ಆರ್. ಚಂದ್ರು ನಿರ್ದೇಶನದ 'ಕಬ್ಜ' ಚಿತ್ರದ ಟ್ರೇಲರ್ ಶನಿವಾರವಷ್ಟೇ, ಅಮಿತಾಭ್ ಬಚ್ಚನ್ ಅವರಿಂದ ಅಧಿಕೃತವಾಗಿ ಬಿಡುಗಡೆಯಾಗಿದೆ. ಈ ಟ್ರೇಲರ್ಗೆ ಎಲ್ಲೆಡೆಯಿಂದ ಅಭೂತಪೂರ್ವ ಪ್ರತಿಕ್ರಿಯೆ ಸಿಗುತ್ತಿದ್ದು, ಅದರಲ್ಲೂ ಬಾಲಿವುಡ್ನ ಹಲವು ಸೆಲೆಬ್ರಿಟಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಬ್ಜ ಸಿನಿಮಾ ಬಗ್ಗೆ ಕ್ರಿಯೇಟ್ ಆಗಿರೋ ಕ್ರೇಜ್ ಅಷ್ಟಿಷ್ಟಲ್ಲ. ಇಷ್ಟೊಂದು ಎಕ್ಸ್ಪೆಕ್ಟೇಷನ್ ಸುಮ್ ಸುಮ್ಮನೆ ಮೂಡಿದ್ದಲ್ಲ. ಅದರ ಹಿಂದೆ ನಿರ್ದೇಶಕ ಆರ್. ಚಂದ್ರು ಅವರ ಪರಿಶ್ರಮ ಇದೆ. ಹಗಲು-ರಾತ್ರಿ ಎನ್ನದೇ ಕಷ್ಟಪಟ್ಟು ಕೆಲಸ ಮಾಡಿದ ದೊಡ್ಡ ಟೀಮ್ ಇದೆ. ರೆಟ್ರೋ ಕಾಲದ ಕಥೆಯನ್ನ ತೆರೆಗೆ ತರೋದು ಅಂದ್ರೆ ಸುಲಭ ಅಲ್ಲ. ಆ ಕಾಲದ ರೀತಿ ಕಾಣೋಕೆ ಪ್ರಾಪರ್ಟೀಸ್ ಬೇಕು. ಅದನ್ನೆಲ್ಲ ಹೊಂದಿಸುವಲ್ಲಿ ಆರ್. ಚಂದ್ರು ಟೀಮ್ ಸಿಕ್ಕಾಪಟ್ಟೆ ಎಫರ್ಟ್ ಹಾಕಿದೆ. ಅದಕ್ಕೆ ಸಾಕ್ಷಿಯೇ ಈ ಸಿನಿಮಾದಲ್ಲಿ ಇರುವ ಕಾರುಗಳು ಕಲೆಕ್ಷನ್.
ಪ್ಯಾನ್ ಇಂಡಿಯಾ ಸಿನಿಮಾ ʼಕಬ್ಜʼ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಸ್ವಾತಂತ್ರ್ಯದ ಘೋಷಣೆ, ರಕ್ತದ ಹರಿವು, ಹೆಪ್ಪುಗಟ್ಟಿದ ಕತ್ತಿ, ಸಾಮ್ರಾಜ್ಯವಾಳುವ ಧ್ವನಿ.. ಘೋರಾತಿ ಘೋರ ಶತ್ರುಗಳ ಆರ್ಭಟ, ಒಟ್ಟಾರೆಯಾಗಿ ʼಕಬ್ಜʼ ಟ್ರೈಲರ್ ಹೇಗಿದೆ ಅಂದ್ರೆ.. ಪಿಚ್ಚರ್ ಅಭಿ ಬಾಕಿ ಹೈ ಬಾಸ್ ಎಂದು ಭಾರತೀಯ ಸಿನಿರಂಗಕ್ಕೆ ಘರ್ಜಿಸಿ ಕನ್ನಡದ ಮತ್ತೊಂದು ಸಿನಿಮಾ ದಾಖಲೆ ಬರೆಯಲು ಬರುತ್ತಿದೆ ಎಂದು ಹೇಳುವಂತಿದೆ.
Kabza Rrailer Release Date : ತಮ್ಮ ಅಮೋಘ ಅಭಿನಯದಿಂದ ಜನಮನಸೂರೆಗೊಂಡಿರುವ ಭಾರತದ ಖ್ಯಾತ ನಟ ʼಅಮಿತಾಭ್ ಬಚ್ಚನ್ʼ ಇಂದು (ಮಾರ್ಚ್ 4) ಸಂಜೆ 5 ಗಂಟೆ 2 ನಿಮಿಷಕ್ಕೆ ಮುಂಬೈನಲ್ಲಿ ಕಬ್ಜ ಸಿನಿಮಾದ ಟ್ರೈಲರ್ ಬಿಡಗಡೆ ಮಾಡಲಿದ್ದಾರೆ. ಪ್ರಪಂಚದಾದ್ಯಂತ ಬಿಡುಗಡೆಗೂ ಮುಂಚೆಯೇ ಗಮನ ಸೆಳೆದಿರುವ "ಕಬ್ಜ" ಟ್ರೇಲರ್ ನೋಡಿ ಖುಷಿಪಟ್ಟಿರುವ ಬಿಗ್ ಬಿ ನಿರ್ದೇಶಕ ಆರ್. ಚಂದ್ರು ಅವರನ್ನು ಮುಂಬೈಗೆ ಕರೆಸಿಕೊಂಡು ಎಲ್ಲಾ ಭಾಷೆಗಳ ಟ್ರೇಲರನ್ನು ಬಿಡುಗಡೆ ಮಾಡುತ್ತಿದ್ದಾರೆ.
ಕನ್ನಡದ ಕಬ್ಜ ರಿಲೀಸ್ ಗೂ ಮೊದಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸೌಂಡ್ ಮಾಡ್ತಿದೆ.. ಉಪ್ಪಿ ಕಿಚ್ಚನ ಕಾಂಬೋ ನಿರೀಕ್ಷೆ ಹೆಚ್ಚಿಸಿದೆ.. ಈ ಗ್ಯಾಪ್ ನಲ್ಲಿ ಕಬ್ಜ ರಿಯಲ್ ಸ್ಟಾರ್ ಉಪ್ಪಿಯ ಪ್ರಜಾಕೀಯಕ್ಕೆ ಮುನ್ನುಡಿ ಬರೆಯುತ್ತ ಅನ್ನೋ ಪ್ರಶ್ನೆ ಶುರುವಾಗಿದೆ.. ಅಷ್ಟಕ್ಕೂ ಉಪ್ಪಿಯ ಪ್ರಜಾಕೀಯಕ್ಕೂ ಕಬ್ಜ ಚಿತ್ರಕ್ಕೂ ಎಂತ್ತಣ ಸಂಬಧ ಅಂತೀರಾ ಹಾಗಾದ್ರೆ ಮುಂದೆ ಓದಿ..
ಎಲ್ಲೇ ನೋಡಿದ್ರೂ ಈಗ ಬರೀ ಕಬ್ಜ ಸಿನಿಮಾದ ಹವಾ ಜೋರಾಗಿದೆ. ಎಲ್ಲೆಲ್ಲೂ ಕಬ್ಜ ಮೇನಿಯ ಅಂದ್ರೆ ತಪ್ಪಿಲ್ಲ ನೋಡಿ. ಇದರ ಜೊತೆಗೆ ಸದ್ಯ ಪ್ಯಾನ್ ಇಂಡಿಯಾ ಹಂತದಲ್ಲಿ ಟ್ರೆಂಡಿಂಗ್ನಲ್ಲಿರುವ ಸಿನಿಮಾ ಎಂದರೆ ‘ಕಬ್ಜ’. ಈಗಾಗಲೇ ರಿಲೀಸ್ ಆಗಿರೋ ಟೀಸರ್, ಎರಡು ಹಾಡುಗಳಿಂದ ಕಂಪ್ಲೀಟ್ ಆಗಿ ಜನರ ಮನ ಗೆದ್ದಿರುವ ʼಕಬ್ಜʼ ಚಿತ್ರದಿಂದ ಇದೀಗ ಪಡ್ಡೆ ಹುಡುಗರ ಹೃದಯಕ್ಕೆ ಹತ್ತಿರವಾಗುವ ಹಾಡೊಂದು ಬಿಡುಗಡೆಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.