Gold Rate Today: ಚಿನ್ನಾಭರಣ ಖರೀದಿ ನಿಯಮದಲ್ಲಿ ಬದಲಾವಣೆ ತಂದ ಮೋದಿ ಸರ್ಕಾರ, ತಿಳಿದು ಸಂಭಾವ್ಯ ಹಾನಿಯಿಂದ ತಪ್ಪಿಸಿಕೊಳ್ಳಿ!

Gold Price Today: ಮಾರ್ಚ್ 31, 2023 ರ ನಂತರ ಹಾಲ್‌ಮಾರ್ಕ್ ಇಲ್ಲದ ಚಿನ್ನಾಭರಣಗಳನ್ನು ಮಾರಾಟ ಮಾಡಲಾಗುವುದಿಲ್ಲ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಹೇಳಿದೆ.  

Written by - Nitin Tabib | Last Updated : Mar 4, 2023, 05:40 PM IST
  • ದೇಶದ 339 ಕೇಂದ್ರಗಳು ಚಿನ್ನ ಮತ್ತು ಕಲಾಕೃತಿಗಳ ತಯಾರಿಕೆ / ಉತ್ಪಾದನೆಯನ್ನು ಮಾಡುತ್ತವೆ.
  • BIS ಕೇಂದ್ರಗಳು ಎಲ್ಲಾ ಪ್ರದೇಶಗಳಲ್ಲಿ ಲಭ್ಯವಿದೆ.
  • ಪ್ರಸ್ತುತ ದೇಶದಲ್ಲಿ 1338 ಹಾಲ್‌ಮಾರ್ಕಿಂಗ್ ಕೇಂದ್ರಗಳಿವೆ.
Gold Rate Today: ಚಿನ್ನಾಭರಣ ಖರೀದಿ ನಿಯಮದಲ್ಲಿ ಬದಲಾವಣೆ ತಂದ ಮೋದಿ ಸರ್ಕಾರ, ತಿಳಿದು ಸಂಭಾವ್ಯ ಹಾನಿಯಿಂದ ತಪ್ಪಿಸಿಕೊಳ್ಳಿ! title=
ಚಿನ್ನಾಭರಣ ಖರೀದಿ ನಿಯಮದಲ್ಲಿ ಬದಲಾವಣೆ!

Gold Purchasing Rule: ನೀವೂ ಆಗಾಗ ಚಿನ್ನಾಭರಣಗಳನ್ನು ಖರೀದಿಸುತ್ತಿದ್ದರೆ ಈ ವಿಶೇಷ ಸುದ್ದಿ ನಿಮಗಾಗಿ.  ಹೌದು, ಚಿನ್ನ ಖರೀದಿಯ ನಿಯಮಗಳನ್ನು ಸರ್ಕಾರ ಬದಲಾಯಿಸಿದೆ. ಮಾರ್ಚ್ 31, 2023 ರ ನಂತರ ಹಾಲ್‌ಮಾರ್ಕ್ ಇಲ್ಲದ ಚಿನ್ನಾಭರಣಗಳನ್ನು ಮಾರಾಟ ಮಾಡಲಾಗುವುದಿಲ್ಲ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಹೇಳಿದೆ. ಗ್ರಾಹಕರ ವ್ಯವಹಾರಗಳ ಇಲಾಖೆ ವತಿಯಿಂದ 4 ಅಂಕಿ ಮತ್ತು 6 ಅಂಕಿಗಳ ಹಾಲ್‌ಮಾರ್ಕಿಂಗ್ ಕುರಿತು ಗ್ರಾಹಕರಲ್ಲಿರುವ ಗೊಂದಲ ನಿವಾರಣೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ-Free Ration: ಉಚಿತ ಪಡಿತರ ಪಡೆಯುವ ಗ್ರಾಹಕರಿಗೆ ಸಂತಸದ ಸುದ್ದಿ ಪ್ರಕಟಿಸಿದ ಕೇಂದ್ರ ಆಹಾರ ಸಚಿವ!

ಈ ದಿನದಿಂದ ನಿಯಮ ಜಾರಿಗೆ ಬರಲಿದೆ
ಸರ್ಕಾರವು ಪ್ರಕಟಿಸಿದ ನಿರ್ಧಾರದ ನಂತರ, ಏಪ್ರಿಲ್ 1, 2023 ರಿಂದ, ಕೇವಲ 6 ಅಂಕೆಗಳ ಆಲ್ಫಾನ್ಯೂಮರಿಕ್ ಹಾಲ್‌ಮಾರ್ಕಿಂಗ್ ಮಾನ್ಯವಾಗಿರುತ್ತದೆ. ಇಲ್ಲದೇ ಹೋದರೆ ಚಿನ್ನ ಮತ್ತು ಅದರಿಂದ ಮಾಡಿದ ಆಭರಣಗಳು ಮಾರಾಟವಾಗುವುದಿಲ್ಲ. ಗ್ರಾಹಕರ ಹಿತದೃಷ್ಟಿಯಿಂದ ಗ್ರಾಹಕ ವ್ಯವಹಾರಗಳ ಇಲಾಖೆ ಕೈಗೊಂಡಿರುವ ನಿರ್ಧಾರ ಇದಾಗಿದೆ. 4 ಅಂಕಿಗಳ ಹಾಲ್‌ಮಾರ್ಕ್ ಅನ್ನು ಏಪ್ರಿಲ್ 1 ರಿಂದ ಸಂಪೂರ್ಣವಾಗಿ ನಿಲ್ಲಿಸಲಾಗುತ್ತದೆ. ಒಂದೂವರೆ ವರ್ಷದ ಹಿಂದೆಯೇ ಸರ್ಕಾರದಿಂದ ಚಿನ್ನದ ಹಾಲ್‌ಮಾರ್ಕಿಂಗ್‌ ಕಡ್ಡಾಯಗೊಳಿಸಲು ಕಸರತ್ತು ಆರಂಭಿಸಿತ್ತು.

ಇದನ್ನೂ ಓದಿ-Salary Hike: ವೇತನ ಹೆಚ್ಚಳದ ಸುಗ್ಗಿ 'ಅಪ್ರೆಸಲ್' ಬಂದಾಗಿದೆ, ಯಾರ ವೇತನದಲ್ಲಿ ಎಷ್ಟು ಹೆಚ್ಚಳ? ಸಮೀಕ್ಷೆ ಏನು ಹೇಳುತ್ತದೆ?

ದೇಶದಲ್ಲಿ 1338 ಹಾಲ್‌ಮಾರ್ಕಿಂಗ್ ಕೇಂದ್ರಗಳು
ದೇಶದ 339 ಕೇಂದ್ರಗಳು ಚಿನ್ನ ಮತ್ತು ಕಲಾಕೃತಿಗಳ ತಯಾರಿಕೆ / ಉತ್ಪಾದನೆಯನ್ನು ಮಾಡುತ್ತವೆ. BIS ಕೇಂದ್ರಗಳು ಎಲ್ಲಾ ಪ್ರದೇಶಗಳಲ್ಲಿ ಲಭ್ಯವಿದೆ. ಪ್ರಸ್ತುತ ದೇಶದಲ್ಲಿ 1338 ಹಾಲ್‌ಮಾರ್ಕಿಂಗ್ ಕೇಂದ್ರಗಳಿವೆ. ಈ ಕೇಂದ್ರಗಳ ಮೂಲಕ 85% ಕ್ಕಿಂತ ಹೆಚ್ಚು ಪ್ರದೇಶವನ್ನು ಒಳಗೊಂಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಸಚಿವಾಲಯ ಹೇಳಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News