Cheapest Electric Bike: ಸದ್ಯ ಭಾರತದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಸೇರಿದಂತೆ ಇಂಧನ ಬೆಲೆಯಲ್ಲಿ ಹೆಚ್ಚಳ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಅನೇಕ ಜನರು ಎಲೆಕ್ಟ್ರಿಕ್ ವಾಹನಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಹೊಸ ಎಲೆಕ್ಟ್ರಿಕ್ ಬೈಕ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಇದರ ಬೆಲೆ ಭಾರೀ ಅಗ್ಗವಾಗಿದೆ.
ಎಲೆಕ್ಟ್ರಿಕ್ ಸ್ಕೂಟರ್, ಎಲೆಕ್ಟ್ರಿಕ್ ಬೈಕ್ಗಳ ಮೇಲೆ ಜನರಿಗೆ ಭಾರೀ ಮೋಹ ಬಂದಿದೆ. ಇನ್ನು ಎಲೆಕ್ಟ್ರಿಕ್ ಕಾರುಗಳಿಗೆ ಸಖತ್ ಡಿಮ್ಯಾಂಡ್ ಇದೆ. ಇನ್ನು ಅನೇಕ ಜನರು ಎಲೆಕ್ಟ್ರಿಕ್ ವಾಹನಗಳ ಬೆಲೆ ಹೆಚ್ಚಿರಬಹುದೆಂದು ಭಾವಿಸುತ್ತಾರೆ. ಆದರೆ ಇಂದು ನಾವು ಮಾಹಿತಿ ನೀಡಲು ಹೊರಟಿರುವ ವಾಹನದ ಬೆಲೆ ಜಸ್ಟ್ ಅರೌಂಡ್ 50 ಸಾವಿರ.
ನಾವಿಂದು ಮೊಟೊವೋಲ್ಟ್ ಕಂಪನಿಯ ಅಡೈರ್ ಇ-ಬೈಕ್ ಬಗ್ಗೆ ಮಾತನಾಡುತ್ತಿದ್ದೇವೆ. ಇದರ ಹೆಸರು ಅರ್ಬನ್. ಈ ಬೈಕ್ ಕೇವಲ 49,999 ರೂ.ಗೆ ಮಾರುಕಟ್ಟೆಯಲ್ಲಿ ಲಭಿಸುತ್ತಿದೆ.
ಮೋಟೋವೋಲ್ಟ್ ಅರ್ಬನ್ ಬೈಕ್ ನ್ನು ಒಂದು ಬಾರಿ ಚಾರ್ಜ್ ಮಾಡಿದರೆ ಸಾಕು ಸುಮಾರು 120 ಕಿಲೋಮೀಟರ್ ವರೆಗೆ ಓಡುತ್ತದೆ. ಇದರಲ್ಲಿರುವುದು ಡಿಟ್ಯಾಚೇಬಲ್ ಬ್ಯಾಟರಿ.
ಇದರಲ್ಲಿ ಎರಡು ರೂಪಾಂತರಗಳಿದ್ದು, ಅವುಗಳೆಂದರೆ CT-STD ಮತ್ತು ಅರ್ಬನ್ ಸ್ಮಾರ್ಟ್ ಪ್ಲಸ್. CT-STD 49,999 ರೂ. ಗೆ ಲಭಿಸಿದರೆ, ಅರ್ಬನ್ ಸ್ಮಾರ್ಟ್ ಪ್ಲಸ್ 54,999 ರೂ.ಗೆ ಲಭಿಸುತ್ತದೆ. ಕೆಂಪು, ನೀಲಿ, ಬಿಳಿ ಮತ್ತು ಹಳದಿ ಬಣ್ಣಗಳಲ್ಲಿ ಈ ಎಲೆಕ್ಟ್ರಾನಿಕ್ ಬೈಕ್ ಗ್ರಾಹಕರಿಗೆ ಲಭ್ಯವಿದೆ.
ಮೊಟೊವೋಲ್ಟ್ ಕಂಪನಿಯ ವೆಬ್ಸೈಟ್’ಗೆ ಭೇಟಿ ನೀಡುವ ಮೂಲಕ ಅರ್ಬನ್ ರೂಪಾಂತರವನ್ನು ಖರೀದಿಸಬಹುದು. ಜಸ್ಟ್ ರೂ. 999 ಪಾವತಿಸಿ ಎಲೆಕ್ಟ್ರಿಕ್ ಬೈಕ್ ನ್ನು ಬುಕ್ ಮಾಡಬಹುದು. ಉಳಿದ ಮೊತ್ತವನ್ನು ಇಎಂಐ ಮೂಲಕ ತಿಂಗಳ ಆಯ್ಕೆಗೆ ಅನುಗುಣವಾಗಿ ಪಾವತಿಸಬಹುದು.
ಈ ಎಲೆಕ್ಟ್ರಿಕ್ ಬೈಕ್ ನ ತೂಕ 40 ಕೆ.ಜಿ ಇದ್ದು, ಗಂಟೆಗೆ 25 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಜೊತೆಗೆ 10 ಸೆಕೆಂಡುಗಳಲ್ಲಿ 0 ರಿಂದ 25 kmph ವೇಗವನ್ನು ಹೆಚ್ಚಿಸುತ್ತದೆ. ಇದು 20 Ah ಲಿಥಿಯಂ ಐಯಾನ್ ಬ್ಯಾಟರಿಯನ್ನು ಹೊಂದಿದೆ.
ಈ ಬೈಕ್ ನ್ನು ಸುಮಾರು 2 ರಿಂದ 4 ಗಂಟೆ ಚಾರ್ಚ್ ಮಾಡುವುದು ಉತ್ತಮ. ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ಗಳಿವೆ.