Health tips: ತುಂಬೆ ಗಿಡ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗುಣ ಹೊಂದಿದೆ. ಅಂದರೆ ಅದರಲ್ಲಿ ಅಗಾಧ ಔಷಧಿಗುಣ ಅಡಕವಾಗಿದೆ. ಹಳ್ಳಿಗಳಲ್ಲಿ ಸರ್ವೇಸಾಮಾನ್ಯವಾಗಿ ಇದರ ಪರಿಚಯದ ಜೊತೆಗೆ ಇದರ ಔಷಧಿ ಗುಣಗಳನ್ನು ಕಂಡುಕೊಂಡಿರುತ್ತಾರೆ.
Health tips: ತುಂಬೆ ಗಿಡ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗುಣ ಹೊಂದಿದೆ. ಅಂದರೆ ಅದರಲ್ಲಿ ಅಗಾಧ ಔಷಧಿಗುಣ ಅಡಕವಾಗಿದೆ. ಹಳ್ಳಿಗಳಲ್ಲಿ ಸರ್ವೇಸಾಮಾನ್ಯವಾಗಿ ಇದರ ಪರಿಚಯದ ಜೊತೆಗೆ ಇದರ ಔಷಧಿ ಗುಣಗಳನ್ನು ಕಂಡುಕೊಂಡಿರುತ್ತಾರೆ. ಹಾಗಿದ್ದರೇ ಈ ಸಸ್ಯ ಯಾವ ಯಾವ ರೋಗಕ್ಕೆ ಮದ್ದಾಗಿದೆ ನೋಡೊಣ..
ವಾತಾವರಣದಲ್ಲಿ ಬದಲಾವಣೆ ಆಗುತ್ತಿದ್ದಂತೆ ಪ್ರತಿ ವಯಸ್ಕರಲ್ಲಿ ಜ್ವರ ನೆಗಡಿ ಶುರುವಾಗುತ್ತದೆ. ಅದಕ್ಕೆ ಸುಲಭ ಪರಿಹಾರವಾಗಿ ತುಂಬೆ ಗಿಡದ ಎಲೆಯ ರಸದ ಜೊತೆಗೆ ಕಾಳು ಮೆಣಸಿನ ಬೆರೆಸಿ ಕುಡಿಯುವುದರಿಂದ ಜ್ವರ ಅಥವಾ ನೆಗಡಿ ಶಮನಗೊಳ್ಳುತ್ತದೆ.
ತುಂಬೆ ಗಿಡಯು ಅದರ ಪ್ರತಿಯೊಂದು ಭಾಗದಲ್ಲಿ ಔಷಧಿ ಗುಣ ಹೊಂದಿದೆ. ಮಹಿಳೆಯರಿಗೆ ಮಕ್ಕಳಿಗೆ ಎಲ್ಲರಿಗೂ ಸಹಕಾರಿಯಾಗಿದೆ.
ಹಾಲಿನ ಜೊತೆ ತುಂಬೆ ರಸವನ್ನು ಪ್ರತಿ ನಿತ್ಯ ಹಚ್ಚುವುದರಿಂದ ಕಾಲ ಕ್ರಮೇಣ ಕಪ್ಪು ಕಲೆಗಳು ನಿಯಂತ್ರಣಕ್ಕೆ ಬರುತ್ತದೆ.
ಮಕ್ಕಳ ಹೊಟ್ಟೆಯಲ್ಲಿ ಕಂಡುಬರುವ ಜಂತುಹುಳುವಿನ ಸಮಸ್ಯೆ ನಿವಾರಿಸಲು ತುಂಬೆ ಗಿಡವನ್ನು ಮನೆಮದ್ದಾಗಿ ಬಳಸಬಹುದು
ತುಂಬೆ ಗಿಡದ ಕಾಂಡಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿದ ನೀರಿನಿಂದ ನೋವು ಇರುವ ಜಾಗಕ್ಕೆ ಬಟ್ಟೆಯಿಂದ ಒತ್ತಿಕೊಳ್ಳುವುದರಿಂದ ಮೈ ಕೈ ನೋವು ನಿಯಂತ್ರಣಕ್ಕೆ ಬರುತ್ತದೆ.
ಆಗಾಗ ವಾಕರಿಗೆ, ಹೊಟ್ಟೆ ಬಂದರೆ ಆ ಸಮಯದಲ್ಲಿ ತುಂಬೆ ಎಲೆಯ ಜೊತೆಗೆ ಸ್ವಲ್ಪ ಉಪ್ಪು ಹಾಕಿ ಕುದಿಸಿ ಕುಡಿಯುವುದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ.