Kiran Raj New Film: ಯುಗಾದಿ ಹಬ್ಬಕ್ಕೆ ಬಿಡುಗಡೆಯಾಯಿತು "ರಾನಿ" ಚಿತ್ರದ ಪೋಸ್ಟರ್..

Kiran Raj New Film:  ಸ್ಟಾರ್ ಕ್ರಿಯೇಷನ್ಸ್ ಮೂಲಕ ಚಂದ್ರಕಾಂತ್ ಪೂಜಾರಿ ಅವರು ನಿರ್ಮಿಸಿರುವ ಕಿರಣ್ ರಾಜ್ ನಾಯಕರಾಗಿ ನಟಿಸುತ್ತಿರುವ "ರಾನಿ" ಚಿತ್ರದ ಪೋಸ್ಟರ್ ಯಗಾದಿ ಹಬ್ಬಕ್ಕೆ ಬಿಡುಗಡೆಯಾಗಿದೆ. ನಾಯಕ ಕಿರಣ್ ರಾಜ್ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

Written by - YASHODHA POOJARI | Last Updated : Mar 24, 2023, 10:20 AM IST
  • ಕಿರಣ್ ರಾಜ್ ನಟನೆಯ "ರಾನಿ" ಚಿತ್ರದ ಪೋಸ್ಟರ್ ಬಿಡುಗಡೆ
  • "ರಾನಿ" ಚಿತ್ರಕ್ಕಾಗಿ 7 ಸೆಟ್
  • ಗುರುತೇಜ್ ಶೆಟ್ಟಿ ನಿರ್ದೇಶನದ ಚಿತ್ರ
Kiran Raj New Film: ಯುಗಾದಿ ಹಬ್ಬಕ್ಕೆ ಬಿಡುಗಡೆಯಾಯಿತು "ರಾನಿ" ಚಿತ್ರದ ಪೋಸ್ಟರ್.. title=

Ronny Poster Release:  ಸ್ಟಾರ್ ಕ್ರಿಯೇಷನ್ಸ್ ಮೂಲಕ ಚಂದ್ರಕಾಂತ್ ಪೂಜಾರಿ, ಉಮೇಶ್ ಹೆಗ್ಡೆ ಅವರು ನಿರ್ಮಿಸಿರುವ,  ಗುರುತೇಜ್ ಶೆಟ್ಟಿ ಕಥೆ  ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಹಾಗೂ ಕಿರಣ್ ರಾಜ್ ನಾಯಕರಾಗಿ ನಟಿಸುತ್ತಿರುವ "ರಾನಿ" ಚಿತ್ರದ ಪೋಸ್ಟರ್ ಯಗಾದಿ ಹಬ್ಬಕ್ಕೆ ಬಿಡುಗಡೆಯಾಗಿದೆ. ನಾಯಕ ಕಿರಣ್ ರಾಜ್ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಕಿರಣ್ ರಾಜ್ 13,000 ಅಡಿ ಎತ್ತರದಿಂದ ಜಿಗಿದು ಟೈಟಲ್ ಬಿಡುಗಡೆ ಮಾಡಿ ಚಿತ್ರರಂಗ ಹಾಗೂ ಪ್ರೇಕ್ಷಕರಿಂದ  ಪ್ರಶಂಸೆ ಪಡೆದುಕೊಂಡಿದ್ದರು.  ಈಗ ಬಿಡುಗಡೆಯಾಗಿರುವ ಮಾಸ್ ಲುಕ್ ಪೋಸ್ಟರ್ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಕಿರಣ್ ರಾಜ್ ಚಿತ್ರದಲ್ಲಿ ಭರ್ಜರಿ ಫೈಟ್ಸ್  ಮಾಡಿದಾರಂತೆ, ಚಿತ್ರದಲ್ಲಿ 6 ಸಾಹಸ ಸನ್ನಿವೇಶಗಳಿದೆ‌. "ರಾನಿ" ಚಿತ್ರಕ್ಕಾಗಿ 7 ಸೆಟ್ ಗಳನ್ನು ಹಾಕಲಾಗಿದೆ‌.

ಇದನ್ನೂ ಓದಿ: Anveshi Jain : ನಿದ್ದೆ ಕೆಡಿಸುವಂತಿದೆ ʼಮಾರ್ಟಿನ್‌ʼ ಚಿತ್ರದ ನಟಿಯ ಅದ್ಭುತ ಸೌಂದರ್ಯ..!

 5 ಸೆಟ್ ಗಳಲ್ಲಿ ಚಿತ್ರಿಕರಣ ಈಗಾಗಲೇ ಮುಗಿದಿದೆ.  ಈಗಾಗಲೇ ಶೇಕಡಾ 60 ರಷ್ಟು ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ.   ರವಿಶಂಕರ್, ಮೈಕೋ ನಾಗರಾಜ್, ನಾಗತಿ ಹಳ್ಳಿ ಚಂದ್ರಶೇಖರ್, ಬಿ ಸುರೇಶ, ಉಗ್ರಂ ಮಂಜು, ಉಗ್ರಂ ರವಿ, ಧರ್ಮಣ್ಣ, ಸೂರ್ಯ ಕುಂದಾಪುರ, ಗಿರೀಶ್ ಹೆಗ್ಡೆ, ಪೃಥ್ವಿರಾಜ್‌, ಯಶ್ ಶೆಟ್ಟಿ, ಉಮೇಶ್, ಸುಜಯ್ ಶಾಸ್ತ್ರಿ, ಲಕ್ಷ್ಮಿ ಸಿದ್ದಯ್ಯ, ಸಂದೀಪ್ ಮಲಾನಿ, ಅನಿಲ್, ಧರ್ಮೆಂದ್ರ ಆರಸ್, ಮನಮೋಹನ್ ರೈ ಮುಂತಾದವರ ತಾರಾಬಳಗ ಚಿತ್ರಕ್ಕಿದೆ‌.

ಇದನ್ನೂ ಓದಿ: ಮೊದಲ ಪ್ಯಾನ್ ಇಂಡಿಯಾ ಮಕ್ಕಳ ಚಿತ್ರಕ್ಕೆ ರಾಗಿಣಿ ದ್ವಿವೇದಿ ಸಾಥ್..!

 "ಸಿಂಗಾರ ಸಿರಿಯೆ" ಹಾಡು ಬರೆದಿರುವ ಪ್ರಮೋದ್ ಮರವಂತೆ ಈ ಚಿತ್ರದ ನಾಲ್ಕು ಹಾಡುಗಳನ್ನು ಬರೆದಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ.  ಸೂಕ್ಷ್ಮ ಕಥೆಯುಳ್ಳ,   ಪಕ್ಕ ಆಕ್ಷನ್ ಚಿತ್ರ ಇದಾಗಿದ್ದು, ಎಲ್ಲಾ ರಾಜ್ಯದಲ್ಲೂ ಕನ್ನಡದಲ್ಲೇ ಬಿಡುಗಡೆ ಯಾಗಲಿದೆ.  ಡಿಸೆಂಬರ್ ನಲ್ಲಿ ಚಿತ್ರ ತೆರೆಗೆ ಬರಲಿದೆ. ಚಿತ್ರದಲ್ಲಿ ಮೂವರು ನಾಯಕಿಯರಿದ್ದಾರೆ.   ಮುಂದಿನ ದಿನಗಳಲ್ಲಿ ನಾಯಕಿಯರು ಯಾರು ಎಂಬುದನ್ನು  ತಿಳಿಸುತ್ತೇವೆ ಎನ್ನುತ್ತಾರೆ ನಿರ್ದೇಶಕ ಗುರುತೇಜ್ ಶೆಟ್ಟಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

 

Trending News