ನವದೆಹಲಿ:ಭಾರತದ ಮೊದಲ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ರವರ 133ನೆಯ ಜನ್ಮದಿನೋತ್ಸವನ್ನು ಇಂದು ದೇಶದೆಲ್ಲೆಡೆ ಸ್ಮರಿಸಲಾಯಿತು.
Remembering Dr. Rajendra Prasad on his Jayanti. pic.twitter.com/4uPv8aGAjf
— Narendra Modi (@narendramodi) December 3, 2017
ಡಿಸೆಂಬರ್ 3, 1884 ರಂದು ಬಿಹಾರದ ಸಿವಾನ್ ನಲ್ಲಿ ಜನಿಸಿದ ರಾಜೇಂದ್ರ ಪ್ರಸಾದ್ ಗಾಂಧೀಜಿಯವರ ವಿಚಾರಗಳಿಂದ ಪ್ರಭಾವಿತರಾಗಿ ಸ್ವಾತಂತ್ರ ಹೋರಾಟಕ್ಕೆ ಧುಮಿಕಿದ್ದರು.ಅಲ್ಲದೆ ಭಾರತ ಸ್ವತಂತ್ರಗೊಂಡ ನಂತರ ಮೊದಲ ರಾಷ್ಟ್ರಪತಿಯಾಗಿ ನೆಹರುರವರ ಜೊತೆಗೂಡಿ ಆಧುನಿಕ ಭಾರತ ನಿರ್ಮಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು.ಮತ್ತು ಸತತ ಎರಡು ಕಾಲಾವಧಿಯವರೆಗೆ ರಾಷ್ಟ್ರಪತಿಗಳಾಗಿರುವ ಏಕಮಾತ್ರ ವ್ಯಕ್ತಿಯಾಗಿದ್ದಾರೆ.
#PresidentKovind paid floral tributes to Dr Rajendra Prasad, former President of India, on his birth anniversary at Rashtrapati Bhavan today pic.twitter.com/F8FLz06Jrt
— President of India (@rashtrapatibhvn) December 3, 2017
ಇಂತಹ ಮಹಾನ ರಾಷ್ಟ್ರನಾಯಕನ ದಿನವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ಮರಿಸುತ್ತಾ "ಭಾರತ ಮೊದಲ ರಾಷ್ಟ್ರಪತಿಯ ರಾಜೇಂದ್ರ ಪ್ರಸಾದರವರನ್ನು ಅವರ ಜನ್ಮದಿನದಂದು ಸ್ಮರಿಸುತ್ತದೆ. ಸ್ವಾತಂತ್ರ ಸಂಗ್ರಾಮದ ಸಂಧರ್ಭದಲ್ಲಿ ತಳಮಟ್ಟದ ಚಳುವಳಿಯಲ್ಲಿ ಭಾಗವಹಿಸಿ ದೇಶಕ್ಕೆ ತಮ್ಮ ನಾಯಕತ್ವದಿಂದ ದೇಶವನ್ನು ಕಟ್ಟುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು" ಎಂದು ಪ್ರಧಾನಿಗಳು ತಮ್ಮ ರಾಜೇಂದ್ರ ಪ್ರಸಾದರ ಕುರಿತಾದ ಜನ್ಮ ದಿನದ ಸಂದೇಶದಲ್ಲಿ ತಿಳಿಸಿದ್ದಾರೆ. ರಾಷ್ಟ್ರಪತಿ ಕೊವಿಂದರವರು ರಾಷ್ಟ್ರಪತಿ ಭವನದಲ್ಲಿ ಜನ್ಮದಿಂದ ಪ್ರಯುಕ್ತ ಮೊದಲ ರಾಷ್ಟ್ರಪತಿಗಳಿಗೆ ನಮನಗಳನ್ನು ಸಲ್ಲಿಸಿದ್ದಾರೆ.