ಸಿದ್ದಿಕಿ ಸ್ವಂತ ʼಅಪ್ರಾಪ್ತ ಮಗಳನ್ನುʼ ಮ್ಯಾನೇಜರ್‌ ಜೊತೆ ಕಳಿಸಿದ್ದ..! ಅವನು ʼತಬ್ಬಿಕೊಂಡುʼ ... ಮಾಡಿದ್ದ

ಬಾಲಿವುಡ್‌ ನಟ ನವಾಜುದ್ದೀನ್ ಸಿದ್ದಿಕಿಯನ್ನು ಅವರ ಪತ್ನಿ ಆಲಿಯಾ ʼಬೇಜವಾಬ್ದಾರಿ ತಂದೆʼ ಎಂದು ಕರೆದಿದ್ದಾರೆ. ಅಲ್ಲದೆ, ಸಿದ್ದಿಕಿ ತಮ್ಮ ಅಪ್ರಾಪ್ತ ಮಗಳನ್ನು ತನ್ನ ʼಪುರುಷ ಮ್ಯಾನೇಜರ್ʼ ಜೊತೆ ಏಕಾಂಗಿಯಾಗಿ ಕಳುಹಿಸಿದ್ದ, ಆ ಮ್ಯಾನೇಜರ್‌ ನನ್ನ ಮಗಳ ಜೊತೆ ʼಅನುಚಿತ ರೀತಿಯಲ್ಲಿ ಹಲವಾರು ಬಾರಿ ತಬ್ಬಿಕೊಂಡಿದ್ದʼ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

Written by - Krishna N K | Last Updated : Mar 9, 2023, 07:30 PM IST
  • ಬಾಲಿವುಡ್‌ ನಟ ನವಾಜುದ್ದೀನ್ ಸಿದ್ದಿಕಿಯನ್ನು ಅವರ ಪತ್ನಿ ಆಲಿಯಾ ʼಬೇಜವಾಬ್ದಾರಿ ತಂದೆʼ ಎಂದು ಕರೆದಿದ್ದಾರೆ.
  • ಸಿದ್ದಿಕಿ ತಮ್ಮ ಅಪ್ರಾಪ್ತ ಮಗಳನ್ನು ತನ್ನ ʼಪುರುಷ ಮ್ಯಾನೇಜರ್ʼ ಜೊತೆ ಏಕಾಂಗಿಯಾಗಿ ಕಳುಹಿಸಿದ್ದ ಎಂದು ದೂರಿದ್ದಾರೆ.
  • ಈ ಕುರಿತು ಪತ್ರವೊಂದನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಗಂಭೀರ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.
ಸಿದ್ದಿಕಿ ಸ್ವಂತ ʼಅಪ್ರಾಪ್ತ ಮಗಳನ್ನುʼ ಮ್ಯಾನೇಜರ್‌ ಜೊತೆ ಕಳಿಸಿದ್ದ..! ಅವನು ʼತಬ್ಬಿಕೊಂಡುʼ ... ಮಾಡಿದ್ದ title=

Nawazuddin Siddiqui daughter : ಬಾಲಿವುಡ್‌ ನಟ ನವಾಜುದ್ದೀನ್ ಸಿದ್ದಿಕಿಯನ್ನು ಅವರ ಪತ್ನಿ ಆಲಿಯಾ ʼಬೇಜವಾಬ್ದಾರಿ ತಂದೆʼ ಎಂದು ಕರೆದಿದ್ದಾರೆ. ಅಲ್ಲದೆ, ಸಿದ್ದಿಕಿ ತಮ್ಮ ಅಪ್ರಾಪ್ತ ಮಗಳನ್ನು ತನ್ನ ʼಪುರುಷ ಮ್ಯಾನೇಜರ್ʼ ಜೊತೆ ಏಕಾಂಗಿಯಾಗಿ ಕಳುಹಿಸಿದ್ದ, ಆ ಮ್ಯಾನೇಜರ್‌ ನನ್ನ ಮಗಳ ಜೊತೆ ʼಅನುಚಿತ ರೀತಿಯಲ್ಲಿ ಹಲವಾರು ಬಾರಿ ತಬ್ಬಿಕೊಂಡಿದ್ದʼ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಹೌದು.. ಕಳೆದ ಕೆಲವುದಿನಗಳ ಹಿಂದೆ ನವಾಜುದ್ದೀನ್ ಸಿದ್ದಿಕಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಬರಹದ ಮೂಲಕ ಹೆಂಡತಿಯ ಆರೋಪಕ್ಕೆ ತಿರುಗೇಟು ನೀಡಿದ್ದರು. ಇದೀಗ ಸಿದ್ದಿಕಿ ಮಾತಿಗೆ ಪ್ರತ್ಯುತ್ತರ ನೀಡಿರುವ ಆಲಿಯಾ.. ಸಿದ್ದಿಕಿ ತಮ್ಮ 12 ವರ್ಷದ ಮಗಳನ್ನು ತನ್ನ ಪುರುಷ ಮ್ಯಾನೇಜರ್‌ನೊಂದಿಗೆ ಒಪ್ಪಿಗೆ ಇಲ್ಲದೆ ಬೇರೆ ದೇಶಕ್ಕೆ ಕಳುಹಿಸಿದ್ದರು ಎಂದು ಹೇಳಿದ್ದಾರೆ. ಈ ಕುರಿತು ಪತ್ರವೊಂದನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

 
 
 
 

 
 
 
 
 
 
 
 
 
 
 

A post shared by Aaliya Siddiqui (@aaliyanawazuddin)

ಇದನ್ನೂ ಓದಿ: ರಾಮ್‌ಚರಣ್‌ ಹೊಸ ಸಿನಿಮಾಗೆ ʼC.E.Oʼ ಟೈಟಲ್‌ ಫಿಕ್ಸ್‌..! ʼಕೆಜಿಎಫ್‌ʼ ಡೈಲಾಗ್‌ನ ʼಸಿಇಓʼ ಆಂತ ತಿಳಿಬೇಡಿ

ʼವಾಸ್ತವವೆಂದರೆ ಒಬ್ಬ ಬೇಜವಾಬ್ದಾರಿ ತಂದೆಯಾಗಿ, ನೀವು ನನ್ನ ಅಪ್ರಾಪ್ತ ಮಗಳನ್ನು ನಿಮ್ಮ ಪುರುಷ ಮ್ಯಾನೇಜರ್‌ನೊಂದಿಗೆ ಬೇರೆ ದೇಶಕ್ಕೆ ಕಳುಹಿಸಿದ್ದೀರಿ. ನನ್ನ ಒಪ್ಪಿಗೆಯಿಲ್ಲದೆ ಅವರನ್ನು (ಒಂದೇ ಹೋಟೆಲ್ ರೂಮ್‌) ನಲ್ಲಿ ಉಳಿಯುವಂತೆ ಮಾಡಿದ್ದೀರಿ. ʼನಿಮ್ಮ ಪುರುಷ ಮ್ಯಾನೇಜರ್, ನನ್ನ ಅಪ್ರಾಪ್ತ ಮಗಳನ್ನು ಅನುಚಿತ ರೀತಿಯಲ್ಲಿ ಅನೇಕ ಬಾರಿ ತಬ್ಬಿಕೊಂಡಿದ್ದಾರೆ. ಆಕೆಯು ಆಕ್ಷೇಪಗಳ ಹೊರತಾಗಿಯೂ ಇದೆಲ್ಲವನ್ನೂ ಮಾಡಲಾಗಿದೆ. ನಾನು ಅಥವಾ ನೀವು ಯಾರೂ ಇಲ್ಲದಿದ್ದಾಗ ನಿಮ್ಮ ಮ್ಯಾನೇಜರ್ ಈ ಕೃತ್ಯಗಳನ್ನು ಮಾಡಿದ್ದಾರೆ ಎಂಬುದನ್ನು ನೀವು ಅಲ್ಲಗಳೆಯುವಂತಿಲ್ಲ ಎಂದು ಆಲಿಯಾ ಪತ್ರದಲ್ಲಿ ಬರೆದಿದ್ದಾರೆ.

ಮೊನ್ನೆಯಷ್ಟೇ ಸಿದ್ದಿಕಿ, ನಾಲ್ಕು ತಿಂಗಳ ಹಿಂದೆ ದುಬೈನಲ್ಲಿ ಮಕ್ಕಳನ್ನು ಬಿಟ್ಟು ಹೋಗಿದ್ದ ತನ್ನ ಪತ್ನಿಯೇ ಈಗ ಹಣದ ಬೇಡಿಕೆಯ ನೆಪದಲ್ಲಿ ಅವರನ್ನು ವಾಪಸ್ ಕರೆಸಿಕೊಂಡಿದ್ದಾಳೆ ಎಂದು ಆರೋಪಿಸಿದ್ದರು. ತಮ್ಮ ಮಕ್ಕಳು ಈಗಾಗಲೇ 45 ದಿನಗಳ ಕಾಲ ಶಾಲೆಯಿಂದ ದೂರವಾಗಿದ್ದಾರೆ ಎಂದು ತಿಳಿಸಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿದ್ದ ಆಲಿಯಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ 4.30 ನಿಮಿಷಗಳ ಆಡಿಯೊ ಕ್ಲಿಪ್ ಅನ್ನು ಪೋಸ್ಟ್ ಮಾಡಿದರು, ಇದು ತನ್ನ ಮತ್ತು ಸಿದ್ದಿಕಿ ನಡುವಿನ ಸಂಭಾಷಣೆ ಎಂದು ಹೇಳಿಕೊಂಡಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News