ದೇವರ ಮನೆಯಲ್ಲಿ ಯಾವುದೇ ಕಾರಣಕ್ಕೂ ಈ ಮೂರ್ತಿಯನ್ನು ಇಡಬೇಡಿ

ಎಷ್ಟೇ ಭಕ್ತಿ ಇದ್ದರೂ ಪ್ರತಿ ದಿನ ದೇವಸ್ಥಾನಕ್ಕೆ ಹೋಗುವುದು ಸಾಧ್ಯವಿಲ್ಲ. ಹಾಗಾಗಿಯೇ ಮನೆಯಲ್ಲಿ ದೇವರಿಗೆಂದು ಒಂದು ಜಾಗ ಮಾಡಿ ನಿತ್ಯ ಪೂಜೆ ಪುನಸ್ಕಾರ ಮಾಡಲಾಗುತ್ತದೆ. ಆದರೆ ದೇವರ ಕೋಣೆಯ ಬಗ್ಗೆ ಕೂಡಾ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಇಲ್ಲವಾದಲ್ಲಿ ವಾಸ್ತು ದೋಷ ಉಂಟಾಗುವುದಲ್ಲದೆ, ಪೂಜಾ ಫಲ ಕೂಡಾ ಸಿಗುವುದಿಲ್ಲ. 

Temple Vastu Tips : ಎಷ್ಟೇ ಭಕ್ತಿ ಇದ್ದರೂ ಪ್ರತಿ ದಿನ ದೇವಸ್ಥಾನಕ್ಕೆ ಹೋಗುವುದು ಸಾಧ್ಯವಿಲ್ಲ. ಹಾಗಾಗಿಯೇ ಮನೆಯಲ್ಲಿ ದೇವರಿಗೆಂದು ಒಂದು ಜಾಗ ಮಾಡಿ ನಿತ್ಯ ಪೂಜೆ ಪುನಸ್ಕಾರ ಮಾಡಲಾಗುತ್ತದೆ. ಆದರೆ ದೇವರ ಕೋಣೆಯ ಬಗ್ಗೆ ಕೂಡಾ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಇಲ್ಲವಾದಲ್ಲಿ ವಾಸ್ತು ದೋಷ ಉಂಟಾಗುವುದಲ್ಲದೆ, ಪೂಜಾ ಫಲ ಕೂಡಾ ಸಿಗುವುದಿಲ್ಲ. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ದೇವರ ಕೋಣೆ ಯಾವಾಗಲೂ ಸ್ವಚ್ಛವಾಗಿರಬೇಕು. ಒಡೆದ ವಸ್ತುಗಳನ್ನು ಇಲ್ಲಿ ಇಡಬಾರದು. ಪೂಜೆಯ ಮನೆಯಲ್ಲಿ ಯಾವಾಗಲೂ ದೀಪ ಬೆಳಗುತ್ತಿರಬೇಕು. ಸ್ನಾನ ಮಾಡಿದ ನಂತರವೇ ದೇವರ ಕೋಣೆ ಪ್ರವೇಶಿಸಬೇಕು.   

2 /5

ಮನೆಯ ದೇವರ ಕೋಣೆಯಲ್ಲಿ ಗಣೇಶನ ವಿಗ್ರಹವನ್ನು ಇಡಬೇಕು. ಗಣಪತಿಯನ್ನು  ಯಾವಾಗಲೂ ಲಕ್ಷ್ಮೀ ದೇವಿಯ ಎಡಭಾಗದಲ್ಲಿ ಇರಿಸಬೇಕು. ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶನ ವಿಗ್ರಹವನ್ನು ಇಡಬೇಡಿ. ಯಾವಾಗಲೂ ಆಶೀರ್ವಾದ ನೀಡುವ ಭಂಗಿಯನ್ನು ಹೊಂದಿರುವ ವಿಗ್ರಹವೇ ದೇವರ ಮನೆಯಲ್ಲಿರಲಿ. 

3 /5

ಮನೆಯ ದೇವಸ್ಥಾನದಲ್ಲಿ ಲಕ್ಷ್ಮಿಯ ಫೋಟೋ ಇರಲೇ ಬೇಕು.  ಲಕ್ಷ್ಮೀದೇವಿಯ ಫೋಟೋ ಕುಳಿತುಕೊಳ್ಳುವ ಭಂಗಿಯಲ್ಲಿರಬೇಕು ಎಂಬುದನ್ನು ನೆನಪಿನಲ್ಲಿಡಿ. ಲಕ್ಷ್ಮೀಯ ಜೊತೆ ವಿಷ್ಣುವಿನ ವಿಗ್ರಹವನ್ನು ಇಡುವುದು ತುಂಬಾ ಮಂಗಳಕರ. ಪೂಜೆಯ ಮನೆಯಲ್ಲಿ ಹನುಮಂತನ ಮೂರ್ತಿಯನ್ನು ಇಡುವುದರಿಂದ ತೊಂದರೆಗಳು ದೂರವಾಗುತ್ತವೆ. 

4 /5

ಮನೆಯ ಪೂಜಾ ಸ್ಥಳದಲ್ಲಿ ರಾಮ ದರ್ಬಾರ್ ವಿಗ್ರಹವನ್ನು ಇಡುವುದನ್ನು ಖಚಿತಪಡಿಸಿಕೊಳ್ಳಿ. ಪೂಜಾ ಸ್ಥಳದಲ್ಲಿ ಶಿವಲಿಂಗವನ್ನು ಇಟ್ಟರೆ ಹೆಚ್ಚು ಶುಭ. ಆದರೆ, ಮನೆಯಲ್ಲಿರುವ ಶಿವಲಿಂಗ ಗಾತ್ರದಲ್ಲಿ ತುಂಬಾ ದೊಡ್ಡದಾಗಿರಬಾರದು. ಮಾತ್ರವಲ್ಲ ಮನೆಯಲ್ಲಿ ಶಿವಲಿಂಗ ಇಟ್ಟರೆ ಅದಕ್ಕೆ ಪ್ರತಿದಿನ ನೀರನ್ನು ಅರ್ಪಿಸಬೇಕು.   

5 /5

ಸತ್ತವರ ಫೋಟೋವನ್ನು ದೇವರ ಕೋಣೆಯಲ್ಲಿ ಇಡಬಾರದು.  ರಾಹು-ಕೇತು, ಶನಿ ದೇವ ಮತ್ತು ಮಹಾಕಾಳಿಯ ಮೂರ್ತಿಗಳನ್ನು ಪೂಜಾ ಮನೆಯಲ್ಲಿ ಇಡಲೇಬಾರದು.  ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)