ಬೆಂಗಳೂರು: ಮೈಸೂರು ಬೆಂಗಳೂರು ಎಕ್ಸ್ ಪ್ರೆಸ್ ವೇ ಟೋಲ್ ಸಂಗ್ರಹ ಹಿನ್ನೆಲೆ ಇಷ್ಟು ದಿವಸ ದುಬಾರಿ ಟೋಲ್ನಿಂದ ವಾಹನ ಸವಾರರು ಪರಾದಾಡುತ್ತಿದ್ದರು ಇನ್ನು ಮುಂದೆ ಕೆಎಸ್ಆರ್ಟಿಸಿ ಬಸ್ ಪ್ರಯಾಣಿಕರನ್ನು ಸಂಕಷ್ಕೆ ಈಡು ಮಾಡಿದೆ ಬಸ್ಸು ಪ್ರೀಯರಿಗೆ ಕುತ್ತುಎದುರಾಗಾಸಿದೆ.
ಕೆಎಸ್ಆರ್ಟಿಸಿ ನಿಗಮ ಪ್ರಯಾಣಿಕರಿಗೆ ಟೊಲ್ ಹೊರೆಯನ್ನು ಹೊರಿಸುವ ನಿರ್ಧಾರ ಮಾಡಿದೆ.ಈ ಎಕ್ಸ್ ಪ್ರೆಸ್ ವೇ ನಲ್ಲಿ ಸಂಚರಿಸೋ ಸಾಮಾನ್ಯ ಸಾರಿಗೆ ಪ್ರಯಾಣಿಕರಿಗೆ 15 ರೂ, ರಾಜಹಂಸ ಬಸ್ಸುಗಳಿಗೆ 18 ರೂ, ಹಾಗೂ ಮಲ್ಟಿ ಆ್ಯಕ್ಸಲ್ ಬಸ್ಗಳಿಗೆ 20 ರೂ ಶುಲ್ಕ ನಿಗದಿ ಪಡಿಸಿದೆ. ಪ್ರಯಾಣಿಕರ ಟಿಕೆಟ್ ದರದಲ್ಲಿ ಈ ಶುಲ್ಕ ವಸೂಲಿ ಮಾಡಲಾಗುತ್ತದೆ.
ಇದನ್ನೂ ಓದಿ: Bengaluru Airhostess: ಡೇಟಿಂಗ್ ಆ್ಯಪಲ್ಲಿ ಲವ್: ಮದುವೆಯಾಗು ಎಂದಿದ್ದಕ್ಕೆ ಗಗನಸಖಿ ಕೊಂದ ಟೆಕ್ಕಿ!
ಈ ಬಳಕೆದಾರ ಶುಲ್ಕವು ಸಂಪೂರ್ಣವಾಗಿ ಎಕ್ಸ್‌ಪ್ರೆಸ್ ಹೈವೇ ಮೂಲಕ ಸಂಚರಿಸುವ ಬಸ್ಗಳ ಪ್ರಯಾಣಿಕರಿಗೆ ಮಾತ್ರ ಅನ್ವಯವಾಗಲಿದೆ. ಇನ್ನುಳಿದ ಸಾರಿಗೆ ಇದು ಅನ್ವಯಿಸುವುದಿಲ್ಲ. ಎಲ್ಲ ಟೋಲ್ ರಸ್ತೆಗಳಲ್ಲಿ ಈ ಪದ್ಧತಿಯನ್ನು ಅನುಸರಿಸಲಾಗುತ್ತಿದೆ ಎಂದು ಸಾರಿಗೆ ನಿಗಮ ತಿಳಿಸಿದೆ. ಈಗಾಗಲೇ ದುಬಾರಿ ಟೋಲ್ ಸಂಗ್ರಹಕ್ಕೆ ವಾಹನ ಸವಾರರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ́Health Department Employees Protest: 30ನೇ ದಿನಕ್ಕೆ ಕಾಲಿಟ್ಟ ಒಳಗುತ್ತಿಗೆ ಆರೋಗ್ಯ ಸಿಬ್ಬಂದಿಗಳ ಮುಷ್ಕರʼ
ಈ ಮಧ್ಯೆ ಕೆಎಸ್ಆರ್ಟಿಸಿ ಬಸ್ಗಳ ಟಿಕೆಟ್ ದರವನ್ನು ಹೆಚ್ಚಿಸಿರುವುದು ಮಧ್ಯಮ ವರ್ಗದವರನ್ನು ಇನಷ್ಟು ಸಂಕಷ್ಟ ಈಡುಮಾಡಿದೆ.ಇಂದಿನಿಂದಲೇ ಮೈಸೂರು ಬೆಂಗಳೂರು ಎಕ್ಸ್ ಪ್ರೆಸ್ ವೇ ನಲ್ಲಿ ಸಂಚರಿಸೋ ಬಸ್ಸುಗಳಿಗೆ ಮಾತ್ರ ದರ ಅನ್ವಯಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.