Astro Tips: ಹಣಕಾಸಿನ ಮುಗ್ಗಟ್ಟು ನಿಮ್ಮನ್ನು ಕಾಡುತ್ತಿದೆಯೇ? ತುಳಸಿ ಎಲೆಯ ಈ ಪರಿಹಾರ ಮಾಡಿ

ತುಳಸಿಯ ಪರಿಹಾರಗಳು: ನೀವು ಆರ್ಥಿಕ ಬಿಕ್ಕಟ್ಟು ಅಥವಾ ಭಿನ್ನಾಭಿಪ್ರಾಯ  ಎದುರಿಸುತ್ತಿದ್ದರೆ ಚಿಂತಿಸಬೇಡಿ. ಇದನ್ನು ನಿಭಾಯಿಸಲು ತುಳಸಿ ಎಲೆಗಳಿಗೆ ಸಂಬಂಧಿಸಿದ ಅದ್ಭುತ ಪರಿಹಾರಗಳ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ. ಈ ಕೆಲಸ ಮೂಲಕ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ.

Written by - Puttaraj K Alur | Last Updated : Apr 5, 2023, 07:41 AM IST
  • ಸನಾತನ ಧರ್ಮದಲ್ಲಿ ತುಳಸಿಯನ್ನು ಅತ್ಯಂತ ಪವಿತ್ರ ಸಸ್ಯವೆಂದು ಪರಿಗಣಿಸಲಾಗಿದೆ
  • ಹಿಂದೂ ಧರ್ಮದ ಪ್ರಕಾರ ತುಳಸಿಯಲ್ಲಿ ತಾಯಿ ಲಕ್ಷ್ಮಿದೇವಿ ನೆಲೆಸಿದ್ದಾಳೆಂಬ ನಂಬಿಕೆಯಿದೆ
  • 11 ತುಳಸಿ ಎಲೆಗಳ ಅದ್ಭುತ ಪರಿಹಾರ ಮಾಡಿದ್ರೆ ನಿಮಗೆ ಭರ್ಜರಿ ಲಾಭವಿದೆ
Astro Tips: ಹಣಕಾಸಿನ ಮುಗ್ಗಟ್ಟು ನಿಮ್ಮನ್ನು ಕಾಡುತ್ತಿದೆಯೇ? ತುಳಸಿ ಎಲೆಯ ಈ ಪರಿಹಾರ ಮಾಡಿ title=
ತುಳಸಿ ಎಲೆಗಳ ಅದ್ಭುತ ಪರಿಹಾರ

ನವದೆಹಲಿ: ಸನಾತನ ಧರ್ಮದಲ್ಲಿ ತುಳಸಿಯನ್ನು ಅತ್ಯಂತ ಪವಿತ್ರ ಸಸ್ಯವೆಂದು ಪರಿಗಣಿಸಲಾಗಿದೆ. ತುಳಸಿಯಲ್ಲಿ ಲಕ್ಷ್ಮಿದೇವಿ ನೆಲೆಸಿದ್ದಾಳೆಂದು ಹೇಳಲಾಗುತ್ತದೆ. ಯಾವ ಮನೆಯಲ್ಲಿ ತುಳಸಿ ಗಿಡ ಇರುತ್ತದೋ ಅಲ್ಲಿ ಬಡತನ ಎಂದಿಗೂ ಹರಡುವುದಿಲ್ಲ. ಈ ಕಾರಣದಿಂದಲೇ ಪ್ರತಿದಿನ ಕೋಟಿಗಟ್ಟಲೆ ಜನರು ತುಳಸಿ ಗಿಡಕ್ಕೆ ಭಕ್ತಿಯಿಂದ ನೀರು ಅರ್ಪಿಸಿ ಪೂಜೆ ಸಲ್ಲಿಸುತ್ತಾರೆ. ಇಂದು ನಾವು ನಿಮಗೆ 11 ತುಳಸಿ ಎಲೆಗಳಿಗೆ ಸಂಬಂಧಿಸಿದ ವಿಶೇಷ ಪರಿಹಾರದ ಬಗ್ಗೆ ಹೇಳಲಿದ್ದೇವೆ, ಇದನ್ನು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಪ್ರತಿಯೊಂದು ಆಸೆಯನ್ನು ಪೂರೈಸಿಕೊಳ್ಳಬಹುದು.

11 ತುಳಸಿ ಎಲೆಗಳ ಅದ್ಭುತ ಪರಿಹಾರ

ಜ್ಯೋತಿಷಿಗಳ ಪ್ರಕಾರ ತುಳಸಿ ಎಲೆಗಳು ಇಷ್ಟಾರ್ಥಗಳನ್ನು ಪೂರೈಸುವ ಅದ್ಭುತ ಗುಣಗಳನ್ನು ಹೊಂದಿವೆ. ಇದಕ್ಕೆ 11 ತುಳಸಿ ಎಲೆಗಳು ಬೇಕಾಗುತ್ತವೆ. ಮೊದಲನೆಯದಾಗಿ ಹಗಲಿನಲ್ಲಿ 11 ಹಸಿರು ತುಳಸಿ ಎಲೆಗಳನ್ನು ಕಿತ್ತು ತೊಳೆಯಿರಿ ಮತ್ತು ನಂತರ ಅವುಗಳನ್ನು ಬಿಸಿಲಿನಲ್ಲಿ ಒಣಗಿಸಿ. ಇದರ ನಂತರ ಸಿಂಧೂರದಲ್ಲಿ ಸಾಸಿವೆ ಎಣ್ಣೆ ಬೆರೆಸಿ ಮತ್ತು ತುಳಸಿ ಎಲೆಗಳ ಮೇಲೆ ರಾಮನ ಹೆಸರನ್ನು ಬರೆಯಲು ಪ್ರಾರಂಭಿಸಿ. ನಂತರ ಆ ಎಲೆಗಳಿಂದ ಮಾಲೆ ಮಾಡಿ ಹನುಮಂತನಿಗೆ ಅರ್ಪಿಸಬೇಕು. ಹೀಗೆ ಮಾಡುವುದರಿಂದ ವ್ಯಕ್ತಿಯ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ: Horoscope Today: ಈ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಗತಿ ಜೊತೆಗೆ ಧನಲಾಭ

ಆರ್ಥಿಕ ಬಿಕ್ಕಟ್ಟಿಗೆ ಪರಿಹಾರ

ನೀವು ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದ್ದರೆ ತುಳಸಿ ಎಲೆಗಳನ್ನು ಕೆಂಪು ಬಣ್ಣದ ಬಟ್ಟೆಯಲ್ಲಿ ಕಟ್ಟಬೇಕು ಮತ್ತು ನಿಮ್ಮ ಪರ್ಸ್ ಅಥವಾ ಬೀರುಗಳಲ್ಲಿ ಇಡಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಹಣದ ಒಳಹರಿವು ಹೆಚ್ಚಾಗುತ್ತದೆ ಮತ್ತು ಕುಟುಂಬದ ಮೇಲೆ ಹಣದ ಮಳೆ ಪ್ರಾರಂಭವಾಗುತ್ತದೆ ಎಂದು ನಂಬಲಾಗಿದೆ.

ನಕಾರಾತ್ಮಕ ಶಕ್ತಿ ತೊಡೆದುಹಾಕಲು

ನಿಮ್ಮ ಮನೆಯಲ್ಲಿ ಆಗಾಗ ಭಿನ್ನಾಭಿಪ್ರಾಯಗಳಿದ್ದರೆ ತುಳಸಿಯ 4-5 ಎಲೆಗಳನ್ನು ಒಡೆದು ಸ್ವಚ್ಛಗೊಳಿಸಿ. ನಂತರ ಅವುಗಳನ್ನು ನೀರಿನಿಂದ ತುಂಬಿದ ಹಿತ್ತಾಳೆ ಪಾತ್ರೆಯಲ್ಲಿ ಹಾಕಿ. ಪ್ರತಿದಿನ ಸ್ನಾನ ಮತ್ತು ಪೂಜೆಯ ನಂತರ ನಿಮ್ಮ ಮನೆಯ ಬಾಗಿಲು ಮತ್ತು ಇತರ ಸ್ಥಳಗಳಲ್ಲಿ ತುಳಸಿ ಎಲೆಗಳೊಂದಿಗೆ ಆ ನೀರನ್ನು ಸಿಂಪಡಿಸಿ. ಹೀಗೆ ಮಾಡುವುದರಿಂದ ಕುಟುಂಬದಲ್ಲಿ ಒಗ್ಗಟ್ಟು ಹೆಚ್ಚುತ್ತದೆ ಮತ್ತು ಇಷ್ಟಾರ್ಥಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: Budh Vakri 2023: ಮೇಷ ರಾಶಿಯಲ್ಲಿ ಬುಧನ ಸಂಚಾರ, ಈ 4 ರಾಶಿಯವರ ಜೀವನವೇ ಬದಲಾಗಲಿದೆ!

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News