Most Industry Hits Movies: ಭಾರತೀಯ ಚಿತ್ರರಂಗ ಸದ್ಯ ತನ್ನ ರೆಕ್ಕೆಗಳನ್ನು ಜಗತ್ತಿನೆಲ್ಲೆಡೆ ವಿಸ್ತರಿಸಿದ್ದು, ಆಸ್ಕರ್ ಮೆಟ್ಟಲುಗಳನ್ನು ಕೂಡ ತಲುಪುವಂತಾಗಿದೆ. ಸದ್ಯ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಇಂಡಸ್ಟ್ರಿ ಹಿಟ್ಸ್ ನೀಡಿದ ನಟರ ವಿವರವನ್ನು ಇಲ್ಲಿ ನೀಡಲಾಗಿದ್ದು, ಕನ್ನಡದ ಈ ಒಬ್ಬರಿಗೆ ಮಾತ್ರ ಸ್ಥಾನ ಸಿಕ್ಕಿದೆ.
ರಜನಿಕಾಂತ್ ಅವರು 70 ರ ದಶಕದಿಂದಲೂ ತಮಿಳು ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿದ್ದವರು. ಏಷ್ಯಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಇವರು ಕೂಡ ಒಬ್ಬರು. ಇನ್ನು ಭಾರತೀಯ ಚಿತ್ರರಂಗಕ್ಕೆ 15 ಇಂಡಸ್ಟ್ರಿ ಹಿಟ್ಸ್ ಸಿನಿಮಾಗಳನ್ನು ನೀಡಿದ್ದಾರೆ.
ಇದನ್ನೂ ಓದಿ: 1 ಐಪಿಎಲ್, 16 ಪಂದ್ಯ, 973 ರನ್: ಯಾರಿಂದಲೂ ಟಚ್ ಮಾಡೋಕಾಗ್ತಿಲ್ಲ ವಿರಾಟ್ ಸೃಷ್ಟಿಸಿದ ಈ ದಾಖಲೆಗಳನ್ನು!
ಮಲಯಾಳಂ ಚಲನಚಿತ್ರ ನಟ ಮಮ್ಮುಟ್ಟಿ ಅವರು ಮಾಲಿವುಡ್’ನ ಅದ್ಭುತ ಪ್ರತಿಭೆ ಎನ್ನಬಹುದು. ಇನ್ನು ಮಲಯಾಳಂ ಸಿನಿಮಾ ಇಡೀಗ ಭಾರತೀಯ ಸಿನಿರಂಗದಲ್ಲಿ ವಿಭಿನ್ನತೆಯನ್ನು ಕಾಪಾಡಿಕೊಂಡು ಬಂದ ಕ್ಷೇತ್ರ. ಈ ಸಿನಿರಂಗದಲ್ಲಿ ಮಮ್ಮುಟ್ಟಿ 12 ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
ಈ ತೆಲುಗು ಸ್ಟಾರ್ ಮದ್ರಾಸ್ ಫಿಲ್ಮ್ ಇನ್ಸ್ಟಿಟ್ಯೂಟ್ನಲ್ಲಿ ವಿದ್ಯಾರ್ಥಿಯಾಗಿದ್ದವರು. ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಅವರು ಒಟ್ಟು 9 ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
ಕಮಲ್ ಹಾಸನ್ ಎಂದರೆ ನೆನಪಿಗೆ ಬರುವ ಮೊದಲ ಸಿನಿಮಾ ವಿಶ್ವರೂಪಂ. ಒಂದು ಸಿನಿಮಾದಲ್ಲಿ ವಿಶ್ಬರೂಪವನ್ನೇ ಬಿಂಬಿಸಿದ ಈ ನಟ ಪ್ರಮುಖ ಭಾರತೀಯ ಭಾಷೆಗಳಾದ ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿ ಸುಮಾರು 220 ಚಿತ್ರಗಳಲ್ಲಿ ನಟಿಸಿದ್ದಾರೆ. ಒಟ್ಟು 5 ಹಿಟ್ ಸಿನಿಮಾಗಳನ್ನು ಮಾಡಿದ್ದಾರೆ.
ಅಮೀರ್ ಖಾನ್ ಅವರ ಬಾಲಿವುಡ್ ಸಿನಿಮಾಗಳಲ್ಲಿ ಅನೇಕವು ಮನದಲ್ಲಿ ಅಚ್ಚಳಿಯದೆ ನಿಲ್ಲುತ್ತವೆ. ಅದರಲ್ಲಿ ‘ತಾರೆ ಜಮೀನ್ ಪರ್’ ವಿಭಿನ್ನ. "ಮಿಸ್ಟರ್ ಪರ್ಫೆಕ್ಷನಿಸ್ಟ್ ಆಫ್ ಬಾಲಿವುಡ್" ಎಂದೂ ಕರೆಯಲ್ಪಡುವ ಅತ್ಯಂತ ಯಶಸ್ವಿ ಭಾರತೀಯ ಬಾಲಿವುಡ್ ನಟರಲ್ಲಿ ಒಬ್ಬರು. ಇವರ ಇಂಡಸ್ಟ್ರಿ ಹಿಟ್ ಸಿನಿಮಾ 5.
ರಾಮ್ ಚರಣ್ ತೇಜ ತಂದೆ ಮೆಗಾಸ್ಟಾರ್ ಚಿರಂಜೀವಿ ತರ ಪ್ರತಿಭಾವಂತ, ಸಿನಿಮಾ ಕುಟುಂಬದಿಂದ ಬಂದರೂ ಸಹ ತನ್ನ ಪ್ರತಿಭೆಯ ಮೂಲಕವೇ ತೆರೆಯಲ್ಲಿ ಆಳ್ವಿಕೆ ನಡೆಸಿದ್ದಾರೆ. ಅತಿ ಹೆಚ್ಚು ಸಂಭಾವನೆ ಪಡೆಯುವ ತೆಲುಗು ಚಲನಚಿತ್ರ ನಟರಲ್ಲಿ ಒಬ್ಬರು. ತೇಜ ಅವರಿಗೆ ಮೂರು ಫಿಲ್ಮ್ಫೇರ್ ಪ್ರಶಸ್ತಿಗಳು ಮತ್ತು ಎರಡು ನಂದಿ ಪ್ರಶಸ್ತಿಗಳನ್ನು ಲಭಿಸಿವೆ. 2013 ರಲ್ಲಿ ಅವರು ಫೋರ್ಬ್ಸ್ ಇಂಡಿಯಾದ ಸೆಲೆಬ್ರಿಟಿ 100 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟು 3 ಇಂಡಸ್ಟ್ರೀ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
ನಂದಮೂರಿ ಬಾಲಕೃಷ್ಣ ಅವರು ನಟ ಮತ್ತು ನಿರ್ಮಾಪಕ. ಇವರು ಭಾರತೀಯ ಸಿನಿರಂಗಕ್ಕೆ 3 ಇಂಡಸ್ಟ್ರಿ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
ಧಾರಾವಾಹಿ ಲೋಕದಿಂದ ಸಿನಿರಂಗವನ್ನು ಆಳುವುದೆಂದರೆ ಸುಲಭದ ಮಾತಲ್ಲ. ಇದಕ್ಕೆ ಸಾಧನೆ, ಶ್ರಮ ಅತೀ ಅಗತ್ಯ, ಇವೆಲ್ಲವನ್ನು ಕರಗತ ಮಾಡಿಕೊಂಡ ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ ಹೆಸರಿಗೆ ತಕ್ಕಂತೆ ಯಶಸ್ವಿ ನಟ. ಹಲವಾರು ಟಿವಿ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿ, ಬಳಿಕ ಮೊಗ್ಗಿನ ಮನಸು ಚಿತ್ರದ ಮೂಲಕ ದೊಡ್ಡ ಪರದೆಗೆ ಚೊಚ್ಚಲ ಪ್ರವೇಶ ಮಾಡಿದರು. ಇದೀಗ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಯಶ್ ಸ್ಯಾಂಡಲ್ವುಡ್’ನಲ್ಲಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದಾರೆ. ಇವರ ಇಂಡಸ್ಟ್ರೀ ಹಿಟ್ ಸಿನಿಮಾಗಳೆಂದರೆ ಮಿಸ್ಟರ್ ಆಂಡ್ ಮಿಸಸ್ ರಾಮಚಾರಿ (2014), K.G.F: ಪಾರ್ಟ್ 1 (2018), K.G.F: ಪಾರ್ಟ್ 2 (2022).
ತೆಲುಗು ಸಿನಿರಂಗದ ಮತ್ತೊಬ್ಬ ಸ್ಟಾರ್ ನಟ ಎಂದರೆ ಪ್ರಭಾಸ್. ಬಾಹುಬಲಿ ಸಿನಿಮಾ ಮೂಲಕ ಮತ್ತಷ್ಟು ಪ್ರಸಿದ್ಧಿ ಪಡೆದ ಅವರು ಒಟ್ಟು 2 ಇಂಡಸ್ಟ್ರೀ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
ಇದನ್ನೂ ಓದಿ: Janhvi Kapoor: ರೆಟ್ರೊ ಲುಕ್ ನಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಜಾನ್ವಿ ಕಪೂರ್!
ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ನಿಜವಾದ ಹೆಸರು ಕೊನಿಡೆಲಾ ಕಲ್ಯಾಣ್ ಬಾಬು. ಹಲವಾರು ವಿಮರ್ಶಾತ್ಮಕ ಮತ್ತು ಕಮರ್ಶಿಯಲ್ ಯಶಸ್ವಿ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇವರೂ ಸಹ ಒಟ್ಟು 2 ಇಂಡಸ್ಟ್ರೀ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.