Highest Paid Kannada Actresses : ಕನ್ನಡ ಚಿತ್ರರಂಗ, ಕನ್ನಡ ಹೀರೋಗಳು ಮತ್ತು ಕನ್ನಡ ನಾಯಕಿಯರು ಇತ್ತೀಚಿನ ದಿನಗಳಲ್ಲಿ ವ್ಯಾಪಕ ಮನ್ನಣೆ ಪಡೆಯುತ್ತಿದ್ದಾರೆ. ಕೆಜಿಎಫ್, ಕಾಂತಾರ ಸಿನಿಮಾಗಳು ಕನ್ನಡ ಚಿತ್ರರಂಗವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿವೆ.
Sandalwood Heroines Remuneration : ಇಂದು ಕನ್ನಡ ಸಿನಿಮಾಗಳು ಮತ್ತು ಕನ್ನಡದ ನಟ - ನಟಿಯರು PAN ಇಂಡಿಯಾ ಪ್ರೇಕ್ಷಕರಿಂದ ಮನ್ನಣೆ ಪಡೆದಿದ್ದಾರೆ. ತಮ್ಮ ಕಲೆ ಮತ್ತು ಕೆಲಸಕ್ಕಾಗಿ ದೇಶದ ಜನರ ಗಮನ ಸೆಳೆದಿದ್ದಾರೆ. ಬರೀ ಹೀರೋಗಳಷ್ಟೇ ಅಲ್ಲ, ರಶ್ಮಿಕಾ, ಶ್ರೀನಿಧಿ ಶೆಟ್ಟಿ, ರಚಿತಾ ರಾಮ್ ರಂತಹ ಕನ್ನಡದ ಬೆಡಗಿಯರು ಸೌತ್ ಇಂಡಸ್ಟ್ರಿಯನ್ನು ಆಳುತ್ತಿದ್ದಾರೆ. ಅಲ್ಲದೇ, ಕೋಟಿ ಕೋಟಿ ಸಂಭಾವನೆ ಸಹ ಪಡೆಯುತ್ತಾರೆ.
ಕೊಡುಗು ಮೂಲದ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸಿನಿರಂಗಕ್ಕೆ ಕಾಲಿಟ್ಟರು. ಗೀತಾ ಗೋವಿಂದಂ, ಪುಷ್ಪ ಮೂಲಕ ದಕ್ಷಿಣ ಭಾರತದಲ್ಲಿ ಹಿಟ್ ಆದರು. ಮಜ್ನು ಮತ್ತು ಗುಡ್ಬೈ ಸಿನಿಮಾದಿಂದ ಹಿಂದಿ ಚಲನಚಿತ್ರಗಳಲ್ಲಿಯೂ ಕಾಣಿಸಿಕೊಂಡರು. ಪ್ರತಿ ಸಿನಿಮಾಗೆ 8-10 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಕೆಜಿಎಫ್ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ಡಮ್ ಪಡೆದ ನಟಿ ಶ್ರೀನಿಧಿ ಶೆಟ್ಟಿ. ನಟಿ ಶ್ರೀನಿಧಿ ಪ್ರತಿ ಚಿತ್ರಕ್ಕೆ 4-5 ಕೋಟಿ ಸಂಭಾವನೆ ಪಡೆಯುತ್ತಾರೆ.
ಸ್ಯಾಂಡಲ್ವುಡ್ ಮೋಸ್ಟ್ ಹ್ಯಾಪನಿಂಗ್ ಬ್ಯೂಟಿ ರಚಿತಾ ರಾಮ್. ಕ್ರಾಂತಿ, ಮಾನ್ಸೂನ್ ರಾಗ, ಲವ್ ಯೂ ರಚ್ಚು ಮತ್ತು ರನ್ನ ಮುಂತಾದ ಕನ್ನಡದ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರತಿ ಚಿತ್ರಕ್ಕೆ ಸುಮಾರು 3 ಕೋಟಿ ಸಂಭಾವನೆ ಪಡೆಯುತ್ತಾರೆ.
ಕ್ರೇಜಿ ಬಾಯ್ ಚಿತ್ರದಿಂದ ಸಿನಿಪಯಣ ಆರಂಭಿಸಿದ ಆಶಿಕಾ ರಂಗನಾಥ್, ಮಾಸ್ ಲೀಡರ್, ಮುಗಳು ನಗೆ, ರಾಜು ಕನ್ನಡ ಮೀಡಿಯಂ ಸಿನಿಮಾಗಳಿಂದ ಖ್ಯಾತಿ ಪಡೆದರು. ಆಶಿಕಾ ರಂಗಂತ್ ಪ್ರತಿ ಚಿತ್ರಕ್ಕೆ 3 ಕೋಟಿ ಸಂಭಾವನೆ ಪಡೀತಾರೆ.
2013 ರಲ್ಲಿ ಚಂದ್ರಲೇಖಾ ಸಿನಿಮಾ ಮೂಲಕ ಶಾನ್ವಿ ಶ್ರೀವಾಸ್ತವ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿದರು. ಕನ್ನಡದಲ್ಲಿ ಭಲೇ ಜೋಡಿ, ತಾರಕ್, ಮಫ್ತಿ ಮತ್ತು ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ನಟಿಸುವ ಮೂಲಕ ಖ್ಯಾತಿ ಪಡೆದರು. ಅವರು ಪ್ರತಿ ಚಿತ್ರಕ್ಕೆ ಸುಮಾರು 2-3 ಕೋಟಿ ರೂ. ಚಾರ್ಜ್ ಮಾಡ್ತಾರೆ.
ಕನ್ನಡ ಸಿನಿಮಾ ಮಾತ್ರವಲ್ಲ ಸೌತ್ ಇಂಡಸ್ಟ್ರಿಯಲ್ಲಿ ಅತ್ಯಂತ ಜನಪ್ರಿಯರಾಗಿರುವ ನಟಿ ಶ್ರೀಲೀಲಾ. ಕಿಸ್, ಭಾರತೀ, ಬೈ ಟು ಲವ್, ಜೇಮ್ಸ್ ಮತ್ತು ಧಮ್ಕಾ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು 2-3 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.