Shani Dev Favorite Zodiac Signs :ಶನಿ ಯಾರ ಜಾತಕದಲ್ಲಿ ಮಂಗಳಕರ ಸ್ಥಾನದಲ್ಲಿರುತ್ತಾನೆಯೋ ಅವನಿಗೆ ಜೀವನದಲ್ಲಿ ಅಪಾರ ಸಂತೋಷ ಪ್ರಾಪ್ತಿಯಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ದೇವನು ಯಾವಾಗಲೂ ದಯೆ ತೋರುವ ಕೆಲವು ರಾಶಿಗಳಿವೆ.
Shani Dev Favorite Zodiac Signs : ಶನಿ ದೇವ ಮನುಷ್ಯರಿಗೆ ಅವರವರ ಕರ್ಮಕ್ಕನುಸಾರವಾಗಿ ಫಲವನ್ನು ಕೊಡುತ್ತಾನೆ. ಶನಿ ದೇವನು ಬಹಳ ನಿಧಾನವಾಗಿ ಚಲಿಸುತ್ತಾನೆ. ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸಲು ಎರಡೂವರೆ ವರ್ಷಗಳನ್ನು ತೆಗೆದುಕೊಳ್ಳುತ್ತಾನೆ. ಅಂದರೆ, ಅವರು ಸುಮಾರು ಎರಡೂವರೆ ವರ್ಷಗಳ ಕಾಲ ಒಂದೇ ರಾಶಿಯಲ್ಲಿ ಇರುತ್ತಾರೆ. ಈ ಸಮಯದಲ್ಲಿ, ಶನಿ ಯಾರ ಜಾತಕದಲ್ಲಿ ಮಂಗಳಕರ ಸ್ಥಾನದಲ್ಲಿರುತ್ತಾನೆಯೋ ಅವನಿಗೆ ಜೀವನದಲ್ಲಿ ಅಪಾರ ಸಂತೋಷ ಪ್ರಾಪ್ತಿಯಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ದೇವನು ಯಾವಾಗಲೂ ದಯೆ ತೋರುವ ಕೆಲವು ರಾಶಿಗಳಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಶನಿದೇವನಿಗೆ ಮೂರು ರಾಶಿಯವರೆಂದರೆ ಅತ್ಯಂತ ಪ್ರಿಯ ಎಂದು ಪರಿಗಣಿಸಲಾಗುತ್ತದೆ. ಆ ರಾಶಿಗಳೆಂದರೆ ಮಕರ ರಾಶಿ, ಕುಂಭ ರಾಶಿ ಮತ್ತು ತುಲಾ ರಾಶಿ. ಶನಿ ದೇವ ಮಕರ ಮತ್ತು ಕುಂಭ ರಾಶಿಯ ಅಧಿಪತಿ. ಮತ್ತೊಂದೆಡೆ, ತುಲಾವನ್ನು ಶನಿಯ ನೆಚ್ಚಿನ ರಾಶಿ ಎಂದು ಕರೆಯಲಾಗುತ್ತದೆ.
ಮೀನ ಮತ್ತು ಧನು ರಾಶಿಯ ಮೇಲೂ ಶನಿದೇವನ ವಿಶೇಷ ಕೃಪೆ ಇರುತ್ತದೆ. ಈ ಎರಡೂ ರಾಶಿಗಳ ಅಧಿಪತಿ ದೇವಗುರು ಗುರು ಅಂದರೆ ಶನಿಯ ಮಿತ್ರ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯು ಯಾವುದೇ ಸ್ಥಿತಿಯಲ್ಲಿದ್ದರೂ ಮಕರ, ಕುಂಭ, ತುಲಾ ರಾಶಿಯವರನ್ನು ಅಷ್ಟಾಗಿ ಕಾಡುವುದಿಲ್ಲ.
ತುಲಾ ರಾಶಿಯು ಶನಿದೇವನ ನೆಚ್ಚಿನ ರಾಶಿಗಳಲ್ಲಿ ಒಂದಾಗಿದೆ. ತುಲಾ ರಾಶಿಯವರ ಮೇಲೆ ಸದಾ ಶನಿ ದೇವನ ಕೃಪೆ ಇರುತ್ತದೆ. ಈ ರಾಶಿಯವರ ಮೇಲೆ ಶನಿ ದೇವ ದಯಾ ದೃಷ್ಟಿಯನ್ನೇ ಹರಿಸುತ್ತಿರುತ್ತಾನೆ. ಶನಿದೇವನ ಅನುಗ್ರಹದಿಂದ ಈ ರಾಶಿಯವರು ಜೀವನದಲ್ಲಿ ಎಲ್ಲಾ ರೀತಿಯ ಸಂತೋಷವನ್ನು ಪಡೆಯುತ್ತಾರೆ.
ಶನಿದೇವನಿಗೆ ಮಕರ ರಾಶಿ ಕೂಡಾ ತುಂಬಾ ಪ್ರಿಯ. ಈ ರಾಶಿಯ ಅಧಿಪತಿ ಶನಿದೇವ. ಮಕರ ರಾಶಿಯವರ ಜಾತಕದಲ್ಲಿ ಶನಿ ಶುಭ ಸ್ಥಳದಲ್ಲಿದ್ದಾಗ, ಈ ರಾಶಿಯವರು ತಮ್ಮ ಕೆಲಸದ ಕ್ಷೇತ್ರದಲ್ಲಿ ಉತ್ತಮ ಯಶಸ್ಸು ಪಡೆಯುತ್ತಾರೆ.
ಶನಿದೇವನು ಕುಂಭ ರಾಶಿಯ ಅಧಿಪತಿಯೂ ಹೌದು. ಶನಿಯ ವಿಶೇಷ ಕೃಪೆಯಿಂದ ಕುಂಭ ರಾಶಿಯವರಿಗೆ ಜೀವನದಲ್ಲಿ ಎಂದೂ ಹಣದ ಕೊರತೆ ಎದುರಾಗುವುದಿಲ್ಲ. ಈ ಜನರು ಕಡಿಮೆ ಪ್ರಯತ್ನದಿಂದ ದೊಡ್ಡ ಯಶಸ್ಸನ್ನು ಪಡೆಯುತ್ತಾರೆ. (ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)