Samudrika Shastra on Good luck: ಹಿರಿಯರು ಅನೇಕ ಬಾರಿ ಹೇಳುವುದನ್ನು ಕೇಳಿರುತ್ತೀರಿ; ಯಾವುದೇ ಕಾರ್ಯ ಮಾಡುವಾಗಲೂ ಬಲಭಾಗದಿಂದ ಪ್ರಾರಂಭಿಸಬೇಕು, ಅದು ಶುಭಲಕ್ಷಣ ಎಂದು. ಇಂದು ನಾವು ಇದೇ ವಿಚಾರವಾಗಿ ನಿಮಗೆ ಒಂದಿಷ್ಟು ಮಾಹಿತಿ ನೀಡಲಿದ್ದೇವೆ.
ಹಿಂದೂ ಧರ್ಮದಲ್ಲಿ ಸಾಮುದ್ರಿಕ ಶಾಸ್ತ್ರಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಪುರಾಣ, ಶಾಸ್ತ್ರ, ಗ್ರಂಥಗಳಲ್ಲಿ ಹೇಳಿರುವ ಪ್ರತೀ ವಿಚಾರಗಳನ್ನು ಪಾಲಿಸುತ್ತೇವೆ. ಅಂತೆಯೇ ನಾವು ಮನೆಯಿಂದ ಹೊರಡುವಾಗ ಯಾವ ಪಾದವನ್ನು ಅಥವಾ ಯಾವ ಕಾಲನ್ನು ಮೊದಲು ಹೊರಗೆ ಹಾಕಬೇಕೆಂದು ಸಾಮುದ್ರಿಕ ಶಾಸ್ತ್ರದಲ್ಲಿ ಹೇಳಲಾಗಿದೆ.
ಮನೆಯಿಂದ ಹೊರಡುವಾಗ ಬಲಗಾಲನ್ನು ಮೊದಲು ಹೊಸ್ತಿಲಿನಿಂದ ಹೊರಗೆ ಇಡಬೇಕು. ಇದು ಒಂದು ರೀತಿಯ ಸಂಪ್ರದಾಯವೂ ಹೌದು.
ಅದೃಷ್ಟ, ಶುಭ ಸೂಚಕವಾಗಿರುವ ಇದನ್ನು ಹಿಂದೂ ಧರ್ಮದಲ್ಲಿ ಪ್ರತಿಯೊಬ್ಬರು ಪಾಲಿಸುತ್ತಾರೆ. ಉದಾಹರಣೆಗೆ ಮನೆಗೆ ಮದುವೆಯಾಗಿ ಮೊದಲು ಆಗಮಿಸುವಾಗ ವಧುವಿಗೆ ಬಲಗಾಲಿಟ್ಟು ಮನೆ ಪ್ರವೇಶಿಸುವಂತೆ ಹೇಳಲಾಗುತ್ತದೆ. ಇದಕ್ಕೆ ಕಾರಣ ಶುಭವಾಗಲಿ ಎಂಬುದು.
ಮನೆಯಿಂದ ಹೊರಗಡೆ ಹೋಗುವಾಗ ಮೊದಲು ಬಲಗಾಲನ್ನು ಇಡಬೇಕು ಎನ್ನುವುದು ಸಂಸ್ಕಾರ ಕೂಡ ಹೌದು. ಹೀಗೆ ಮಾಡಿದರೆ ಕೈಗೊಂಡ ಪ್ರತೀ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಎಂಬುದು ನಂಬಿಕೆ.
ಮನೆಯಿಂದ ಹೊರಗೆ ಹೊರಡುವಾಗ ಬಲಗಾಲನ್ನು ಮೊದಲು ಇರಿಸಿದರೆ, ನೀವು ಕೈಗೊಂಡ ಎಲ್ಲಾ ಕೆಲಸಗಳು ಉತ್ತಮವಾಗಿ ಪೂರ್ಣಗೊಳ್ಳುತ್ತವೆ ಎಂದು ಶಾಸ್ತ್ರದಲ್ಲಿ ಬರೆಯಲಾಗಿದೆ.
(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)