Ravindra Jadeja House Photos: ರವೀಂದ್ರ ಜಡೇಜಾ ಗುಜರಾತ್’ನ ಜಮುನಾನಗರ ಮೂಲದವರು. ಕ್ರಿಕೆಟಿಗ ಮಾತ್ರವಲ್ಲದೆ ರಾಜವಂಶಸ್ಥ ಕೂಡ ಹೌದು. ಜಮುನಾನಗರ ಜಡೇಜಾ ಅವರ ಬಂಗಲೆ ರಾಯಲ್ ಅರಮನೆಗಿಂತ ಕಡಿಮೆಯಿಲ್ಲ. ಇವರ ಬಂಗಲೆ ಅಂದ ಚಂದ ಹೇಗಿದೆ? ಅದಲ್ಲಿರುವ ಸೌಲಭ್ಯಗಳೇನು ಎಂಬುದನ್ನು ನಾವಿಂದು ನೋಡೋಣ.
ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗ ರವೀಂದ್ರ ಜಡೇಜಾ ಭಾರತದ ಅತ್ಯುತ್ತಮ ಆಲ್-ರೌಂಡರ್’ಗಳಲ್ಲಿ ಒಬ್ಬರು. ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ತಂಡದ ಪಂದ್ಯ ವಿಜೇತ ಆಟಗಾರರಾಗಿ ಹೊರಹೊಮ್ಮಿದ್ದಾರೆ.
ರವೀಂದ್ರ ಜಡೇಜಾ ಅವರ ಬಂಗಲೆ ರಾಯಲ್ ಪ್ಯಾಲೇಸ್’ನಂತೆ ಕಾಣುತ್ತದೆ, ದೊಡ್ಡ ದೊಡ್ಡ ಬಾಗಿಲುಗಳು, ಪುರಾತನ ಅಮೂಲ್ಯ ಪೀಠೋಪಕರಣಗಳು ಹೀಗೆ ಅನೇಕ ವಿಚಾರಗಳನ್ನು ನಾವಿಲ್ಲಿ ಕಾಣಬಹುದು. ರವೀಂದ್ರ ಜಡೇಜಾ ರಜಪೂತಾನ ಕುಟುಂಬಕ್ಕೆ ಸೇರಿದವರು.
ರಜಪೂತಾನ ಕುಟುಂಬಕ್ಕೆ ಸೇರಿದ ರವೀಂದ್ರ ಜಡೇಜಾ ಮದುವೆ ಆಗಿದ್ದು, ರೇವಾ ಸೋಲಂಕಿ ಅವರನ್ನು. 17 ಏಪ್ರಿಲ್ 2016 ರಂದು ರೇವಾ ಸೋಲಂಕಿಯನ್ನು ರಜಪೂತನ ಆಚರಣೆಗಳ ಪ್ರಕಾರವೇ ವಿವಾಹವಾದರು. ಇನ್ನು ರವೀಂದ್ರ ಜಡೇಜಾ ಅವರ ಮನೆಯ ಒಳಭಾಗದ ಅಲಂಕಾರವನ್ನು ನೋಡಿದರೆ ಫಿದಾ ಆಗೋದು ಖಂಡಿತ. ಇಲ್ಲಿರೋದು ಒಂದಕ್ಕಿಂತ ಒಂದು ದುಬಾರಿ ಶೋಪೀಸ್’ಗಳು.
ರವೀಂದ್ರ ಜಡೇಜಾ ಲಿವಿಂಗ್ ರೂಮಿನಲ್ಲಿ ಐಷಾರಾಮಿ ಸೋಫಾ ಹೊಂದಿದ್ದಾರೆ. ಇವೆಲ್ಲವೂ ರವೀಂದ್ರ ಜಡೇಜಾ ಶೇರ್ ಮಾಡಿಕೊಂಡಿರುವ ಫೋಟೋಗಳು. ಇವರ ಮನೆಯೊಳಗೆ ರಾಯಲ್ ಅನುಭವ ನೀಡುತ್ತದೆ.
ರವೀಂದ್ರ ಜಡೇಜಾ ಅವರು ಫಾರ್ಮ್ ಹೌಸ್ ಅನ್ನು ಸಹ ಹೊಂದಿದ್ದಾರೆ, 'ಮಿ. ಜಡ್ಡು ಫಾರ್ಮ್ ಹೌಸ್’ ಎಂಬ ಹೆಸರಿನಲ್ಲಿದೆದ. ತನ್ನ ಫಾರ್ಮ್ ಹೌಸ್ನಲ್ಲಿ, ಕುದುರೆಗಳೊಂದಿಗೆ ಅವರು ಹೆಚ್ಚಿನ ಸಮಯವನ್ನು ಕಳೆಯುತ್ತಾರೆ ಎನ್ನಲಾಗಿದೆ. ವೃತ್ತಿಯಲ್ಲಿ ಉದ್ಯಮಿಯಾಗಿರುವ ಜಡೇಜಾ ಅವರ ಮಾವ, ಮದುವೆಯಲ್ಲಿ ಜಡೇಜಾ ಅವರಿಗೆ ಆಡಿ ಕ್ಯೂ 7 ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಇನ್ನು ಜಡೇಜಾ ಅವರ ಪತ್ನಿ ರೇವಾ ಸೋಲಂಕಿ ಬಿಜೆಪಿ ಶಾಸಕಿ. ಇಬ್ಬರಿಗೂ ನಿಧ್ಯಾನ ಎಂಬ ಸುಂದರ ಮಗಳು ಇದ್ದಾಳೆ.