Honda Amaze Sales : ಮುಂಚೂಣಿಯಲ್ಲಿರುವ ಕಾರು ತಯಾರಕ ಹೋಂಡಾ ಪ್ರಸ್ತುತ ಕಠಿಣ ಸಮಯವನ್ನು ಎದುರಿಸುತ್ತಿದೆ. ಭಾರತದಲ್ಲಿ ಮಾರಾಟವಾಗುವ 5 ಕಾರುಗಳಲ್ಲಿ 3 ಕಾರುಗಳನ್ನು ಕಂಪನಿಯು ಸ್ಥಗಿತಗೊಳಿಸಿದೆ. ಕಂಪನಿಯು ಇತ್ತೀಚೆಗೆ ಜಾಝ್, WR-V ಮತ್ತು ಫೋರ್ಥ್ ಜನರೇಶನ್ ಹೋಂಡಾ ಸಿಟಿಯನ್ನು ಸ್ಥಗಿತಗೊಳಿಸಿದೆ. ಮಾರಾಟದಲ್ಲಿ ಭಾರಿ ಕುಸಿತ ಕಂಡು ಬಂದ ಹಿನ್ನೆಲೆಯಲ್ಲಿ ಈ ಕಾರುಗಳನ್ನು ಸ್ಥಗಿತಗೊಳಿಸಬೇಕಾಯಿತು. ಈ ಮಧ್ಯೆ ಮಾರಾಟದ ಹೊಸ ಆಯಾಮಗಳನ್ನು ಸೃಷ್ಟಿಸುವ ಕಂಪನಿಯ ಕಾರು ಕೂಡ ಇದೆ. ಇದೇ ಕಂಪನಿಯ ಹೋಂಡಾ ಅಮೇಜ್ ಸೆಡಾನ್ ಕಾರು. ಹೋಂಡಾ ಅಮೇಜ್ 10 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಕಂಪನಿಯು ತನ್ನ ಮಾರಾಟದ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಕಂಪನಿಯ ಪ್ರಕಾರ, ಕಳೆದ 10 ವರ್ಷಗಳಲ್ಲಿ 5.3 ಲಕ್ಷಕ್ಕೂ ಹೆಚ್ಚು ಗ್ರಾಹಕರು ಹೋಂಡಾ ಅಮೇಜ್ ಖರೀದಿಸಿದ್ದಾರೆ.
ವಿಶೇಷವೆಂದರೆ ಕಂಪನಿಯ ಒಟ್ಟು ಮಾರಾಟದಲ್ಲಿ ಹೋಂಡಾ ಅಮೇಜ್ ಮಾತ್ರ ಶೇ.53ರಷ್ಟು ಕೊಡುಗೆ ನೀಡಿದೆ. ಹೋಂಡಾ ಅಮೇಜ್ ಅನ್ನು ಭಾರತದಲ್ಲಿ ಮೊದಲ ಬಾರಿಗೆ ಏಪ್ರಿಲ್ 2023 ರಲ್ಲಿ ಬಿಡುಗಡೆ ಮಾಡಲಾಯಿತು. ಫಸ್ಟ್ ಜನರೇಶನ್ ಹೋಂಡಾ ಅಮೇಜ್ ಅನ್ನು 2018 ರವರೆಗೆ ಮಾರಾಟ ಮಾಡಲಾಯಿತು. ಈ 5 ವರ್ಷಗಳಲ್ಲಿ, ಈ ಕಾರಿನ 2.6 ಲಕ್ಷ ಯುನಿಟ್‌ಗಳು ಮಾರಾಟವಾಗಿವೆ. ನಂತರ, ಅದರ ಸೆಕೆಂಡ್ ಜನರೇಶನ್ ಮಾಡೆಲ್ ಅನ್ನು ಮೇ 2018 ರಲ್ಲಿ ಬಿಡುಗಡೆ ಮಾಡಲಾಯಿತು. ಈ ಮಾದರಿಯು ಇಲ್ಲಿಯವರೆಗೆ 2.7 ಲಕ್ಷ ಕಾರುಗಳನ್ನು ಮಾರಾಟವಾಗಿದೆ. ಪ್ರಸ್ತುತ ಹೋಂಡಾ ಭಾರತೀಯ ಮಾರುಕಟ್ಟೆಯಲ್ಲಿ ಕೇವಲ ಎರಡು ವಾಹನಗಳನ್ನು ಮಾತ್ರ ಹೊಂದಿದೆ. ಅದರಲ್ಲಿ ಒಂದು ಹೋಂಡಾ ಅಮೇಜ್ ಮತ್ತು ಇನ್ನೊಂದು ಹೋಂಡಾ ಸಿಟಿ.
ಇದನ್ನೂ ಓದಿ : Kia EV6: 708 ಕಿ.ಮೀ ರೇಂಜ್ ಇರುವ ಇಲೆಕ್ಟ್ರಿಕ್ ಕಾರು ಖರೀದಿಸಬೇಕೆ? ಈ ದಿನದಿಂದ ಆರಂಭವಾಗಲಿದೆ ಬುಕಿಂಗ್!
ಹೋಂಡಾ ಅಮೇಜ್ ಬೆಲೆ :
ಭಾರತದಲ್ಲಿ ಹೋಂಡಾ ಅಮೇಜ್ ಸೆಡಾನ್ ಬೆಲೆ ರೂ 6.99 ಲಕ್ಷದಿಂದ ಪ್ರಾರಂಭವಾಗುತ್ತದೆ. ಟಾಪ್ ಮಾಡೆಲ್ ಬೆಲೆ 9.60 ಲಕ್ಷದವರೆಗೆ ವರೆಗೆ ಇರುತ್ತದೆ. ಈ ಸೆಡಾನ್ ಕಾರು ಮೂರು ರೂಪಾಂತರಗಳಲ್ಲಿ ಲಭ್ಯವಿದೆ.
ಎಂಜಿನ್‌ಗಳು ಮತ್ತು ವೈಶಿಷ್ಟ್ಯಗಳು :
ಅಮೇಜ್ ಈಗ ಕೇವಲ ಒಂದು ಎಂಜಿನ್ ಆಯ್ಕೆಯೊಂದಿಗೆ ಬರುತ್ತದೆ. ಇದು 1.2-ಲೀಟರ್ ಪೆಟ್ರೋಲ್ ಎಂಜಿನ್ ನೊಂದಿಗೆ ಬರುತ್ತದೆ. ಇದು 90 PS ಪವರ್ ಮತ್ತು 110 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಹಿಂದೆ ಇದು 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿತ್ತು. ಅದನ್ನು ಈಗ ಸ್ಥಗಿತಗೊಳಿಸಲಾಗಿದೆ. ಅಮೇಜ್ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಜೊತೆಗೆ CVT ಗೇರ್‌ಬಾಕ್ಸ್ ಅನ್ನು ಸಹ ಪಡೆಯುತ್ತದೆ.
ಇದನ್ನೂ ಓದಿ : ಸ್ಪ್ಲಿಟ್ ಎಸಿಯನ್ನು ಅರ್ಧ ಬೆಳೆಯಲ್ಲಿ ಖರೀದಿಸುವ ಅವಕಾಶ
ವೈಶಿಷ್ಟ್ಯಗಳ ವಿಷಯದಲ್ಲಿ, ಅಮೇಜ್ ಆಟೋ LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, LED ಫಾಗ್ ಲ್ಯಾಂಪ್‌ಗಳು, 15-ಇಂಚಿನ ಡ್ಯುಯಲ್-ಟೋನ್ ಅಲಾಯ್ ವ್ಹಿಲ್ , 7-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಕ್ರೂಸ್ ಕಂಟ್ರೋಲ್ ಮತ್ತು ಪ್ಯಾಡಲ್ ಶಿಫ್ಟರ್‌ಗಳನ್ನು ಪಡೆಯುತ್ತದೆ. ಇದು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ISOFIX ಚೈಲ್ಡ್ ಸೀಟ್ ಆಂಕರ್‌ಗಳು ಮತ್ತು ಬ್ಯಾಕ್ ಪಾರ್ಕಿಂಗ್ ಸೆನ್ಸಾರ್ ನೊಂದಿಗೆ ಬರುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.