Team India: ಯುಜ್ವೇಂದ್ರ ಚಹಾಲ್-ಧನಶ್ರೀ ಸಂಬಂಧದಲ್ಲಿ ಬಿರುಕು? ರಾಶಿ ರಾಶಿ ಪ್ರಶ್ನೆ ಹುಟ್ಟುಹಾಕಿತು ಆ ‘ಪೋಸ್ಟ್’

Yuzvendra-Dhanashree Relation: ಸ್ಟಾರ್ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರ ಪತ್ನಿ ಧನಶ್ರೀ ಅವರು ಗುರುವಾರ ಇನ್ಸ್ಟಾಗ್ರಾಂ ಸ್ಟೋರಿ  ಹಂಚಿಕೊಂಡಿದ್ದಾರೆ. ‘ನಮ್ಮ ಕಣ್ಣಿಂದ ಹರಿಯುವ ಕಣ್ಣೀರಲ್ಲಿ ನೋವಿನ ಆಳ ಕಾಣಬೇಡಿ ಸಾರ್, ಸಂತೋಷದಲ್ಲೂ ಆಗಾಗ ನಾಲ್ಕು ಹನಿ ಕಣ್ಣೀರು ಸುರಿಸುತ್ತೇವೆ’ ಎಂದು ಕಪ್ಪು ಬ್ಯಾಗ್ರೌಂಡ್’ನಲ್ಲಿ ಬರೆದಿದ್ದಾರೆ.

Written by - Bhavishya Shetty | Last Updated : Apr 20, 2023, 06:53 PM IST
    • ಯುಜ್ವೇಂದ್ರ ಚಹಾಲ್ ಲೀಗ್’ನ 16 ನೇ ಸೀಸನ್’ನಲ್ಲಿ ರಾಜಸ್ಥಾನ್ ರಾಯಲ್ಸ್ ಪರವಾಗಿ ಆಟವಾಡುತ್ತಿದ್ದಾರೆ
    • ಪತ್ನಿ ಧನಶ್ರೀ ಅವರು ಗುರುವಾರ ಇನ್ಸ್ಟಾಗ್ರಾಂ ಸ್ಟೋರಿ ಹಂಚಿಕೊಂಡಿದ್ದಾರೆ.
    • ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು, ಭಾರೀ ಸಂಚಲನ ಮೂಡಿಸಿದ್ದಾರೆ
Team India: ಯುಜ್ವೇಂದ್ರ ಚಹಾಲ್-ಧನಶ್ರೀ ಸಂಬಂಧದಲ್ಲಿ ಬಿರುಕು? ರಾಶಿ ರಾಶಿ ಪ್ರಶ್ನೆ ಹುಟ್ಟುಹಾಕಿತು ಆ ‘ಪೋಸ್ಟ್’ title=
Yuzvendra Chahal-Dhanashree

Yuzvendra-Dhanashree Relation: ಟೀಂ ಇಂಡಿಯಾದ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್’ನ 16 ನೇ ಸೀಸನ್’ನಲ್ಲಿ ರಾಜಸ್ಥಾನ್ ರಾಯಲ್ಸ್ ಪರವಾಗಿ ಆಟವಾಡುತ್ತಿದ್ದಾರೆ. ಆದರೆ ಈ ಮಧ್ಯೆ ಅವರ ಪತ್ನಿ ಧನಶ್ರೀ ವರ್ಮಾ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು, ಭಾರೀ ಸಂಚಲನ ಮೂಡಿಸಿದೆ.

ಇದನ್ನೂ ಓದಿ: RR vs LSG: “ಇದು ಆಟದ ಚಂದ..”; ಲಕ್ನೋ ವಿರುದ್ಧ ಸೋತರು ರಾಜಸ್ಥಾನ ನಾಯಕ ಹೀಗಂದಿದ್ದೇಕೆ?

ಸ್ಟಾರ್ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರ ಪತ್ನಿ ಧನಶ್ರೀ ಅವರು ಗುರುವಾರ ಇನ್ಸ್ಟಾಗ್ರಾಂ ಸ್ಟೋರಿ  ಹಂಚಿಕೊಂಡಿದ್ದಾರೆ. ‘ನಮ್ಮ ಕಣ್ಣಿಂದ ಹರಿಯುವ ಕಣ್ಣೀರಲ್ಲಿ ನೋವಿನ ಆಳ ಕಾಣಬೇಡಿ ಸಾರ್, ಸಂತೋಷದಲ್ಲೂ ಆಗಾಗ ನಾಲ್ಕು ಹನಿ ಕಣ್ಣೀರು ಸುರಿಸುತ್ತೇವೆ’ ಎಂದು ಕಪ್ಪು ಬ್ಯಾಗ್ರೌಂಡ್’ನಲ್ಲಿ ಬರೆದಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಊಹಾಪೋಹಗಳು ಶುರುವಾಗಿವೆ.

ಧನಶ್ರೀ ವಿಡಿಯೋ ವೈರಲ್!

ಇತ್ತೀಚೆಗೆ, ಧನಶ್ರೀ ವರ್ಮಾ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ವಿಡಿಯೋದಲ್ಲಿ ಧನಶ್ರೀ ಮುಂಬೈನಲ್ಲಿ ಪಾರ್ಟಿ ಮಾಡುತ್ತಿದ್ದರು. ಈ ಸಮಯದಲ್ಲಿ, ಸಖತ್ ಕ್ಯೂಟ್ ಆಂಡ್ ಹಾಟ್ ಆಗಿ ಕಾಣುತ್ತಿದ್ದರು ಧನಶ್ರೀ. ಇನ್ನು ಈ ಪಾರ್ಟಿಯಲ್ಲಿ ಶ್ರೇಯಸ್ ಅಯ್ಯರ್ ಕೂಡ ಇದ್ದರು ಎನ್ನಲಾಗಿದೆ.

ಇದನ್ನೂ ಓದಿ: IPLನ ಈ ನಿಯಮವು ಆಲ್’ರೌಂಡರ್’ಗಳ ವೃತ್ತಿಜೀವನವನ್ನೇ ಕೊನೆಗೊಳಿಸುತ್ತೆ! ಸ್ಟಾರ್ ಆಟಗಾರನ ಶಾಕಿಂಗ್ ಹೇಳಿಕೆ

ಐಪಿಎಲ್‌’ನಲ್ಲಿ ಚಹಾಲ್ ರಾಕಿಂಗ್:

ಚಾಹಲ್ ಪ್ರಸಕ್ತ ಐಪಿಎಲ್ ಸೀಸನ್’ನಲ್ಲಿ 6 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು ಒಟ್ಟು 11 ವಿಕೆಟ್‌’ಗಳನ್ನು ಕಬಳಿಸಿದ್ದಾರೆ. ಎಕಾನಮಿ ರೇಟ್ 8.25 ಇದೆ. ಇನ್ನು ಕಳೆದ ಸೀಸನ್’ನಲ್ಲಿ ಚಹಾಲ್ 17 ಪಂದ್ಯಗಳಲ್ಲಿ 27 ವಿಕೆಟ್ ಪಡೆದಿದ್ದರು.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News