ಪೌರತ್ವ ಮಸೂದೆ ವಿರೋಧಿಸಿ 'ಭಾರತ ರತ್ನ' ನಿರಾಕರಿಸಿದ ಗಾಯಕ ಭೂಪೇನ್ ಹಜಾರಿಕಾ ಪುತ್ರ!

ನಮ್ಮ ತಂದೆಯವರ ನಂಬಿಕೆಗೆ ವಿರುದ್ಧವಾದ ಪೌರತ್ವ ಮಸೂದೆಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ನಮ್ಮ ತಂದೆಗೆ ನೀಡಿರುವ ಭಾರತ ರತ್ನ ಗೌರವವನ್ನು ತಿರಸ್ಕರಿಸುತ್ತೇನೆ ಎಂದು ತೇಜ್ ಹಜಾರಿಕಾ ಹೇಳಿದ್ದಾರೆ.

Last Updated : Feb 12, 2019, 01:11 PM IST
ಪೌರತ್ವ ಮಸೂದೆ ವಿರೋಧಿಸಿ 'ಭಾರತ ರತ್ನ' ನಿರಾಕರಿಸಿದ ಗಾಯಕ ಭೂಪೇನ್ ಹಜಾರಿಕಾ ಪುತ್ರ! title=

ನವದೆಹಲಿ: ದಿವಂಗತ ಗಾಯಕ ಭೂಪೇನ್ ಹಜಾರಿಕಾ ಅವರಿಗೆ ಮರಣೋತ್ತರವಾಗಿ ಕೇಂದ್ರ ಸರ್ಕಾರ ನೀಡಿದ್ದ ದೇಶದ ಅತ್ಯುನ್ನತ ಪ್ರಶಸ್ತಿ 'ಭಾರತ ರತ್ನ' ವನ್ನು ಅವರ ಪುತ್ರ ನಿರಾಕರಿಸಿದ್ದಾರೆ.

ಅಮೆರಿಕದಿಂದ ದೂರವಾಣಿ ಮೂಲಕ ಅಸ್ಸಾಮಿ ದಿನಪತ್ರಿಕೆಯೊಂದಿಗೆ ಮಾತನಾಡಿರುವ ಪುತ್ರ ತೇಜ್ ಅವರು, ನಮ್ಮ ತಂದೆಯವರ ನಂಬಿಕೆಗೆ ವಿರುದ್ಧವಾದ ಪೌರತ್ವ ಮಸೂದೆಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ನಮ್ಮ ತಂದೆಗೆ ನೀಡಿರುವ ಭಾರತ ರತ್ನ ಗೌರವವನ್ನು ತಿರಸ್ಕರಿಸುತ್ತೇನೆ ಎಂದಿದ್ದಾರೆ. 

ಮತ್ತೊಂದೆಡೆ ತೇಜ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಭೂಪೇನ್ ಹಜಾರಿಕಾ ಸಹೋದರ ಸಮರ್ ಹಜಾರಿಕಾ, ಪ್ರಶಸ್ತಿ ಸ್ವೀಕಾರ ಅಥವಾ ತಿರಸ್ಕಾರದ ಬಗ್ಗೆ ಕುಟುಂಬದ ಇತರ ಸದಸ್ಯರೊಂದಿಗೆ ತೇಜ್ ಚರ್ಚಿಸಿಲ್ಲ. ಅಷ್ಟಕ್ಕೂ ಪ್ರಶಸಿಯನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರ ಇರುವುದು ಪ್ರಶಸ್ತಿ ಗಳಿಸಿದವರಿಗೆ ಮಾತ್ರ. ಈ ವಿಚಾರವನ್ನು ತೇಜ್ ರಾಜಕೀಯ ಮಾಡಬಾರದು ಎಂದು ಹೇಳಿದ್ದಾರೆ.

ಜನವರಿ 26ರ ಗಣರಾಜ್ಯೋತ್ಸವದಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮತ್ತು ನಾನಾಜಿ ದೇಶಮುಖ್ ಹಾಗೂ ಹಿರಿಯ ಸಂಗೀತ ಸಂಯೋಜಕ ಭೂಪೇನ್ ಹಜಾರಿಕಾ ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ಘೋಷಣೆ ಮಾಡಿತ್ತು.

Trending News