Kabzaa kannada Trailer : ಪ್ಯಾನ್ ಇಂಡಿಯಾ ಸಿನಿಮಾ ʼಕಬ್ಜʼ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಸ್ವಾತಂತ್ರ್ಯದ ಘೋಷಣೆ, ರಕ್ತದ ಹರಿವು, ಹೆಪ್ಪುಗಟ್ಟಿದ ಕತ್ತಿ, ಸಾಮ್ರಾಜ್ಯವಾಳುವ ಧ್ವನಿ.. ಘೋರಾತಿ ಘೋರ ಶತ್ರುಗಳ ಆರ್ಭಟ, ಒಟ್ಟಾರೆಯಾಗಿ ʼಕಬ್ಜʼ ಟ್ರೈಲರ್ ಹೇಗಿದೆ ಅಂದ್ರೆ.. ಪಿಚ್ಚರ್ ಅಭಿ ಬಾಕಿ ಹೈ ಬಾಸ್ ಎಂದು ಭಾರತೀಯ ಸಿನಿರಂಗಕ್ಕೆ ಘರ್ಜಿಸಿ ಕನ್ನಡದ ಮತ್ತೊಂದು ಸಿನಿಮಾ ದಾಖಲೆ ಬರೆಯಲು ಬರುತ್ತಿದೆ ಎಂದು ಹೇಳುವಂತಿದೆ.
ಹೌದು.. ಆರ್ ಚಂದ್ರು ನಿರ್ದೇಶನದ ʼಕಬ್ಜʼ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು ಇಂಡಿಯನ್ ಸಿನಿಮಾ ಇಂಡ್ರಸ್ಟ್ರೀಯಲ್ಲಿ ಮತ್ತೊಮ್ಮೆ ಕನ್ನಡಿಗರ ಆರ್ಭಟ ಶುರುವಾಗಲಿದೆ ಎಂದು ಹೇಳುವಂತಿದೆ. ಇಂದು ಕಬ್ಜ ಚಿತ್ರದ ಹಿಂದಿ ಟ್ರೈಲರ್ ಅನ್ನು ಬಾಲಿವುಡ್ ಸೂಪರ್ ಸ್ಟಾರ್ ನಟ ಅಮಿತಾಬ್ ಬಚ್ಚನ್ ಅವರು ಬಿಡುಗಡೆ ಮಾಡಿದ್ದು, ಯೂಟ್ಯೂಬ್‌ನಲ್ಲಿ ಅಬ್ಬರಿಸುತ್ತಿದೆ. ಕನ್ನಡ ಸೇರಿದಂತೆ ಇತರೆ ಭಾಷೆಗಳ ಅವತರಣಿಕೆಯ ಟ್ರೈಲರ್ ಇನ್ನಷ್ಟೆ ಬಿಡುಗಡೆಯಾಗಬೇಕಿದೆ.
ಇದನ್ನೂ ಓದಿ: Anushka Shetty : ಏನಾಯ್ತು ಚೆಂದುಳ್ಳಿ ಚೆಲುವೆಗೆ..! ಹೇಗಿದ್ದ ʼಅನುಷ್ಕಾʼ ಹೇಗಾಗಿದಾರೆ ನೋಡಿ
ಸದ್ಯ ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ಯೂಟ್ಯೂಬ್ ಚಾನೆಲ್ನಲ್ಲಿ ಕಬ್ಜದ ಟ್ರೈಲರ್ ಬಿಡುಗಡೆಯಾಗಿದೆ. ಎರಡು ನಿಮಿಷದ ಟ್ರೈಲರ್‌ನಲ್ಲಿ ಸ್ವಾತಂತ್ರ್ಯ ಪೂರ್ವ ಅಂದ್ರೆ 1945ಕ್ಕೆ ಕರೆದುಕೊಂಡು ಹೋಗುವ ಟ್ರೈಲರ್‌ನಲ್ಲಿ ಮೊದಲಿಗೆ ಒಂದೇ ಮಾತರಂ ಎನ್ನುವ ಘೋಷಣೆಯೊಂದಿಗೆ ಕಬ್ಜ ಟ್ರೈಲರ್ ಪ್ರಾರಂಭವಾಗುತ್ತದೆ. ಬ್ರೀಟಿಷರ ಬಾವುಟ ಹಾರಾಟ, ಸ್ವಾತಂತ್ರ್ಯದ ಕೂಗು, ಮಕ್ಕಳಿಗೆ ಕೈತುತ್ತು ತಿನ್ನಿಸುವ ತಾಯಿ ಮುಖ್ಯ ಅಟ್ರ್ಯಾಕ್ಷನ್.
ಇನ್ನು ಟ್ರೈಲರ್ ನೋಡಿದ್ರೆ ಇದು ದೇಶ ಪ್ರೇಮ ಮತ್ತು ಅವ್ಯವಸ್ಥೆಯ ವಿರುದ್ಧ ಹೋರಾಡುವ ನಾಯಕನ ಕಥೆ ಎಂದು ತಿಳಿಯುತ್ತದೆ. ತಾಯಿ ಸೆಂಟಿಮೆಂಟ್ ಕೂಡ ಕಬ್ಜದಲ್ಲಿದೆ. ಆರ್ ಚಂದ್ರು ಅವರು ಒಂದು ಅದ್ಭುತ ಸಿನಿಮಾ ನೀಡಿದ್ದಾರೆ ಎನ್ನುವುದು ಮಾತ್ರ ಈ ಟ್ರೈಲರ್‌ನಿಂದ ಸ್ಪಷ್ಟವಾಗುತ್ತದೆ. ಟ್ರೈಲರ್‌ನಲ್ಲಿ ಕುತೂಹಲ ಹುಟ್ಟಿಸಿರುವ ಸಂಗತಿಯೆಂದರೆ ಉಪೇಂದ್ರ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಲ್ಲದೆ, ಇನ್ನೊಂದು ಭಾಗದಲ್ಲಿ ಕೈಯಲ್ಲಿ ಕತ್ತಿ ಹಿಡಿದು ಶತ್ರುಗಳನ್ನು ಚಂಡಾಡಿದ್ದು ನೋಡಿದ್ರೆ, ಧ್ವಿಪಾತ್ರದಲ್ಲಿ ಉಪ್ಪಿ ನಟಿಸಿದ್ದಾರಾ ಎನ್ನುವ ಸಂಶಯ ಮೂಡುವಂತಿದೆ. ಅಲ್ಲದೆ, ಕಿಚ್ಚ ಸುದೀಪ್ ಸಹ ಈ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.