ಎಂಜಿನಿಯರ್'ಗಳಿಗೆ SBI ನಲ್ಲಿ ಉದ್ಯೋಗಾವಕಾಶ, 80 ಲಕ್ಷದವರೆಗೆ ಸಿಗಲಿದೆ ವೇತನ

ಎಸ್ಬಿಐಗೆ ಮುಖ್ಯ ತಾಂತ್ರಿಕ ಅಧಿಕಾರಿ ಮತ್ತು ಡಿಜಿಎಂ ಅಗತ್ಯವಿದೆ.

Last Updated : Jan 29, 2019, 10:19 AM IST
ಎಂಜಿನಿಯರ್'ಗಳಿಗೆ SBI ನಲ್ಲಿ ಉದ್ಯೋಗಾವಕಾಶ, 80 ಲಕ್ಷದವರೆಗೆ ಸಿಗಲಿದೆ ವೇತನ title=

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಪರವಾಗಿ ವಿಶೇಷ ಕೇಡರ್ ಅಧಿಕಾರಿಗಳ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕಾಂಟ್ರಾಕ್ಟ್ ಮತ್ತು ರೆಗ್ಯುಲರ್ ಆಧಾರದ ಮೇಲೆ ಈ ಕೆಲಸ ತೆಗೆದುಕೊಳ್ಳಲಾಗುವುದು. ಎಸ್ಬಿಐನಲ್ಲಿ ಕಾರ್ಯ ನಿರ್ವಹಿಸಲು ಟಾಪ್ ಎಕ್ಸಿಕ್ಯೂಟಿವ್ ಅವಶ್ಯಕತೆ ಇದ್ದು, ಅದಕ್ಕಾಗಿ  40 ಲಕ್ಷದಿಂದ 80 ಲಕ್ಷವರೆಗೆ ಪ್ಯಾಕೇಜ್ ಆಫರ್ ಮಾಡಲಾಗಿದೆ. ಒಂದು ಹುದ್ದೆ 3 ವರ್ಷ ಕಾಂಟ್ರಾಕ್ಟ್ ಆಗಿದ್ದು, ಇನ್ನೊಂದು ರೆಗ್ಯುಲರ್ ಜಾಬ್ ಆಗಿದೆ. 

ಒಟ್ಟು ಎರಡು ಪೋಸ್ಟ್ ಗಳಿದ್ದು, ಎರಡೂ ಹುದ್ದೆಗಳಿಗೆ ಅರ್ಜಿ ಪ್ರಕ್ರಿಯೆ ಫೆಬ್ರವರಿ 11 ರ ತನಕ ನಡೆಯುತ್ತಿದೆ. ಯಾವುದೇ ಅರ್ಹ ಅಭ್ಯರ್ಥಿ ವಿಶೇಷ ಕೇಡರ್ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮೊದಲು, ಅಭ್ಯರ್ಥಿ ಶೈಕ್ಷಣಿಕ ಅರ್ಹತೆಗಳು, ವಯಸ್ಸಿನ ಮಿತಿ, ವೇತನ ಪ್ರಮಾಣ, ಅನುಭವ ಮತ್ತು ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದ ಮಾಹಿತಿಯನ್ನು ತಪ್ಪದೇ ತಿಳಿಯಿರಿ.

ಎಸ್ಬಿಐ ಮುಖ್ಯ ಟೆಕ್ನೋಲೊಜಿ ಆಫಿಸರ್ ಗಾಗಿ ಒಂದು ಹುದ್ದೆ ಮತ್ತು ಡಿಪಾರ್ಟ್ಮೆಂಟ್ ಜನರಲ್ ಮ್ಯಾನೇಜರ್ (E&TA) ನ ಒಂದು ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಎರಡೂ ಹುದ್ದೆಗಳಿಗೆ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸಿನ ಮಿತಿ 50 ವರ್ಷಗಳು (2018 ರ ನವೆಂಬರ್ 30 ರವರೆಗೆ). ಅಭ್ಯರ್ಥಿಗಳ ಆಯ್ಕೆ ಸಂದರ್ಶನವನ್ನು ಆಧರಿಸಿರುತ್ತದೆ. ಎರಡೂ ಉದ್ಯೋಗಗಳು ನವೀ ಮುಂಬಯಿಗಾಗಿ ಇವೆ.

ಮುಖ್ಯ ತಂತ್ರಜ್ಞಾನ ಅಧಿಕಾರಿಯ ವಿದ್ಯಾರ್ಹತೆ ಬಿ.ಟೆಕ್ / ಎಂಸಿಎ / ಬಿಇ / ಎಂಎಸ್ಸಿ / ಎಂ.ಟೆಕ್ ಆಗಿರಬೇಕು. ಅಭ್ಯರ್ಥಿಗೆ ಐಟಿ ಕ್ಷೇತ್ರದಲ್ಲಿ ಕನಿಷ್ಠ 20 ವರ್ಷಗಳ ಅನುಭವವಿರಬೇಕು. ಸಾಫ್ಟ್ವೇರ್ ಅಭಿವೃದ್ಧಿಯ ಕ್ಷೇತ್ರದಲ್ಲಿ ಅನುಭವ ಇರುವವರಿಗೆ ಆದ್ಯತೆ ನೀಡಲಾಗುವುದು. 20 ವರ್ಷಗಳಲ್ಲಿ 10 ವರ್ಷ  ಹಿರಿಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕೆಲಸ ಮಾಡಿದ ಅನುಭವ ಇರಬೇಕು. ಆರ್ಥಿಕ ವಲಯದಲ್ಲಿ 3 ವರ್ಷಗಳ ಅನುಭವ ಇರಬೇಕು.

ಡಿಪ್ಯೂಟಿ ಜನರಲ್ ಮ್ಯಾನೇಜರ್ (ಇ & ಟಿಎ) ಹುದ್ದೆಗೆ ಅರ್ಜಿ ಸಲ್ಲಿಸುವವರು ಬಿ.ಟೆಕ್ ವಿದ್ಯಾರ್ಹತೆ ಹೊಂದಿರಬೇಕು. ಕಂಪ್ಯೂಟರ್ ಸೈನ್ಸ್ / ಐಟಿ ಯಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವವರೂ ಕೂಡ ಅರ್ಜಿ ಸಲ್ಲಿಸಬಹುದು. ಈ ಪೋಸ್ಟ್ಗೆ ಕನಿಷ್ಠ 18 ವರ್ಷಗಳ ಅನುಭವ ಅಗತ್ಯ. ಐಟಿ ಕ್ಷೇತ್ರದಲ್ಲಿ ಅನುಭವವಿರಬೇಕು. 18 ವರ್ಷಗಳ ಸುದೀರ್ಘ ವೃತ್ತಿಜೀವನದ ಅಭ್ಯರ್ಥಿಗಳು ಕನಿಷ್ಠ 6 ವರ್ಷಗಳ ಕಾಲ ಹಿರಿಯ ಕಾರ್ಯನಿರ್ವಾಹಕ ಮಟ್ಟದಲ್ಲಿ ಕಾರ್ಯ ನಿರ್ವಹಿಸಿರಬೇಕು. ಅಲ್ಲದೆ, ಬ್ಯಾಂಕಿಂಗ್ ಮತ್ತು ಹಣಕಾಸು ಕ್ಷೇತ್ರದಲ್ಲಿ 3 ವರ್ಷಗಳ ಅನುಭವದೊಂದಿಗೆ 6 ವರ್ಷಗಳ ಆರ್ಕಿಟೆಕ್ಚರ್ ಫಕ್ನಶನ್ ಅನುಭವ ಹೊಂದಿರಬೇಕು.

ಮುಖ್ಯ ತಂತ್ರಜ್ಞಾನ ಅಧಿಕಾರಿಯ ಕೆಲಸವು 3 ವರ್ಷಗಳ ಕಾಂಟ್ರಾಕ್ಟ್ ಅನ್ನು ಹೊಂದಿದೆ. ಈ ಪೋಸ್ಟ್ಗೆ CTC 65 ಲಕ್ಷದಿಂದ 80 ಲಕ್ಷದವರೆಗೆ ಇರಲಿದೆ. ಸಮಗ್ರ ಸಂಬಳದ ಹೊರತಾಗಿ, ಆಯ್ಕೆಯಾದ ಅಭ್ಯರ್ಥಿಯು ಪ್ರತಿ ವರ್ಷ ಗರಿಷ್ಟ 10% ವೇರಿಯಬಲ್ ಮತ್ತು ಗರಿಷ್ಟ 10% ವೇತನ ಹೆಚ್ಚಳ ಪಡೆಯುತ್ತಾರೆ. ಡೆಪ್ಯುಟಿ ಜನರಲ್ ಮ್ಯಾನೇಜರ್ (ಇ & ಟಿಎ): ಈ ಪೋಸ್ಟ್ಗೆ ಸಿ.ಟಿಸಿ 42 ಲಕ್ಷ ರೂ.

ಸಂದರ್ಶನದ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಮೊದಲು ಅಭ್ಯರ್ಥಿಗಳು 600 ರೂಪಾಯಿಗಳಿಗೆ ಅರ್ಜಿ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬೇಕು. ಇದು ಮರುಪಾವತಿಸಲಾಗದ ಮೊತ್ತವಾಗಿದೆ. ಎಸಿ, ಎಸ್ಟಿಗೆ 100 ರೂ. ಅರ್ಜಿ ಶುಲ್ಕವಿದೆ. ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಶುಲ್ಕವನ್ನು ಪಾವತಿಸಬಹುದು. ವಹಿವಾಟು ಮುಗಿದ ನಂತರ ಇ-ಸ್ವೀಕರಣೆ ಮಾಡಲಾಗುತ್ತದೆ. ಅದನ್ನು ತಪ್ಪದೆ ಪ್ರಿಂಟ್ ತೆಗೆದುಕೊಳ್ಳಿ.

Trending News