ಬೆಂಗಳೂರು: ಹಿಂದೂ ಧರ್ಮದಲ್ಲಿ ಶಕುನ-ಅಪಶಕುನಗಳ ಬಗ್ಗೆಯೂ ಹಲವರು ನಂಬುತ್ತಾರೆ. ಆಕಸ್ಮಿಕವಾಗಿ ಕೆಲವು ವಸ್ತುಗಳು ಕೈಯಿಂದ ಕೆಳಗೆ ಬೀಳುವುದು ಸಹಜವೇ ಆದರೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಇವು ಮುಂದಾಗಬಹುದಾದ ಶುಭ-ಅಶುಭ ಫಲಗಳ ಬಗ್ಗೆ ಸೂಚಿಸುವ ಸಂಕೇತ ಎಂದು ಹೇಳಲಾಗುತ್ತದೆ. ಈ ವಸ್ತುಗಳು ಎಂದಾದರೂ ನಿಮ್ಮ ಕೈಯಿಂದ ಕೆಳಗೆ ಬಿದ್ದಿದೆಯೇ? ಒಂದೊಮ್ಮೆ ಹೌದು, ಎಂದಾದರೆ, ಯಾವ ವಸ್ತುಗಳು ಕೆಳಗೆ ಬೀಳುವುದನ್ನು ಅಶುಭ ಎಂದು ಹೇಳಲಾಗುತ್ತದೆ. ಅದರ ಪರಿಣಾಮಗಳೇನು ಎಂದು ತಿಳಿಯೋಣ...
ಈ ವಸ್ತುಗಳು ಕೈಯಿಂದ ಕೆಳಗೆ ಬೀಳುವುದು ಅಮಂಗಳಕರ:
* ಅಕ್ಕಿ:
ಮಾತೆ ಅನ್ನಪೂರ್ಣೆಯ ಸಂಕೇತವಾಗಿರುವ ಅಕ್ಕಿಯನ್ನು ಲಕ್ಷ್ಮಿ ಸ್ವರೂಪಿಣಿ ಎಂತಲೂ ಕರೆಯಲಾಗುತ್ತದೆ. ಅಕ್ಕಿ ನಿಮ್ಮ ಕೈಯಿಂದ ಕೆಳಗೆ ಬೀಳುವುದನ್ನು ಧನ ಹಾನಿಯ ಸಂಕೇತ ಎಂದು ಹೇಳಲಾಗುತ್ತದೆ.
* ತುಪ್ಪದ ದೀಪ:
ಸಾಮಾನ್ಯವಾಗಿ ಶುಭ ಸಂದರ್ಭಗಳಲ್ಲಿ ದೇವರಿಗೆ ತುಪ್ಪದ ದೀಪವನ್ನು ಹಚ್ಚಲಾಗುತ್ತದೆ. ಇಂತಹ ತುಪ್ಪದ ದೀಪ ಕೆಳಗೆ ಬಿದ್ದರೆ ಅದು ಮುಂದಾಗಬಹುದಾದ ಅಹಿತಕರ ಘಟನೆಯ ಬಗ್ಗೆ ನಿಮಗೆ ಸೂಚಿಸುತ್ತಿದೆ ಎಂದರ್ಥ.
ಇದನ್ನೂ ಓದಿ- Chanakya Niti : ಈ 5 ವಿಷಯಗಳನ್ನು ಯಾವಾಗಲು ನೆನಪಿನಲ್ಲಿಡಿ, ಯಶಸ್ಸು - ಪ್ರಗತಿ ನಿಮ್ಮದಾಗಿರುತ್ತೆ!
* ಎಣ್ಣೆ ಪಾತ್ರೆ:
ಎಣ್ಣೆ ಪಾತ್ರೆ ಕೈಯಿಂದ ಜಾರಿ ಬಿದ್ದರೆ ಅದು ನಿಮ್ಮ ಆತ್ಮೀಯರು ಕಷ್ಟದಲ್ಲಿದ್ದಾರೆ ಅಥವಾ ನಿಮ್ಮ ಆತ್ಮೀಯರಿಗೆ ಏನಾದರೂ ಕೆಡುಕಾಗಬಹುದು ಎಂಬುದರ ಸಂಕೇತ ಎನ್ನಲಾಗುವುದು.
* ಉಪ್ಪು:
ಊಟದ ರುಚಿಯನ್ನು ಹೆಚ್ಚಿಸಬಲ್ಲ ಉಪ್ಪಿಗೂ ಸಹ ಶಾಸ್ತ್ರಗಳಲ್ಲಿ ಮಹತ್ವದ ಸ್ಥಾನವನ್ನು ನೀಡಲಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಉಪ್ಪು ಕೈತಪ್ಪಿ ಕೆಳಗೆ ಚೆಲ್ಲುವುದು ಮನೆಯಲ್ಲಿ ಆರ್ಥಿಕ ಸಂಕಷ್ಟ ಎದುರಾಗಲಿದೆ ಎಂಬುದರ ಸಂಕೇತ ಎಂದು ಬಣ್ಣಿಸಲಾಗುತ್ತದೆ.
ಇದನ್ನೂ ಓದಿ- Tulsi Niyam: ಮನೆಯಲ್ಲಿ ತುಳಸಿ ನೆಡುವಾಗ ಈ ತಪ್ಪನ್ನು ಮಾಡಬೇಡಿ, ಬಡವರಾಗುತ್ತಾರೆ!
* ಅರಿಶಿನ- ಕುಂಕುಮ:
ಹಿಂದೂ ಧರ್ಮದಲ್ಲಿ ಅರಿಶಿನ-ಕುಂಕುಮವನ್ನು ಮಂಗಳಕರ, ಹೆಣ್ಣು ಮಕ್ಕಳಿಗೆ ಅದು ಸೌಭಾಗ್ಯದ ಸಂಕೇತ ಎಂಬ ನಂಬಿಕೆ ಇದೆ. ಅಂತಹ ಮಂಗಳಕರ ಅರಿಶಿನ-ಕುಂಕುಮವು ಕೆಳಗೆ ಬೀಳುವುದು ಶೀಘ್ರದಲ್ಲೇ ನಿಮ್ಮ ಕುಟುಂಬದಲ್ಲಿ ಏನಾದರೂ ಅನಾಹುತವಾಗಲಿದೆ, ಅಶುಭ ಸುದ್ದಿ ಕೇಳುವ ಸಂಭವವಿದೆ ಎಂಬುದನ್ನು ಇದು ಸೂಚಿಸುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.