MM Keeravani: ಆಸ್ಕರ್​ ಗೆದ್ದ ಸಂಗೀತ ನಿರ್ದೇಶಕ ಕೀರವಾಣಿಗೂ ಇದೆ ಕರುನಾಡ ನಂಟು

Oscars 2023 Winner MM Keeravani: ಆಸ್ಕರ್‌ ವಿಶ್ವದ ಅತಿದೊಡ್ಡ ಚಲನಚಿತ್ರ ಪ್ರಶಸ್ತಿ. ಈ ವರ್ಷ ಈ ಪ್ರಶಸ್ತಿಗಳನ್ನು ಲಾಸ್ ಏಂಜಲೀಸ್‌ನಲ್ಲಿ ಆಯೋಜಿಸಲಾಗಿದೆ. ಆರ್‌ಆರ್‌ಆರ್‌ನ ನಾಟು ನಾಟು ಹಾಡಿನ ಮೇಲೆ ಎಲ್ಲರ ಭರವಸೆಯೂ ಇತ್ತು. ಈ ಹಾಡು ಇತಿಹಾಸವನ್ನು ಸೃಷ್ಟಿಸಿದೆ ಮತ್ತು ಈ ವರ್ಷದ ಅತ್ಯುತ್ತಮ ಗೀತೆಗಾಗಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದಿದೆ.

Written by - Chetana Devarmani | Last Updated : Mar 13, 2023, 01:13 PM IST
  • ಆಸ್ಕರ್​ ಗೆದ್ದ ಸಂಗೀತ ನಿರ್ದೇಶಕ ಕೀರವಾಣಿ
  • ಆರ್‌ಆರ್‌ಆರ್‌ನ ನಾಟು ನಾಟು ಹಾಡಿಗೆ ಆಸ್ಕರ್‌ ಅವಾರ್ಡ್‌
  • ಸಂಗೀತ ನಿರ್ದೇಶಕ ಕೀರವಾಣಿಗೂ ಇದೆ ಕರುನಾಡ ನಂಟು
MM Keeravani: ಆಸ್ಕರ್​ ಗೆದ್ದ ಸಂಗೀತ ನಿರ್ದೇಶಕ ಕೀರವಾಣಿಗೂ ಇದೆ ಕರುನಾಡ ನಂಟು  title=
MM Keeravani

MM Keeravani Songs in Kannada : ಆಸ್ಕರ್‌ ವಿಶ್ವದ ಅತಿದೊಡ್ಡ ಚಲನಚಿತ್ರ ಪ್ರಶಸ್ತಿ. ಈ ವರ್ಷ ಈ ಪ್ರಶಸ್ತಿಗಳನ್ನು ಲಾಸ್ ಏಂಜಲೀಸ್‌ನಲ್ಲಿ ಆಯೋಜಿಸಲಾಗಿದೆ. ಆರ್‌ಆರ್‌ಆರ್‌ನ ನಾಟು ನಾಟು ಹಾಡಿನ ಮೇಲೆ ಎಲ್ಲರ ಭರವಸೆಯೂ ಇತ್ತು. ಈ ಹಾಡು ಇತಿಹಾಸವನ್ನು ಸೃಷ್ಟಿಸಿದೆ ಮತ್ತು ಈ ವರ್ಷದ ಅತ್ಯುತ್ತಮ ಗೀತೆಗಾಗಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದಿದೆ. ಆರ್‌ಆರ್‌ಆರ್‌ನ 'ನಾಟು ನಾಟು' ಹಾಡು ಇತ್ತೀಚಿನ ದಿನಗಳಲ್ಲಿ ಅನೇಕ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದೆ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಪ್ರಶಸ್ತಿಗಳನ್ನು ತಂದಿದೆ. ಈ ಎಲ್ಲಾ ಪ್ರಶಸ್ತಿಗಳ ಜೊತೆಗೆ, ಈ ಹಾಡು ವಿಶ್ವದ ಅತಿದೊಡ್ಡ ಚಲನಚಿತ್ರ ಪ್ರಶಸ್ತಿಯಾದ ಆಸ್ಕರ್ ಗೆಲ್ಲಬೇಕೆಂದು ಎಲ್ಲರೂ ಬಯಸಿದ್ದರು. 'ನಾಟು ನಾಟು' ಅತ್ಯುತ್ತಮ ಮೂಲ ಗೀತೆಗಾಗಿ ಆಸ್ಕರ್ ಪಡೆದಿದ್ದು, ಎಲ್ಲರ ಬಯಕೆ ಈಡೇರಿದೆ. 

ಇದೀಗ ಎಲ್ಲೆಲ್ಲೂ ಈ ಹಾಡಿನದ್ದೇ ಸುದ್ದಿ. ನಾಟು ನಾಟು ಹಾಡಿನ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಖ್ಯಾತಿ ವಿಶ್ವದೆಲ್ಲೆಡೆ ಹಬ್ಬಿದೆ. ಕೀರವಾಣಿ ತೆಲುಗಿನ ಜೊತೆಗೆ ಹಿಂದಿ, ತಮಿಳು ಮತ್ತು ಕನ್ನಡದ ಸಿನಿಮಾಗಳಿಗೂ ಕೆಲಸ ಮಾಡಿದ್ದಾರೆ. ಸ್ಯಾಂಡಲ್​ವುಡ್​ ಸಿನಿಮಾಗಳಿಗೆ ಸಹ ಎಂಎಂ ಕೀರವಾಣಿ ಸಂಗೀತ ನಿರ್ದೇಶನ ಮಾಡಿದ್ದಾರೆ. 

ಇದನ್ನೂ ಓದಿ : Oscars 2023 Winner: ʻನಾಟು ನಾಟುʼ ಹಾಡಿಗೆ ಆಸ್ಕರ್‌ ಪ್ರಶಸ್ತಿ, ಇತಿಹಾಸ ಸೃಷ್ಟಿಸಿದ RRR

1990ರಿಂದಲೂ ಸಿನಿರಂಗದಲ್ಲಿ ಕೀರವಾಣಿ ಸಕ್ರೀಯರಾಗಿದ್ದಾರೆ. ಕನ್ನಡದಲ್ಲಿ ಎಂ ಎಂ ಕೀರವಾಣಿ ಮೊದಲು ಸಂಗೀತ ನೀಡಿದ್ದು ‘ಅಳಿಮಯ್ಯ’ ಸಿನಿಮಾದ ಹಾಡಿಗೆ. ಆ ಸಿನಿಮಾದಲ್ಲಿ ಅರ್ಜುನ್​ ಸರ್ಜಾ, ಶ್ರುತಿ, ಲೋಕೇಶ್​ ಸೇರಿದಮತೆ ಮುಂತಾದವರು ನಟಿಸಿದ್ದರು. ಅಪ್ಪಾಜಿ, ಭೈರವ, ಸ್ವಾತಿ, ಕರ್ನಾಟಕ ಸುಪುತ್ರ, ದೀಪಾವಳಿ, ಜಮೀನ್ದಾರ್ರು ಸೇರಿದಂತೆ ಅನೇಕ ಕನ್ನಡ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ತೆಲುಗಿನಿಂದ ಕನ್ನಡಕ್ಕೆ ರಿಮೇಕ್​ ಆದ ಮರ್ಯಾದೆ ರಾಮಣ್ಣ, ವೀರ ಮದಕರಿ ಹಾಡುಗಳಿಗೆ ಸಹ ಕೀರವಾಣಿ ಅವರೇ ಸಂಗೀತ ಸಂಯೋಜನೆ ಮಾಡಿದ್ದಾರೆ. 

2001ರಲ್ಲಿ ರಾಜಮೌಳಿ ಮೊದಲ ಬಾರಿಗೆ ನಿರ್ದೇಶನ ಮಾಡಿದ ಸ್ಟೂಡೆಂಟ್​ ನಂ.1 ಸಿನಿಮಾದಿಂದ ಹಿಡಿದು 2022ರಲ್ಲಿ ತೆರೆಕಂಡ ಆರ್‌ಆರ್‌ಆರ್‌ ವರೆಗೂ ಅವರ ಎಲ್ಲ ಸಿನಿಮಾಗಳಿಗೂ ಎಂಎಂ ಕೀರವಾಣಿ ಸಂಗೀತ ನಿರ್ದೇಶಿಸಿದ್ದಾರೆ. ಆಸ್ಕರ್​ ಪ್ರಶಸ್ತಿ ಗೆದ್ದ ಎಂಎಂ ಕೀರವಾಣಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. 

ಇದನ್ನೂ ಓದಿ : Oscars 2023 : ಆಸ್ಕರ್‌ ವೇದಿಕೆ ಮೇಲೆ ಕಣ್ಣೀರಿಟ್ಟ ದೀಪಿಕಾ.. ಕಾರಣ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News