಲ್ಲಿ, ಕನಿಷ್ಠ ಮೊತ್ತವು ತಿಂಗಳಿಗೆ ರೂ.9000 ಕ್ಕಿಂತ ಕಡಿಮೆ ಇರಬಾರದು, ಇದನ್ನು ಈಗಾಗಲೇ ನಿಯಮ 44 ರ ಅಡಿಯಲ್ಲಿ ನಿಗದಿಪಡಿಸಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News