Diabetic Sugar: ನಿಮ್ಮ ಆಹಾರದಲ್ಲಿ ಈ ಸಕ್ಕರೆಯನ್ನು ಬಳಸಿ, ಮಧುಮೇಹದಿಂದ ದೂರ ಉಳಿಯಿರಿ!

Coconut Sugar Benefits: ಸಾಮಾನ್ಯ ಸಕ್ಕರೆಗೆ ಹೋಲಿಸಿದರೆ ತೆಂಗಿನ ಸಕ್ಕರೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರ ಬಳಕೆಯಿಂದ ಹಲವು ರೀತಿಯ ಸಮಸ್ಯೆಗಳು ನಿವಾರಣೆಯಾಗುತ್ತವೆ. ಇದನ್ನು ಬಿಳಿ ಸಕ್ಕರೆಗೆ ಪರ್ಯಾಯವಾಗಿ ಬಳಸಬಹುದು.  

Written by - Nitin Tabib | Last Updated : Apr 13, 2023, 10:24 PM IST
  • ನೇಕ ಖನಿಜಗಳಿಂದ ಸಮೃದ್ಧವಾಗಿರುವ ಈ ನೈಸರ್ಗಿಕ ಸಿಹಿಕಾರಕವು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ.
  • ಇದರ ಸೇವನೆಯಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು.
  • ತೆಂಗಿನಕಾಯಿ ಸಕ್ಕರೆ ಎಂದರೇನು ಮತ್ತು ಅದು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂಬುದನ್ನೂ ತಿಳಿದುಕೊಳ್ಳೋಣ ಬನ್ನಿ,
Diabetic Sugar: ನಿಮ್ಮ ಆಹಾರದಲ್ಲಿ ಈ ಸಕ್ಕರೆಯನ್ನು ಬಳಸಿ, ಮಧುಮೇಹದಿಂದ ದೂರ ಉಳಿಯಿರಿ! title=
ಕೋಕೊನಟ್ ಶುಗರ್ ಆರೋಗ್ಯ ಲಾಭಗಳ ಬಗ್ಗೆ ನಿಮಗೆಷ್ಟು ಗೊತ್ತು?

Coconut Sugar For Diabetic Patients: ಇತ್ತೀಚಿನ ದಿನಗಳಲ್ಲಿ ತೆಂಗಿನ ಸಕ್ಕರೆಯ ಬಳಕೆ ಸಾಕಷ್ಟು ಹೆಚ್ಚಾಗ ತೊಡಗಿದೆ. ಇದನ್ನು ಇದನ್ನು ಕೋಕೋನಟ್ ಶುಗರ್ ಎಂದೂ ಕರೆಯುತ್ತಾರೆ. ಅನೇಕ ಖನಿಜಗಳಿಂದ ಸಮೃದ್ಧವಾಗಿರುವ ಈ ನೈಸರ್ಗಿಕ ಸಿಹಿಕಾರಕವು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಇದರ ಸೇವನೆಯಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ತೆಂಗಿನಕಾಯಿ ಸಕ್ಕರೆ ಎಂದರೇನು ಮತ್ತು ಅದು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂಬುದನ್ನೂ ತಿಳಿದುಕೊಳ್ಳೋಣ ಬನ್ನಿ,

ತೆಂಗಿನ ಸಕ್ಕರೆ ಎಂದರೇನು?
ತೆಂಗಿನ ಮರದ ಹೂವುಗಳ ರಸದಿಂದ ತಯಾರಿಸಿದ ಸಕ್ಕರೆಯನ್ನು ಕೋಕೋನಟ್ ಶುಗರ್ ಎಂದು ಕರೆಯಲಾಗುತ್ತದೆ. ಇದನ್ನು ಮಾಡಲು, ತೆಂಗಿನ ಹೂವಿನ ಒಂದು ತುದಿಯನ್ನು ಕತ್ತರಿಸಿ ಅದರ ರಸವನ್ನು ಸಂಗ್ರಹಿಸಿ. ಈ ರಸವನ್ನು ಪಾತ್ರೆಯಲ್ಲಿ ಹಾಕಿ ಅದನ್ನು ಕಡಿಮೆ ಉರಿಯಲ್ಲಿ ಬೇಯಿಸಲಾಗುತ್ತದೆ. ಅದು ಒಣಗಿದಾಗ, ಅದರಲ್ಲಿ ಉಳಿಯುವುದನ್ನು ತೆಂಗಿನಕಾಯಿ ಸಕ್ಕರೆಯಾಗಿ ಬಳಸಲಾಗುತ್ತದೆ.

ತೆಂಗಿನಕಾಯಿ ಸಕ್ಕರೆ ಹೇಗೆ ಪ್ರಯೋಜನಕಾರಿಯಾಗಿದೆ
ತೆಂಗಿನಕಾಯಿ ಸಕ್ಕರೆಯಲ್ಲಿ ಆಂಟಿಆಕ್ಸಿಡೆಂಟ್‌ಗಳು, ಖನಿಜಗಳು, ಫೈಬರ್ ಕೂಡ ಲಭ್ಯವಿದೆ. ಇದರಲ್ಲಿ ಕ್ಯಾಲೋರಿಗಳು ಸಹ ಲಭ್ಯವಿವೆ. ತೆಂಗಿನಕಾಯಿ ಸಕ್ಕರೆಯು ಬಿಳಿ ಸಕ್ಕರೆಗಿಂತ ಕಡಿಮೆ ಸುಕ್ರೋಸ್ ಮತ್ತು ಫ್ರಕ್ಟೋಸ್ ಅನ್ನು ಹೊಂದಿರುತ್ತದೆ ಮತ್ತು ಸತು, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಕಬ್ಬಿಣದಲ್ಲಿ ಸಮೃದ್ಧವಾಗಿದೆ. ಹೀಗಾಗಿ ಇದು ಪ್ರಯೋಜನಕಾರಿಯಾಗಿದೆ. ಇದನ್ನು ಹಣ್ಣಿನ ರಸ, ಓಟ್ಸ್, ಹಣ್ಣುಗಳೊಂದಿಗೆ ನೈಸರ್ಗಿಕ ಸ್ಟೀಟ್ನರ್ ಆಗಿ ಬಳಸಬಹುದು.

ತೆಂಗಿನ ಸಕ್ಕರೆ ಆರೋಗ್ಯಕ್ಕೆ ರಾಮಬಾಣ
ತೆಂಗಿನಕಾಯಿ ಸಕ್ಕರೆಯಲ್ಲಿ ಸಣ್ಣ ಪ್ರಮಾಣದಲ್ಲಿ ಇನ್ಸುಲಿನ್ ಮತ್ತು ಸೋಬರ್ ಫೈಬರ್ ಕಂಡುಬರುತ್ತದೆ, ಇದರ ಸಹಾಯದಿಂದ ಸಕ್ಕರೆ ಸ್ಪೈಕ್ ಸಮಸ್ಯೆಯನ್ನು ನಿವಾರಿಸಬಹುದು. ಮಧುಮೇಹದಲ್ಲಿ ಇದು ಪ್ರಯೋಜನಕಾರಿಯಾಗಿದೆ. ತೆಂಗಿನಕಾಯಿ ಸಕ್ಕರೆಯನ್ನು ಬಳಸುವುದರಿಂದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಬಹುದು. ಇದರ ಬಳಕೆಯಿಂದ ಹೈಪೊಗ್ಲಿಸಿಮಿಯಾ, ತಲೆಸುತ್ತು, ಬೆವರುವಿಕೆ ಮುಂತಾದ ಸಮಸ್ಯೆಗಳನ್ನೂ ಸಹ ನಿಯಂತ್ರಿಸಬಹುದು. ಕೊಬ್ಬರಿ ಸಕ್ಕರೆ ಸೇವನೆಯಿಂದಲೂ ಕೂಡ ಮಧುಮೇಹವನ್ನು ನಿಯಂತ್ರಿಸಬಹುದು.

ಇದನ್ನೂ ಓದಿ-Diabetes: ಖಾಲಿ ಹೊಟ್ಟೆ ತುಪ್ಪದಲ್ಲಿ ಬೆರೆಸಿ ಈ ಪದಾರ್ಥ ಸೇವಿಸಿ, ನೈಸರ್ಗಿಕವಾಗಿ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ!

ತೆಂಗಿನ ಸಕ್ಕರೆ ತೂಕವನ್ನು ಕಡಿಮೆ ಮಾಡುತ್ತದೆ
ನೀವು ನಿಮ್ಮ ಆಹಾರದಲ್ಲಿ ತೆಂಗಿನ ಸಕ್ಕರೆಯನ್ನು ಶಾಮೀಲುಗೊಳಿಸಿದರೆ, ನಂತರ ನೀವು ಇದರಲ್ಲಿರುವ ಸೈಲೆಂಟ್  ಫೈಬರ್ನೊಂದಿಗೆ ತೂಕವನ್ನು ಕಡಿಮೆ ಮಾಡಬಹುದು. ತೆಂಗಿನ ಸಕ್ಕರೆಯ ಸೇವನೆಯು ಸಾಮಾನ್ಯ ಸಕ್ಕರೆಗಿಂತ ಉತ್ತಮವೆಂದು ಪರಿಗಣಿಸಲಾಗಿದೆ.

ಇದನ್ನೂ ಓದಿ-Neem Leaves: ಹಲವು ಕಾಯಿಲೆಗಳ ಚಿಕಿತ್ಸೆಗೆ ರಾಮಬಾಣ ಈ ಎಲೆಗಳು, ಇಲ್ಲಿದೆ ಉಪಯೋಗಿಸುವ ಸರಿಯಾದ ವಿಧಾನ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News