ಮಸೀದಿ ನಿರ್ಮಾಣದಲ್ಲಿ ನಿಯಮ ಮೀರಿದ ಆರೋಪ : ವಿಹೆಚ್ ಪಿ ಭಜರಂಗ ದಳದಿಂದ ಪ್ರತಿಭಟನೆ

Banda mosque row:  ನಗರದ ಬಾಲ್ಖಂಡಿ ನಾಕಾ ಪ್ರದೇಶದಲ್ಲಿ  ಮಸೀದಿಯೊಂದರಲ್ಲಿ ನಡೆಯುತ್ತಿರುವ ನಿರ್ಮಾಣ ಕಾರ್ಯಕ್ಕೆ ಸಂಬಂಧಪಟ್ಟಂತೆ ಈ ಗಲಾಟೆ ನಡೆದಿದೆ. ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ತಿನ ನೂರಾರು  ಮುಖಂಡರು ಮತ್ತು ಕಾರ್ಯಕರ್ತರು ಏಕಾಏಕಿ ಬೈಕ್‌ಗಳಲ್ಲಿ ಆಗಮಿಸಿದ್ದಾರೆ. 

Written by - Ranjitha R K | Last Updated : Feb 16, 2023, 03:02 PM IST
  • ನಿರ್ಮಾಣ ಹಂತದಲ್ಲಿರುವ ಮಸೀದಿ ವಿರುದ್ಧದ ಪ್ರತಿಭಟನೆಯ ಕೂಗು
  • ಮಸೀದಿ ನಿರ್ಮಾಣದ ಸ್ಥಳಕ್ಕೆ ಆಗಮಿಸಿದ ವಿಹೆಚ್ ಪಿ ಮತ್ತು ಭಜರಂಗ ದಳ ಕಾರ್ಯಕರ್ತರು
  • ಮಸೀದಿ ನಿರ್ಮಾಣದಲ್ಲಿ ನಿಯಮ ಮೀರಿರುವುದಕ್ಕೆ ಆಕ್ರೋಶ
ಮಸೀದಿ ನಿರ್ಮಾಣದಲ್ಲಿ ನಿಯಮ ಮೀರಿದ ಆರೋಪ : ವಿಹೆಚ್ ಪಿ ಭಜರಂಗ ದಳದಿಂದ ಪ್ರತಿಭಟನೆ  title=

Banda mosque row : ಯುಪಿಯ ಬಂದಾ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ಮಸೀದಿ ವಿರುದ್ಧದ ಪ್ರತಿಭಟನೆಯ ಕೂಗು ಕೇಳಿ ಬಂದಿದೆ.  ಇದೀಗ  ಮಸೀದಿ ನಿರ್ಮಾಣದ ಸ್ಥಳಕ್ಕೆ ಆಗಮಿಸಿದ ವಿಹೆಚ್ ಪಿ ಮತ್ತು ಭಜರಂಗ ದಳ ಕಾರ್ಯಕರ್ತರು, ಎರಡನೇ ಮಹಡಿಯಲ್ಲಿ ನಿರ್ಮಾಣ ಕಾರ್ಯ ನಡೆಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಸ್ತೆ ತಡೆ ನಡೆಸಿ ಘೋಷಣೆಗಳನ್ನು ಕೂಗಿದ್ದಾರೆ.  

ಪ್ರತಿಭಟನೆಗಿಳಿದ ಹಿಂದೂ ಪರ ಸಂಘಟನೆಗಳು : 
ಪೊಲೀಸರ ಸಮ್ಮುಖದಲ್ಲಿಯೇ ಪ್ರತಿಭಟನಾಕಾರರು ಗಲಾಟೆ ನಡೆಸಿದ್ದಾರೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಗಲಾಟೆ ನಡೆಸಿ ಪ್ರತಿಭಟನೆ ಮಾಡಿದ್ದಾರೆ. ನಗರದ ಬಾಲ್ಖಂಡಿ ನಾಕಾ ಪ್ರದೇಶದಲ್ಲಿ  ಮಸೀದಿಯೊಂದರಲ್ಲಿ ನಡೆಯುತ್ತಿರುವ ನಿರ್ಮಾಣ ಕಾರ್ಯಕ್ಕೆ ಸಂಬಂಧಪಟ್ಟಂತೆ ಈ ಗಲಾಟೆ ನಡೆದಿದೆ. ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ತಿನ ನೂರಾರು  ಮುಖಂಡರು ಮತ್ತು ಕಾರ್ಯಕರ್ತರು ಏಕಾಏಕಿ ಬೈಕ್‌ಗಳಲ್ಲಿ ಆಗಮಿಸಿದ್ದಾರೆ. 

ಇದನ್ನೂ ಓದಿ : ಆದಾಯ ಹೆಚ್ಚಳಕ್ಕೆ ರೈಲ್ವೆ ಮಹತ್ವದ ನಿರ್ಧಾರ, ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿ ರಿಯಾಯಿತಿ!

ವಿಎಚ್‌ಪಿ ಆರೋಪ :
ಈ ಕುರಿತು ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾಧ್ಯಕ್ಷ ಚಂದ್ರಮೋಹನ್ ಬೇಡಿ ಮಾತನಾಡಿ, ಮಸೀದಿಯ ನವೀಕರಣಕ್ಕೆ ಅಪರ ಜಿಲ್ಲಾಧಿಕಾರಿಗಳು ಮಸೀದಿಯ ಅನುಮತಿ ನೀಡಿದ್ದಾರೆ. ಆದರೆ ಇದೇ ನೆಪದಲ್ಲಿ ಎರಡನೇ ಮಹಡಿಯಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದು ತಪ್ಪು ಎಂದು ಆರೋಪಿಸಿದ್ದಾರೆ.  ಎರಡನೇ ಮಹಡಿಯ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.  

ಇದನ್ನೂ ಓದಿ : Agniveer Recruitment 2023: ಸೇನೆಗೆ ಸೇರಲು ಸುವರ್ಣಾವಕಾಶ ! ಅಗ್ನಿವೀರರ ಭರ್ತಿಗೆ ಮಾರ್ಚ್ 15 ರವರೆಗೆ ಸಮಯ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News