Reserve Bank of India: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಐದು ಸಹಕಾರಿ ಬ್ಯಾಂಕ್‌ಗಳ ಆರ್ಥಿಕ ಸ್ಥಿತಿ ಹದಗೆಟ್ಟಿರುವ ಕಾರಣ ಅವುಗಳ ಮೇಲೆ ನಿರ್ಬಂಧಗಳನ್ನು ವಿಧಿಸಿದೆ. ಈ ನಿರ್ಬಂಧಗಳು ಆರು ತಿಂಗಳವರೆಗೆ ಜಾರಿಯಲ್ಲಿರುತ್ತವೆ. ಇದರ ಜೊತೆಗೆ ಆರ್‌ಬಿಐನಿಂದ ಪೂರ್ವಾನುಮತಿಯಿಲ್ಲದೆ ಸಾಲಗಳನ್ನು ನೀಡುವುದು, ಹೂಡಿಕೆ ಮಾಡುವುದು, ಯಾವುದೇ ಹೊಣೆಗಾರಿಕೆಯನ್ನು ಉಂಟು ಮಾಡುವುದು ಅಥವಾ ಆಸ್ತಿಗಳನ್ನು ವಿಲೇವಾರಿ ಮಾಡುವುದಾಗಲಿ ಮಾಡುವಂತಿಲ್ಲ. ಇವೆಲ್ಲದರ ಮೇಲೂ ನಿಷೇಧವನ್ನು ಒಳಗೊಂಡಿರುತ್ತದೆ.
HCBL ಸಹಕಾರಿ ಬ್ಯಾಂಕ್, ಆದರ್ಶ ಮಹಿಳಾ ನಗರಿ ಸಹಕಾರಿ ಬ್ಯಾಂಕ್ ಮರ್ಯಾಡಿಟ್ ಮತ್ತು ಕರ್ನಾಟಕದ ಮಂಡ್ಯದಲ್ಲಿರುವ ಶಿಮ್ಶಾ ಸಹಕಾರ ಬ್ಯಾಂಕ್ ನಿಯಮಿತ, ಈ ಮೂರು ಬ್ಯಾಂಕ್‌ಗಳ ಗ್ರಾಹಕರು ಪ್ರಸ್ತುತ ಲಿಕ್ವಿಡಿಟಿ ಸ್ಥಿತಿಯಿಂದಾಗಿ ತಮ್ಮ ಖಾತೆಗಳಿಂದ ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ. ಆದರೆ, ಉರವಕೊಂಡ ಕೋ-ಆಪರೇಟಿವ್ ಟೌನ್ ಬ್ಯಾಂಕ್ ಮತ್ತು ಶಂಕರರಾವ್ ಮೋಹಿತೆ ಪಾಟೀಲ್ ಸಹಕಾರಿ ಬ್ಯಾಂಕ್‌ನ ಗ್ರಾಹಕರು ₹5,000 ವರೆಗೆ ಹಣವನ್ನು ಹಿಂಪಡೆಯಬಹುದು ಎಂದು ತಿಳಿದುಬಂದಿದೆ.
ಎಲ್ಲಾ ಐದು ಸಹಕಾರಿ ಬ್ಯಾಂಕ್‌ಗಳ ಅರ್ಹ ಠೇವಣಿದಾರರು ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್‌ನಿಂದ ₹ 5 ಲಕ್ಷದವರೆಗಿನ ಠೇವಣಿ ವಿಮಾ ಕ್ಲೈಮ್‌ಗಳನ್ನು ಸ್ವೀಕರಿಸುತ್ತಾರೆ. ಆರ್‌ಬಿಐನ ಈ ಕ್ರಮವು ಠೇವಣಿದಾರರ ಹಿತಾಸಕ್ತಿಗಳನ್ನು ಕಾಪಾಡುವ ಮತ್ತು ಹಣಕಾಸು ವ್ಯವಸ್ಥೆಯ ಸ್ಥಿರತೆಯನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.