ಬಳ್ಳಾರಿ: ಬೀದಿ ನಾಯಿಗಳು ಯಾವಾಗ ಹೇಗೆ ದಾಳಿ ಮಾಡುತ್ತವೆ ಅಂತಾ ಗೊತ್ತಾಗುವುದೇ ಇಲ್ಲ. ಯಾವುದೋ ಗುಂಗಿನಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗಿ ಇದ್ದಕ್ಕಿದ್ದಂತೆಯೇ ಪ್ರತ್ಯೇಕ್ಷವಾಗುವ ನಾಯಿಗಳು ಮನುಷ್ಯರ ಮೇಲೆ ದಾಳಿ ನಡೆಸುತ್ತವೆ. .
ನಿರ್ಜನ ಪ್ರದೇಶದಲ್ಲಿ ಒಬ್ಬೊಬ್ಬರೇ ತಿರುಗಾಡುವಾಗ ದಿಢೀರ್ ಎದುರಿಗೆ ಬರುವ ಬೀದಿನಾಯಿಗಳು ಒಬ್ಬಿಬ್ಬರ ಮೇಲೆ ದಾಳಿ ಮಾಡುವುದನ್ನು ಅದೆಷ್ಟೋ ಪ್ರಕರಣಗಳನ್ನು ನಾವು ಕೇಳಿದ್ದೇವೆ ಆದರೆ ಇಲ್ಲೊಂದು ವಿಚಿತ್ರ ಪ್ರಸಂಗ ನಡೆದಿದೆ.
ಇದನ್ನೂ ಓದಿ: ಮಹದಾಯಿ ಯೋಜನೆ: ಡಬಲ್ ಎಂಜಿನ್ ಸರ್ಕಾರದಿಂದ ವಂಚನೆ
ನಗರದ 30ನೇ ವಾರ್ಡ್, ವಟ್ಟಪ್ಪ ಗೇರಿ ಯಲ್ಲಿ ಏಕಾಏಕಿ ಸುಮಾರು ಮೂವತ್ತಕ್ಕೂ ಹೆಚ್ಚು ಜನರ ಮೇಲೆ ಬೀದಿನಾಯಿಗಳು ದಾಳಿ ಮಾಡಿದ ಘಟನೆ ಸೋಮವಾರ ರಾತ್ರಿ ನಡೆದಿದೆ. ಏಕಾಏಕಿ ದಾಳಿಗೆ ಮಹಿಳೆಯರು ಸೇರಿದಂತೆ ಮಕ್ಕಳಿಗೂ ಗಾಯಾಗಳಾಗಿವೆ. ಚಿಕಿತ್ಸೆಗಾಗಿ ಗಾಯಾಳುಗಳನ್ನು ವಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ.ಬೀದಿ ನಾಯಿಗಳ ನಿಯಂತ್ರಣ ಕ್ಕೆ ಸಾರ್ವಜನಿಕರು ಪಾಲಿಕೆಗೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಶಾಂತಿ ಸುವ್ಯವಸ್ಥೆಯಿಂದ ಸಿದ್ದೇಶ್ವರ ಸ್ವಾಮೀಜಿಗಳ ಅಂತಿಮ ಯಾತ್ರೆ ಮಾಡೋಣ : ಸಿಎಂ ಬೊಮ್ಮಾಯಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.