2025 ರವರೆಗೆ ಈ ರಾಶಿಯವರನ್ನು ಕಾಡುತ್ತಾನೆ ಶನಿ! ಪರಿಹಾರ ಮಾರ್ಗಗಳು ಇಲ್ಲಿವೆ

ಪ್ರಸ್ತುತ ಕುಂಭ ರಾಶಿಯಲ್ಲಿರುವ ಶನಿದೇವ ಮಾರ್ಚ್ 29, 2025 ರವರೆಗೆ ಕುಂಭ ರಾಶಿಯಲ್ಲಿಯೇ ಇರುತ್ತಾನೆ. ಈ ಸಮಯದಲ್ಲಿ, ಮೂರು ರಾಶಿಯವರ ಜಾತಕದಲ್ಲಿ ಸಾಡೇ ಸಾತಿ ನಡೆಯುತ್ತಿರುತ್ತದೆ.  

Written by - Ranjitha R K | Last Updated : Feb 16, 2023, 12:50 PM IST
  • ಶನಿಯನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ.
  • ಶನಿ ಮನುಷ್ಯನ ಕರ್ಮವನ್ನು ನೋಡಿ ಫಲ ನೀಡುವಾತ.
  • ಈ 3 ರಾಶಿಯವರು 2025 ರವರೆಗೆ ಜಾಗರೂಕರಾಗಿರಬೇಕು
2025 ರವರೆಗೆ  ಈ ರಾಶಿಯವರನ್ನು ಕಾಡುತ್ತಾನೆ ಶನಿ!  ಪರಿಹಾರ ಮಾರ್ಗಗಳು ಇಲ್ಲಿವೆ title=

ಬೆಂಗಳೂರು : ವೈದಿಕ ಜ್ಯೋತಿಷ್ಯದಲ್ಲಿ, ಶನಿಯನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ.  ಶನಿ ಯಾವಾಗಲೂ ಮನುಷ್ಯನ ಕರ್ಮವನ್ನು ನೋಡಿ ಫಲ ನೀಡುವಾತ. ಶನಿಯು ನಿಧನಾವಾಗಿ ಚಲಿಸಿ ಎರಡೂವರೆ ವರ್ಷಗಳಲ್ಲಿ ರಾಶಿಯನ್ನು ಬದಲಾಯಿಸುತ್ತಾನೆ. ನ ಪ್ರಸ್ತುತ ಕುಂಭ ರಾಶಿಯಲ್ಲಿರುವ ಶನಿದೇವ ಮಾರ್ಚ್ 29, 2025 ರವರೆಗೆ ಕುಂಭ ರಾಶಿಯಲ್ಲಿಯೇ ಇರುತ್ತಾನೆ. ಈ ಸಮಯದಲ್ಲಿ, ಮೂರು ರಾಶಿಯವರ ಜಾತಕದಲ್ಲಿ ಸಾಡೇ ಸಾತಿ ನಡೆಯುತ್ತಿರುತ್ತದೆ. ಇನ್ನು ಮೂರು ರಾಶಿಯವರ ಜಾತಕದಲ್ಲಿ ಎರಡೂವರೆ  ವರ್ಷದ  ಶನಿ ದೆಸೆ ನಡೆಯುತ್ತಿರುತ್ತದೆ. 

ಈ 3 ರಾಶಿಯವರು 2025 ರವರೆಗೆ ಜಾಗರೂಕರಾಗಿರಬೇಕು :
ಕುಂಭ ರಾಶಿ : ಶನಿಯು ಕುಂಭ ರಾಶಿಯಲ್ಲಿದ್ದು, ಈ ರಾಶಿಯವರ ಜಾತಕದಲ್ಲಿ ಶನಿ ಸಾಡೇಸಾತಿಯ 2ನೇ ಘಟ್ಟ ನಡೆಯುತ್ತಿದೆ. 2025 ರವರೆಗೆ ಸಾಡೇ  ಸಾತಿಯ ಎರಡನೇ ಹಂತ ನಡೆಯುತ್ತಿರುವುದರಿಂದ ಈ  ರಾಶಿಯವರ ಕಠಿಣ ಪರಿಶ್ರಮದ ನಂತರವೂ ನಿರೀಕ್ಷಿತ ಫಲಿತಾಂಶಗಳು ಸಿಗುವುದಿಲ್ಲ. ಈ ಸಂದರ್ಭದಲ್ಲಿ ಕೋಪವನ್ನು ನಿಯಂತ್ರಿಸುವುದು ಉತ್ತಮ. 

ಇದನ್ನೂ ಓದಿ : Vastu Tips : ಮನೆ ಅಥವಾ ಕಛೇರಿಯ ಈ ದಿಕ್ಕಿನಲ್ಲಿ ಕಂಪ್ಯೂಟರ್ ಇರಿಸಿ, ಯಶಸ್ಸು ನಿಮ್ಮನ್ನು ಮುತ್ತಿಕ್ಕುತ್ತದೆ!

ಮಕರ ರಾಶಿ : 2025ರವರೆಗೆ ಮಕರ ರಾಶಿಯವರ ಜಾತಕದಲ್ಲಿ ಶನಿ ಸಾಡೇಸಾತಿಯ ಮೂರನೇ ಹಾಗೂ ಕೊನೆಯ ಘಟ್ಟ ನಡೆಯಲಿದೆ. ಸಾಡೇ ಸಾತಿಯ ಮೂರನೇ ಹಂತವು ತುಲನಾತ್ಮಕವಾಗಿ ಕಡಿಮೆ  ಕಷ್ಟ ನಷ್ಟಗಳಿಂದ ಕೂಡಿರುತ್ತದೆ. ಆದರೂ ವ್ಯವಹಾರಗಳಲ್ಲಿ ಜನ ಜಾಗರೂಕರಾಗಿರಬೇಕು.  ಮಾತ್ರವಲ್ಲ ಆರೋಗ್ಯದ ಬಗ್ಗೆ ಕೂಡಾ ಕಾಳಜಿ ವಹಿಸಬೇಕು. 

ಮೀನ ರಾಶಿ : 2025ರ ವರೆಗೆ ಮೀನ ರಾಶಿಯವರ ಜಾತಕದಲ್ಲಿ ಶನಿ ಸಾಡೇಸಾತಿ ಯ ಮೊದಲ ಘಟ್ಟದ ​ನಡೆಯುತ್ತಿದೆ. ​ಈ ಸಮಯದಲ್ಲಿ ಖರ್ಚುಗಳು ಹೆಚ್ಚಾಗುತ್ತವೆ. ಹಣಕಾಸಿನ ಸಮಸ್ಯೆಗಳು ಎದುರಾಗಬಹುದು. ಜೀವನ ಸಂಗಾತಿಯೊಂದಿಗಿನ ಸಂಬಂಧವು ಹಾಳಾಗಬಹುದು. ಈ ವಿಷಯದಲ್ಲಿ ಜಾಗರೂಕರಾಗಿರಿ ನಿಮ್ಮ ಸಂಗಾತಿಗೆ ಸಮಯ ನೀಡಿ. 

ಶನಿಯ ಸಾಡೇಸಾತಿಯಿಂದ ಪರಿಹಾರ ಪಡೆಯಲು  ಇರುವ ಮಾರ್ಗಗಳು : 
ಶನಿಯು ಸಾಡೇಸಾತಿ ಅಥವಾ ಧೈಯ್ಯಾ ಸಮಯದಲ್ಲಿ ಹೆಚ್ಚು ತೊಂದರೆ ಕೊಡುತ್ತಾನೆ. ಯಾರ ಜಾತಕದಲ್ಲಿ ಶನಿಯು ದುರ್ಬಲ ಸ್ಥಾನದಲ್ಲಿರುತ್ತಾನೆಯೋ ಅವರ ಜೀವನದಲ್ಲಿ ಅನೇಕ ಕೆಟ್ಟ ಘಟನೆಗಳು ಘಟಿಸುತ್ತವೆ.  ಈ ಸಮಯದಲ್ಲಿನ ಕಷ್ಟ ನಷ್ಟಗಳನ್ನು ಕಡಿಮೆ ಮಾಡಲು ಮತ್ತು ಶನಿ ದೇವನ ಕೃಪೆಗೆ ಪಾತ್ರರಾಗಲು ಶನಿವಾರದಂದು ಕೆಲವು ಕ್ರಮಗಳನ್ನು  ಅನುಸರಿಸಬೇಕು. 

ಇದನ್ನೂ ಓದಿ : Shukra Gochar : ಶುಕ್ರ ಸಂಚಾರದಿಂದ ಈ ರಾಶಿಯವರಿಗೆ ಹಣದ ಮಳೆ ; ಪೂರ್ಣಗೊಳ್ಳಲಿದೆ ಸ್ಥಗಿತಗೊಂಡ ಕೆಲಸ!

- ಪ್ರತಿ ಶನಿವಾರ ಶನಿ ದೇವರಿಗೆ  ಎಳ್ಳೆಣ್ಣೆಯನ್ನು ಅರ್ಪಿಸಿ.
- ಪ್ರತಿ ಶನಿವಾರ ಸಂಜೆ  ಅಶ್ವಥ ಮರದ ಕೆಳಗೆ ಎಳ್ಳೆಣ್ಣೆ ದೀಪವನ್ನು ಬೆಳಗಿಸಿ.
- ಶನಿ ದೋಷವನ್ನು ಕಡಿಮೆ ಮಾಡಲು, ಶನಿವಾರದಂದು ಕಬ್ಬಿಣದ ವಸ್ತುಗಳು, ಕಪ್ಪು ಬಟ್ಟೆ, ಕಪ್ಪು ಉದ್ದಿನ ಬೇಳೆ, ಎಳ್ಳೆಣ್ಣೆ,  ಪಾದರಕ್ಷೆ ಇತ್ಯಾದಿಗಳನ್ನು ದಾನ ಮಾಡಿ.
- ಶನಿವಾರ ಮೀನುಗಳಿಗೆ, ಪಕ್ಷಿಗಳಿಗೆ ಆಹಾರ ನೀಡಿ. ಇದರಿಂದ ಜಾತಕದಲ್ಲಿ ಶನಿಯ ಪ್ರಭಾವ ಕಡಿಮೆಯಾಗುತ್ತದೆ.

 

( ಸೂಚನೆ : ಇಲ್ಲಿ ನೀಡಲಾದ  ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd

Apple Link - https://apple.co/3wPoNgr

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News