MS Dhoni: ಕ್ಯಾಪ್ಟನ್ ಕೂಲ್ ಎಂಎಸ್ ಧೋನಿಗೆ ಕಿಸ್ ಕೊಟ್ಟ ಈ ಸ್ಟಾರ್ ನಟಿಯ ಅತ್ತೆ! ಫೋಟೋ ನೋಡಿ

MS Dhoni: ಎಂ ಎಸ್ ಧೋನಿ ಎಂದರೆ ಯಾರಿಗೆ ತಾನೆ ತಿಳಿದಿಲ್ಲ ಹೇಳಿ. ಭಾರತಕ್ಕೆ ಎರಡು ವಿಶ್ವಕಪ್ ಗೆದ್ದುಕೊಟ್ಟ ಕೀರ್ತಿ ಕ್ಯಾಪ್ಟನ್ ಕೂಲ್’ ಗೆ ಸೇರುತ್ತದೆ. ಅಷ್ಟೇ ಅಲ್ಲದೆ ಕ್ರಿಕೆಟ್’ನ ಮೂರು ಸ್ವರೂಪದಲ್ಲೂ ಚಾಂಪಿಯನ್ ಪ್ರಶಸ್ತಿ ಗೆದ್ದ ಏಕೈಕ ನಾಯಕ ಇವರು. ಕ್ಯಾಪ್ಟನ್ ಕೂಲ್ ಎಂಎಸ್ ಧೋನಿಗೆ ಅಪಾರ ಅಭಿಮಾನಿ ಬಳಗವಿದೆ.

1 /8

2 /8

ಇದೀಗ ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ಅವರ ಹಿರಿಯ ಅಭಿಮಾನಿಯೊಬ್ಬರು, ಮುತ್ತಿಟ್ಟು ತಮ್ಮ ಅಭಿಮಾನ ವ್ಯಕ್ತಪಡಿಸಿದ್ದಾರೆ. ಆ ಅಭಿಮಾನಿ ದಕ್ಷಿಣ ಭಾರತದ ಖ್ಯಾತ ನಟಿಯ ಅತ್ತೆ ಎಂಬುದು ಈಗಷ್ಟೇ ತಿಳಿದುಬಂದಿದೆ.

3 /8

40 ರ ಹರೆಯದ ಮಹೇಂದ್ರ ಸಿಂಗ್ ಧೋನಿ ಅವರಿಗೆ ಅಭಿಮಾನಿಗಳ ಬಳಗ ಹೆಚ್ಚಾಗುತ್ತಲೆ ಇದೆ. ಸದ್ಯ ಐಪಿಎಲ್ ಪಂದ್ಯ ಮಾತ್ರ ಆಡುತ್ತಿದ್ದರೂ, ಧೋನಿ ಕ್ರೀಸ್’ಗೆ ಬಂದರೆ ಸಾಕು ಜನಸಾಗರವೇ ಹರಿದುಬರುತ್ತೆ.

4 /8

ಅದರಲ್ಲೂ ಕಳೆದ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ ಧೋನಿ ಸ್ಫೋಟಕ ಬ್ಯಾಟಿಂಗ್ ಮಾಡಿದ್ದು, ಈ ಪಂದ್ಯವನ್ನು ಬರೋಬ್ಬರಿ 2.2 ಕೋಟಿ ಮಂದಿ ವೀಕ್ಷಿಸಿದ್ದರು. ಆದರೆ ಆ ಪಂದ್ಯದಲ್ಲಿ ಸೋಲನ್ನು ಕಂಡಿತ್ತು ಸಿ ಎಸ್ ಕೆ. ಇದೀಗ ಮುಂದಿನ ಪಂದ್ಯಕ್ಕಾಗಿ ತಯಾರಿ ನಡೆಸುತ್ತಿರುವ ಧೋನಿಯನ್ನು ವಿಶೇಷ ಅಭಿಮಾನಿಯೊಬ್ಬರು ಭೇಟಿಯಾಗಿದ್ದಾರೆ.

5 /8

ಈ ಹಿರಿಯ ಅಭಿಮಾನಿ ಬೇರೆ ಯಾರೂ ಅಲ್ಲ, ದಕ್ಷಿಣ ಭಾರತದ ಖ್ಯಾತ ನಟಿ, ಬಿಜೆಪಿ ನಾಯಕಿ ಖುಷ್ಬು ಸುಂದರ್ ಅವರ ಅತ್ತೆ. ಧೋನಿಗೆ ಮುತ್ತಿಟ್ಟು ತಮ್ಮ ಅಭಿಮಾನ ವ್ಯಕ್ತಪಡಿಸಿರುವ ಫೋಟೋ ಇದೀಗ ವೈರಲ್ ಆಗಿದೆ.

6 /8

ಖುಷ್ಬು ಸುಂದರ್ ಕೂಡ ಧೋನಿ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಈ ಎಲ್ಲಾ ಫೋಟೋಗಳನ್ನು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

7 /8

ಐಪಿಎಲ್ 16ನೇ ಸೀಸನ್’ನಲ್ಲಿ ಧೋನಿ ಮೂರು ಇನ್ನಿಂಗ್ಸ್‌’ಗಳಲ್ಲಿ 58ರ ಸರಾಸರಿಯಲ್ಲಿ 58 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 200ಕ್ಕಿಂತ ಹೆಚ್ಚಿದೆ.

8 /8

ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮುಂದಿನ ಪಂದ್ಯವನ್ನು ಏಪ್ರಿಲ್ 17 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆಡಲಿದೆ.