Old Pension Scheme: ಪ್ರಸ್ತುತ ಹಳೆ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ದೇಶಾದ್ಯಂತ ಭಾರೀ ಚರ್ಚೆಗಳು ಕೇಳಿಬರುತ್ತಿವೆ. ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ರಾಜ್ಯಗಳ ಸರ್ಕಾರಿ ನೌಕರರು ನಿರಂತರವಾಗಿ ಒತ್ತಾಯಿಸುತ್ತಿದ್ದಾರೆ. ಪ್ರಸ್ತುತ ದೇಶದ ಹಲವು ರಾಜ್ಯಗಳಲ್ಲಿ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಯಾಗಿದೆ.
ಹಳೆಯ ಪಿಂಚಣಿ ವ್ಯವಸ್ಥೆ ಜಾರಿಯಲ್ಲಿರುವ ಎಲ್ಲಾ ರಾಜ್ಯಗಳಲ್ಲಿ, ರಾಜ್ಯ ಸರ್ಕಾರಗಳು NPS ಹಣವನ್ನು ಹಿಂತಿರುಗಿಸುವಂತೆ ಒತ್ತಾಯಿಸುತ್ತಿದ್ದರೂ, ಮೋದಿ ಸರ್ಕಾರವು ಸಾರಾಸಗಟಾಗಿ ನಿರಾಕರಿಸಿದೆ ಎಂಬ ದೊಡ್ಡ ಸುದ್ದಿ ಇದೀಗ ಕೇಂದ್ರ ಸರ್ಕಾರದಿಂದ ಬರುತ್ತಿದೆ.
ಇದನ್ನೂ ಓದಿ: CSK ವಿಕೆಟ್ ಪಡೆದಂತೆ ವಿಚಿತ್ರವಾಗಿ ಸಂಭ್ರಮಿಸಿದ KKR ಆಟಗಾರ! ಭಾರೀ ವಿವಾದ ಸೃಷ್ಟಿಸಿದ ವರ್ತನೆ
ಈ ಸಮಯದಲ್ಲಿ ರಾಜಸ್ಥಾನದ ಅಶೋಕ್ ಗೆಹ್ಲೋಟ್ ಸರ್ಕಾರವು ಹಳೆಯ ಪಿಂಚಣಿ ಯೋಜನೆಯನ್ನು ದೊಡ್ಡ ಸಮಸ್ಯೆಯನ್ನಾಗಿ ಎಂದು ಬಿಂಬಿಸುತ್ತಿದ್ದಾರೆ. ಇದು ಈ ಬಾರಿಯ ಪ್ರಮುಖ ಚುನಾವಣಾ ವಿಷಯವಾಗಿ ಪರಿಣಮಿಸಿದೆ. ರಾಜಸ್ಥಾನ ಸರ್ಕಾರವು ಏಪ್ರಿಲ್ 2023 ರಲ್ಲಿ ಹಳೆಯ ಪಿಂಚಣಿಯನ್ನು ಮರುಸ್ಥಾಪಿಸಿದೆ. ಆದರೆ ಕೇಂದ್ರ ಸರ್ಕಾರವು NPS ಅನ್ನು ಪರಿಗಣಿಸಲು ನಿರಾಕರಿಸಿದೆ.
ರಾಷ್ಟ್ರೀಯ ಪಿಂಚಣಿ ಯೋಜನೆಯಡಿ, ನೌಕರರಿಗೆ ನೀಡಲಾಗುವ ವೇತನ ಮತ್ತು ತುಟ್ಟಿಭತ್ಯೆಯ ಶೇಕಡಾ 10 ರಷ್ಟು ರಾಜ್ಯ ಸರ್ಕಾರವು ಠೇವಣಿ ಮಾಡುತ್ತದೆ. ರಾಜಸ್ಥಾನದಲ್ಲಿ 5,24,72 OPS ಖಾತೆಗಳಿವೆ. ಇದರಲ್ಲಿ ಸರಕಾರದಿಂದ 14,171 ಕೋಟಿ ರೂ., ನೌಕರರಿಂದ 14,167 ಕೋಟಿ ರೂ. ಇದೆ, ಇದಕ್ಕೆ ಬಡ್ಡಿಯ ಮೊತ್ತವನ್ನು ಸೇರಿಸಿದರೆ ಈ ಹಣ 40,157 ಕೋಟಿ ರೂ. ಆಗುತ್ತದೆ. ಮೇ 19, 2022 ರಂದು ರಾಜ್ಯ ಸರ್ಕಾರ ಹೊರಡಿಸಿದ ಅಧಿಸೂಚನೆಯಲ್ಲಿ, ನೌಕರರು ಎನ್’ಪಿಎಸ್ ಕೊಡುಗೆಯನ್ನು ರಾಜ್ಯ ಸರ್ಕಾರಕ್ಕೆ ಬಡ್ಡಿಯೊಂದಿಗೆ ಹಿಂದಿರುಗಿಸಬೇಕು ಎಂದು ಹೇಳಲಾಗಿದೆ.
ಹೊಸ ಪಿಂಚಣಿ ಯೋಜನೆಯಲ್ಲಿ ಬದಲಾವಣೆಗೆ ಸಿದ್ಧತೆ!
ರಾಜ್ಯ ಸರ್ಕಾರಕ್ಕೆ ಹಣ ನೀಡಲು ಕೇಂದ್ರ ಸರ್ಕಾರ ಸ್ಪಷ್ಟವಾಗಿ ನಿರಾಕರಿಸಿದೆ. ಈ ನಂತರ ರಾಜ್ಯ ಸರ್ಕಾರ ಅಧಿಸೂಚನೆಯನ್ನು ಬದಲಾಯಿಸಲು ಯೋಜಿಸುತ್ತಿದೆ. ಮತ್ತೊಂದೆಡೆ ಸರ್ಕಾರಿ ನೌಕರರಿಗೆ ಪ್ರಯೋಜನಗಳನ್ನು ನೀಡಲು ಎನ್’ಪಿಎಸ್‌ನಲ್ಲಿಯೇ ಬದಲಾವಣೆಗಳನ್ನು ಮಾಡಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ.
ಹೊಸ ಮತ್ತು ಹಳೆಯ ಪಿಂಚಣಿ ಯೋಜನೆಗಳ ವ್ಯತ್ಯಾಸ:
ಹೊಸ ಮತ್ತು ಹಳೆಯ ಪಿಂಚಣಿ ಯೋಜನೆಗಳ ನಡುವೆ ಅಗಾಧ ವ್ಯತ್ಯಾಸವಿದೆ. ಇದರಿಂದಾಗಿ ಹಳೆಯ ಪಿಂಚಣಿ ಯೋಜನೆಯನ್ನು ಪುನಃಸ್ಥಾಪಿಸಲು ನೌಕರರು ಮತ್ತು ಪಿಂಚಣಿದಾರರು ಒತ್ತಾಯಿಸುತ್ತಿದ್ದಾರೆ. OPS ನಲ್ಲಿ ನಿವೃತ್ತಿಯ ಸಮಯದಲ್ಲಿ, ನೌಕರರು ಅರ್ಧದಷ್ಟು ಸಂಬಳವನ್ನು ಪಿಂಚಣಿಯಾಗಿ ಪಡೆಯುತ್ತಾರೆ. ಹೊಸ ಪಿಂಚಣಿ ಯೋಜನೆಯಲ್ಲಿ, ಉದ್ಯೋಗಿಯ ಮೂಲ ವೇತನದ 10 ಪ್ರತಿಶತ + ಡಿಎ ಕಡಿತಗೊಳಿಸಲಾಗುತ್ತದೆ. ಹಳೆಯ ಪಿಂಚಣಿ ಯೋಜನೆಯ ವಿಶೇಷವೆಂದರೆ ನೌಕರರ ಸಂಬಳದಲ್ಲಿ ಯಾವುದೇ ಹಣವನ್ನು ಕಡಿತಗೊಳಿಸುವುದಿಲ್ಲ. ಇದಲ್ಲದೇ ಹೊಸ ಪಿಂಚಣಿಯಲ್ಲಿ 6 ತಿಂಗಳ ನಂತರ ಡಿಎ ಸಿಗುವ ಅವಕಾಶವಿಲ್ಲ. ಹಳೆಯ ಪಿಂಚಣಿ ಪಾವತಿಯನ್ನು ಸರ್ಕಾರದ ಖಜಾನೆ ಮೂಲಕ ಮಾಡಲಾಗುತ್ತದೆ. ಹೊಸ ಪಿಂಚಣಿಯಲ್ಲಿ ಸ್ಥಿರ ಪಿಂಚಣಿಗೆ ಯಾವುದೇ ಗ್ಯಾರಂಟಿ ಇಲ್ಲ.
ಇದನ್ನೂ ಓದಿ: ವಿಶ್ವ ಕಂಡ ಆ 5 ಸ್ಫೋಟಕ ಬ್ಯಾಟ್ಸ್’ಮನ್’ಗಳನ್ನು ಅತಿ ಹೆಚ್ಚು ಬಾರಿ ಔಟ್ ಮಾಡಿದ್ದು Sachin!
ಈಗಾಗಲೇ ಹಲವು ನೌಕರರು ನಿವೃತ್ತಿ!
2004ರ ಜನವರಿ ನಂತರ ನೇಮಕಗೊಂಡ 5.24 ಲಕ್ಷ ಉದ್ಯೋಗಿಗಳಲ್ಲಿ 3554 ಮಂದಿ ಒಂದು ವರ್ಷದ ಹಿಂದೆಯೇ ನಿವೃತ್ತರಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡುತ್ತಿದೆ. ಅಂತಹ ನೌಕರರಿಗೆ ಪಿಂಚಣಿ ಸೌಲಭ್ಯ ಸಿಗುತ್ತಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ