ಪಾಕ್ ಗಾಯಕರನ್ನು ಕೈಬಿಡಲು ಮ್ಯೂಸಿಕ್ ಕಂಪನಿಗಳಿಗೆ ಎಂಎನ್ಎಸ್ ಎಚ್ಚರಿಕೆ

 ಪುಲ್ವಾಮಾದಲ್ಲಿ ನಡೆದ ಗುರುವಾರದಂದು ನಡೆದ ಭಯೋತ್ಪಾದನಾ ದಾಳಿಯಲ್ಲಿ 40 ಸಿಆರ್ಪಿಎಫ್ ಸೈನಿಕರು ಮೃತಪಟ್ಟ ಹಿನ್ನಲೆಯಲ್ಲಿ ಪಾಕಿಸ್ತಾನಿ ಗಾಯಕರನ್ನು ಕೈಬಿಡಬೇಕೆಂದು ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನಾ ಮ್ಯೂಸಿಕ್ ಕಂಪೆನಿಗಳಿಗೆ ಎಚ್ಚರಿಕೆ ನೀಡಿದೆ.

Last Updated : Feb 17, 2019, 01:39 PM IST
ಪಾಕ್ ಗಾಯಕರನ್ನು ಕೈಬಿಡಲು ಮ್ಯೂಸಿಕ್ ಕಂಪನಿಗಳಿಗೆ ಎಂಎನ್ಎಸ್ ಎಚ್ಚರಿಕೆ  title=
file photo

ನವದೆಹಲಿ: ಪುಲ್ವಾಮಾದಲ್ಲಿ ನಡೆದ ಗುರುವಾರದಂದು ನಡೆದ ಭಯೋತ್ಪಾದನಾ ದಾಳಿಯಲ್ಲಿ 40 ಸಿಆರ್ಪಿಎಫ್ ಸೈನಿಕರು ಮೃತಪಟ್ಟ ಹಿನ್ನಲೆಯಲ್ಲಿ ಪಾಕಿಸ್ತಾನಿ ಗಾಯಕರನ್ನು ಕೈಬಿಡಬೇಕೆಂದು ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನಾ ಮ್ಯೂಸಿಕ್ ಕಂಪೆನಿಗಳಿಗೆ ಎಚ್ಚರಿಕೆ ನೀಡಿದೆ.

ಈ ಕುರಿತಾಗಿ ಪಿಟಿಐ ಜೊತೆ ಮಾತನಾಡಿರುವ ಅಮೆಯ್ ಖೋಪಕರ್ " ನಾವು ಈಗಾಗಲೇ ಮೌಖಿಕವಾಗಿ ಟಿ-ಸೀರಿಸ್,ಸೋನಿ ಮ್ಯೂಸಿಕ್ ,ವೀನಸ್,ಟಿಪ್ಸ್ ಮ್ಯೂಸಿಕ್ ನಂತಹ ಕಂಪನಿಗಳಿಗೆ ಪಾಕ್ ಗಾಯಕರೊಂದಿಗೆ ಕಾರ್ಯನಿರ್ವಹಿಸುವುದನ್ನು ತಕ್ಷಣವೇ ನಿಲ್ಲಿಸಬೇಕು.ಇಲ್ಲದಿದ್ದಲ್ಲಿ ನಮ್ಮ ಸ್ಟೈಲ್ ನಲ್ಲಿ ನಾವು  ಕ್ರಮತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. 

ಇತ್ತೀಚಿಗೆ ಭುಶನ್ ಕುಮಾರ್ ಅವರ ಟಿ-ಸೀರಿಸ್ ರಹತ್ ಫತೆ ಅಲಿ ಖಾನ್ ಮಾತು ಅತಿಫ್ ಅಸ್ಲಾಂ ಜೊತೆ ಒಪ್ಪಂದ ಮಾಡಿಕೊಂಡಿತ್ತು.ಈಗ ಎಂಎನ್ಎಸ್ ಎಚ್ಚರಿಕೆ ನೀಡಿದ ಹಿನ್ನಲೆಯಲ್ಲಿ ಈ ಗಾಯಕರ ಹಾಡುಗಳನ್ನು ಕಂಪನಿಯ ಯೂಟ್ಯೂಬ್ ಚಾನೆಲ್ ನಿಂದ ತೆಗೆದುಹಾಕಿದ್ದಾರೆ ಎಂದು ಕೊಪಕರ್ ತಿಳಿಸಿದ್ದಾರೆ.

2016 ರಲ್ಲಿ ಉರಿ ದಾಳಿಯ ನಂತರ ಸಹ ಇದೆ ಮಾದರಿಯ ಡೆಡ್ ಲೈನ್ ನ್ನು ಎಂಎನ್ ಎಸ್ ನೀಡಿತ್ತು. ಆಗ ಭಾರತದಲ್ಲಿರುವ ಪಾಕ್ ಕಲಾವಿದರು ಭಾರತವನ್ನು ಬಿಟ್ಟು ತೊಲಗಬೇಕೆಂದು ಎಚ್ಚರಿಕೆ ನೀಡಿತ್ತು.
 

Trending News