ಉನ್ನತ ಶಿಕ್ಷಣ ಸೀಟುಗಳಲ್ಲಿ ಶೇ.10 ಹೆಚ್ಚಳ: ಪ್ರಧಾನಿ ಮೋದಿ

ಮೇಲ್ಜಾತಿಯ ಆರ್ಥಿವಾಗಿ ಹಿಂದುಳಿದವರಿಗೆ ಶೇ.10 ಮೀಸಲಾತಿ ಘೋಷಿಸಿದ ಬೆನ್ನಲ್ಲೇ, ಉನ್ನತ ಶಿಕ್ಷಣ ಸಂಸ್ಥೆಗಳ ಸೀಟುಗಳನ್ನು ಶೇ.10ರಷ್ಟು ಹೆಚ್ಚಿಸಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Last Updated : Jan 9, 2019, 06:56 PM IST
ಉನ್ನತ ಶಿಕ್ಷಣ ಸೀಟುಗಳಲ್ಲಿ ಶೇ.10 ಹೆಚ್ಚಳ: ಪ್ರಧಾನಿ ಮೋದಿ title=

ಆಗ್ರಾ: ಉನ್ನತ ಶಿಕ್ಷಣ ಸಂಸ್ಥೆಗಳ ಸೀಟುಗಳನ್ನು ಶೇ.10ರಷ್ಟು ಹೆಚ್ಚಿಸಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. 

ಆಗ್ರಾದಲ್ಲಿ ಬುಧವಾರ ನಡೆದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೇಲ್ಜಾತಿಯ ಆರ್ಥಿವಾಗಿ ಹಿಂದುಳಿದವರಿಗೆ ಶೇ.10 ಮೀಸಲಾತಿ ಘೋಷಿಸಿದ ಬೆನ್ನಲ್ಲೇ, ಉನ್ನತ ಶಿಕ್ಷಣ ಸಂಸ್ಥೆಗಳ ಸೀಟುಗಳನ್ನು ಶೇ.10ರಷ್ಟು ಹೆಚ್ಚಿಸಲಾಗುವುದು. ಬಡವರ ಹಕ್ಕುಗಳನ್ನು ಕಿತ್ತುಕೊಳ್ಳುವಂಥ ಯಾವುದೇ ಕೆಲಸವನ್ನೂ ನಾವು ಮಾಡಲಾಗುವುದಿಲ್ಲ. ವದಂತಿಗಳಿಗೆ ಕಿವಿಗೊಡಬೇಡಿ ಎಂದು ಮೋದಿ ಹೇಳಿದರು.

ಲೋಕಸಭೆ ಚುನಾವಣೆಗೆ ಕೆಲವೇ ದಿನಗಳಿರುವ ಸಂದರ್ಭದಲ್ಲೇ ಮೇಲ್ಜಾತಿಯ ಬಡವರಿಗೆ ಶೇ.10 ಮೀಸಲಾತಿಯನ್ನು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು ಏಕೆ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಒಂದು ವೇಳೆ ದೇಶದಲ್ಲಿ 6 ತಿಂಗಳಲ್ಲಿ ಯಾವುದೇ ಚುನಾವಣೆಯೇ ನಡೆಯದಿದ್ದರೆ ದೇಶದ ಪರಿಸ್ಥಿತಿ ಏನಾಗಬಹುದು ನೀವೇ ಹೇಳಿ ಎಂದು ಮೋದಿ ಪ್ರಶ್ನಿಸಿದರು. 

ಎಸ್ಪಿ-ಬಿಎಸ್ಪಿ ಮೈತ್ರಿಗೆ ಧಕ್ಕೆ
ಎಸ್ಪಿ-ಬಿಎಸ್ಪಿ ಮೈತ್ರಿ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಎರಡೂ ಪಕ್ಷಗಳ ಮುಖ್ಯಸ್ಥರು ಪರಸ್ಪರ ಭೇಟಿಯಾಗಲು ಇಚ್ಛಿಸದಿದ್ದವರು, ಈಗ ಪರಸ್ಪರರ ಹಗರಣಗಳನ್ನು ಮರೆಮಾಚಲು ಕೈಜೋಡಿಸಲು ಪ್ರಯತ್ನಿಸುತ್ತಿವೆ. ಆದರೆ, ಈ ಚೌಕಿದಾರ(ಮೋದಿ) ಯಾವುದೇ ಭಯವಿಲ್ಲದೆ ಬುದ್ಧಿವಂತಿಕೆಯಿಂದ ತನ್ನ ಕೆಲಸ ಮುಂದುವರೆಸುತ್ತಾನೆ ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಅವರು, ತನಿಖಾ ಸಂಸ್ಥೆಗಳು ಎಲ್ಲ ಹಗರಣಗಳ ಬಗ್ಗೆ ತನಿಖೆ ನಡೆಸಲಿವೆ. ಲೆಕ್ಕಪತ್ರಗಳ ಪರಿಶೀಲನೆ ನಡೆಸಲಿದೆ. ಒಂದು ವೇಳೆ ಇವರ ಹಗರಣಗಳು ಬೆಳಕಿಗೆ ಬಂದಿದ್ದೇ ಆದಲ್ಲಿ, ಅಕ್ಕೆ ಮೋದಿ ಕಾರಣನಲ್ಲ, ಜನರ ಆಶೀರ್ವಾದವೇ ಕಾರಣ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸರಕು ಮತ್ತು ಸೇವಾ ತೆರಿಗೆ ಬಗ್ಗೆ ಮಾತನಾಡಿದ ಮೋದಿ, GST ವ್ಯಾಪ್ತಿಯಲ್ಲಿ ಉದ್ಯಮಗಳ ವಾರ್ಷಿಕ ಆದಾಯ ಮಿತಿಯನ್ನು ರೂ.20 ಲಕ್ಷದಿಂದ 75 ಲಕ್ಷಕ್ಕೆ ಹೆಚ್ಚಿಸಲು ಜಿಎಸ್ಟಿ ಸಮಿತಿಯನ್ನು ಒತ್ತಾಯಿಸಿರುವುದಾಗಿ ಪ್ರಧಾನಿ ಮೋದಿ ತಿಳಿಸಿದರು.
 

Trending News