Ramcharan CEO Movie : ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮುಂಬರುವ ಸಿನಿಮಾ ಆರ್ಸಿ 15ಗೆ ಕೊನೆಗೂ ಟೈಟಲ್ ಫಿಕ್ಸ್ ಆಗಿದೆ. ಆರ್ಆರ್ಆರ್ ಬಳಿಕ ರಾಮ್ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾಗೆ ಸಿಇಓ ಅಂತ ಹೆಸರಿಡಲಾಗಿದೆ ಎನ್ನುವ ಅಪ್ಡೆಟ್ ಲಭ್ಯವಾಗಿದೆ. ಈ ಸಿನಿಮಾವನ್ನು ನಿರ್ದೇಶಕ ಎಸ್. ಶಂಕರ್ ಅವರು ನಿರ್ದೇಶಿಸಲಿದ್ದಾರೆ.
ಲಭ್ಯವಿರುವ ಮಾಹಿತಿ ಪ್ರಕಾರ ಇಷ್ಟು ದಿನ ಆರ್ಸಿ 15ಗೆ ಯಾವುದೇ ಶೀರ್ಷಿಕೆ ಇಟ್ಟಿರಲಿಲ್ಲ. ಇದೀಗ ರಾಮ್ ಚರಣ್ ದ್ವಿಪಾತ್ರದಲ್ಲಿ ನಟಿಸುತ್ತಿರುವ ಚಿತ್ರಕ್ಕೆ 'ಸಿಇಒ' ಎಂದು ಹೆಸರಿಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರ ಅಭಿಮಾನಿಗಳಿಗೂ ಕೂಡ ಈ ಟೈಲರ್ ಸಖತ್ ಇಷ್ಟವಾಗಿದೆ. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ CEO ಹ್ಯಾಷ್ ಟ್ಯಾಗ್ ಸಖತ್ ಸದ್ದು ಮಾಡುತ್ತಿದೆ.
#RC15 #Ramcharan #CEO pic.twitter.com/Zb0ltimAln
— TollywoodBoxoffice.IN (@TBO_Updates) March 8, 2023
ಇದನ್ನೂ ಓದಿ: ವಿನಯ್ ರಾಜ್ ಕುಮಾರ್ ನಟನೆಯ ‘ಒಂದು ಸರಳ ಪ್ರೇಮಕಥೆ’ ಪೋಸ್ಟರ್ ರಿಲೀಸ್
ಇನ್ನು ಸಿಇಓ ಅಂದ್ರೆ, 'ಮುಖ್ಯ ಚುನಾವಣಾ ಅಧಿಕಾರಿ'(chief election officer) ಎಂದು ಹೇಳಲಾಗುತ್ತಿದೆ. ಆದ್ರೆ, ಈ ಬಗ್ಗೆ ಯಾವುದೇ ಮಾಹಿತಿ ಅಥವಾ ಸುಳಿವು ಲಭ್ಯವಾಗಿಲ್ಲ. ತಮಿಳು-ತೆಲುಗು ಎರಡು ಭಾಷೆಯಲ್ಲಿ ನಿರ್ಮಾಣವಾಗಲಿರುವ ಈ ಚಿತ್ರವನ್ನು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ನ ದಿಲ್ ರಾಜು ಅವರು ಮಾರ್ಚ್ 27 ರಂದು ಅಂದ್ರೆ, ರಾಮ್ ಚರಣ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಶೀರ್ಷಿಕೆಯನ್ನು ಬಹಿರಂಗಪಡಿಸಲು ಪ್ಲಾನ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ದರಿಂದ, ಆರ್ಸಿ 15 ರ ಶೀರ್ಷಿಕೆಯ ಅಪ್ಡೇಟ್ ಅವತ್ತೇ ಸಿಗಲಿದೆ.
ಇದನ್ನೂ ಓದಿ: Bollywood : ಮದ್ಯದ ಚಟ, ವೇಶ್ಯಾವಾಟಿಕೆ.. ಈ ಖ್ಯಾತ ನಟಿಯ ಶವ ಕೈಗಾಡಿಯಲ್ಲಿ ಸ್ಮಶಾನಕ್ಕೆ ಸಾಗಿಸಲಾಯ್ತು!
ಆರ್ಆರ್ಆರ್ ಸಿನಿಮಾ ನಂತರ ಬಿಡುಗಡೆಯಾದ ʼಆಚಾರ್ಯʼ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ. ನಂತರ ಆರ್ಸಿ15 ಚಿತ್ರ 2022 ರಲ್ಲಿ ಚಿತ್ರೀಕರಣ ಪ್ರಾರಂಭವಾಯಿತು. ತಮಿಳು ಬರಹಗಾರ-ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಚಿತ್ರಕ್ಕೆ ಕಥೆಯನ್ನು ಬರೆದಿದ್ದಾರೆ. ಚಿತ್ರದ ಛಾಯಾಗ್ರಹಣವನ್ನು ತಿರುರು ಮತ್ತು ಆರ್ ರತ್ನವೇಲು ಒಟ್ಟಾಗಿ ನಿರ್ವಹಿಸಿದ್ದಾರೆ. ಎಸ್.ಎಸ್. ಥಮನ್ ಸಂಗೀತ ಈ ಚಿತ್ರಕ್ಕಿರಲಿದೆ. ರಾಮ್ ಚರಣ್ ಅವರ ಡಬಲ್ ಆಕ್ಷನ್ ಚಿತ್ರ 170 ಕೋಟಿ ರೂಪಾಯಿ ಬಜೆಟ್ನಲ್ಲಿ ತಯಾರಾಗುತ್ತಿದೆ. ಕಿಯಾರಾ ಅಡ್ವಾಣಿ ನಾಯಕಿಯಾಗಿ, ಚಿತ್ರದಲ್ಲಿ ಎಸ್ಜೆ ಸೂರ್ಯ, ಅನಕಿಲ್, ಸುನೀಲ್, ಜಯರಾಮ್, ನವೀನ್ ಚಂದ್ರ, ಶ್ರೀಕಾಂತ್, ನಾಸರ್, ರಘು ಬಾಬು ಮತ್ತು ಸಮುದ್ರಕನಿ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.