ಮನೆಯ ಛಾವಣಿಯ ಮೇಲೆ ಈ ಡಿವೈಸ್ ಸ್ಥಾಪಿಸಿ, ಜೀವನಪರ್ಯಂತ ಪಡೆಯಿರಿ ಫ್ರೀ ವಿದ್ಯುತ್

Free Electricity: ನೀವು ಕೂಡ ನಿಮ್ಮ ಮನೆಯ ವಿದ್ಯುತ್ ಬಿಲ್‌ನಿಂದ ಮುಕ್ತಿ ಪಡೆಯಲು ಬಯಸುವಿರಾ... ಇದಕ್ಕಾಗಿ ನಿಮ್ಮ ಮನೆಯ ಛಾವಣಿಯ ಮೇಲೆ ಒಂದು ಡಿವೈಸ್ ಅಳವಡಿಸಿದರೆ ಅಷ್ಟೇ ಸಾಕು. ನೀವು ಜೀವನ ಪರ್ಯಂತ ಉಚಿತವಾಗಿ ವಿದ್ಯುತ್ ಪಡೆಯಬಹುದು. ಯಾವುದೀ ಸಾಧನ ತಿಳಿಯೋಣ...

Written by - Yashaswini V | Last Updated : Apr 26, 2023, 09:58 AM IST
  • ವಿದ್ಯುತ್ ಬಿಲ್‌ನಿಂದಾಗಿ ಬೇಸತ್ತಿದ್ದೀರಾ..!
  • ಮನೆಯಲ್ಲಿ ಸೌರಫಲಕಗಳನ್ನು ಸ್ಥಾಪಿಸಲು ಬಜೆಟ್ ಸಮಸ್ಯೆಯೇ?
  • ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ, ಕಡಿಮೆ ವೆಚ್ಚದಲ್ಲಿ ಈ ಸಾಧನವನ್ನು ನಿಮ್ಮ ಮನೆಯ ಮೇಲ್ಛಾವಣಿಯಲ್ಲಿ ಅಳವಡಿಸಿ ವಿದ್ಯುತ್ ಬಿಲ್‌ನಿಂದ ಮುಕ್ತಿ ಪಡೆಯಿರಿ
ಮನೆಯ ಛಾವಣಿಯ ಮೇಲೆ ಈ ಡಿವೈಸ್ ಸ್ಥಾಪಿಸಿ, ಜೀವನಪರ್ಯಂತ ಪಡೆಯಿರಿ ಫ್ರೀ ವಿದ್ಯುತ್  title=

Free Electricity Bill: ದಿನೇ ದಿನೇ ಹೆಚ್ಚಾಗುತ್ತಿರುವ ಹಣದುಬ್ಬರದ ಮಧ್ಯೆ ವಿದ್ಯುತ್ ಬಿಲ್ ಹೆಚ್ಚಳ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತೆ ಎಂದರೂ ತಪ್ಪಾಗಲಾರದು. ವಿದ್ಯುತ್ ಬಿಲ್ ಕಡಿಮೆ ಮಾಡಲು ಸೌರಫಲಕಗಳು ತುಂಬಾ ಪ್ರಯೋಜನಕಾರಿ. ಆದರೂ, ಬಜೆಟ್ ದೃಷ್ಟಿಯಿಂದ ಇದನ್ನು ಪ್ರತಿಯೊಬ್ಬರಿಗೂ ಅನುಕೂಲಕರ ಎಂದು ಹೇಳಲಾಗುವುದಿಲ್ಲ. ಸೌರ ಫಲಕಗಳನ್ನು ಬಿಟ್ಟರೆ ವಿದ್ಯುತ್ ಬಿಲ್ ನಿಂದ ಪರಿಹಾರ ಪಡೆಯಲು ಬೇರೆ ಮಾರ್ಗವಿಲ್ಲವೇ ಎಂದು ನೀವು ಯೋಚಿಸುತ್ತಿದ್ದರೆ ಖಂಡಿತವಾಗಿಯೂ ಇದೆ. ಯಾವುದೀ ಮಾರ್ಗ ಎಂದು ತಿಳಿಯೋಣ... 

ನೀವು ನಿಮ್ಮ ಮನೆಯ ಛಾವಣಿಯ ಮೇಲೆ ಒಂದು ಸಣ್ಣ ಸಾಧನವನ್ನು ಅಳವಡಿಸಿದರೆ ಸಾಕು ನೀವು ಲೈಫ್ ಲಾಂಗ್ ಫ್ರೀ ವಿದ್ಯುತ್ ಪಡೆಯಬಹುದು. ಅದುವೇ ಟುಲಿಪ್ ಟರ್ಬೈನ್. ಟುಲಿಪ್ ಟರ್ಬೈನ್ ಗಾಳಿ ಚಾಲಿತ ಟರ್ಬೈನ್ ಆಗಿದ್ದು ಅದರಲ್ಲಿ ವಿದ್ಯುತ್ ಜನರೇಟರ್ ಅನ್ನು ಕೂಡ ಸ್ಥಾಪಿಸಲಾಗಿದೆ. 

ಇದನ್ನೂ ಓದಿ- Inverter Led Bulb Price: ಬೇಸಿಗೆ ಕಾಲದಲ್ಲಿ ಕರೆಂಟ್ ಹೋಗುವ ಟೆನ್ಷನ್ ನಿಂದ ಮುಕ್ತರಾಗಿ, ವಿದ್ಯುತ್ ಇಲ್ಲದೆಯೇ ಮನೆಯಲ್ಲಿ ಈ ರೀತಿ ಬೆಳಕು ಬೆಳಗಿ!

ಟುಲಿಪ್ ಟರ್ಬೈನ್ ಗಾಳಿಯ ಸಹಾಯದಿಂದ ವಿದ್ಯುತ್ ಉತ್ಪಾದಿಸುವ ಸಾಧನವಾಗಿದೆ. ಈ ಸಾಧನದ ಮೂಲಕ ನೀವು ಯಾವುದೇ ಹೆಚ್ಚಿನ ವೆಚ್ಚವಿಲ್ಲದೆ ವಿದ್ಯುತ್ ಉತ್ಪಾದಿಸಬಹುದು. ಮಾತ್ರವಲ್ಲ, ಈ ವಿದ್ಯುತ್ ನಿಂದ ನಿಮ್ಮ ಮನೆಯ ವಿದ್ಯುತ್ ಅಗತ್ಯತೆಗಳನ್ನು ಸುಲಭವಾಗಿ ಪೂರೈಸಬಹುದಾಗಿದೆ. ವಿಶೇಷವೆಂದರೆ ಟುಲಿಪ್ ಟರ್ಬೈನ್ ಸಾಧನವು ವಿದ್ಯುಚ್ಛಕ್ತಿಯನ್ನು ಉತ್ಪಾದಿಸಲು ಪ್ರಾರಂಭಿಸಿದಾಗ, ಅದನ್ನು ಬ್ಯಾಟರಿಯ ಸಹಾಯದಿಂದಲೂ ಬಳಸಬಹುದು, ಇಲ್ಲವೇ, ನೆರವಾಗಿಯೂ ಬಳಸಬಹುದಾಗಿದೆ. ಒಟ್ಟಾರೆಯಾಗಿ  ಮನೆಯ ಮೇಲ್ಛಾವಣಿಯಲ್ಲಿ ಸ್ಥಾಪಿಸಲಾದ ಈ ಸಾಧನದಿಂದ ಕನಿಷ್ಠ ಒಂದು ಮನೆಯ ವಿದ್ಯುತ್ ಬಿಲ್ ಅನ್ನು ಉಳಿಸಬಹುದಾಗಿದೆ. 

ಇದನ್ನೂ ಓದಿ- Reduce Electricity Bill Tips: ಈ ಟಿಪ್ಸ್ ಬಳಸಿದರೆ ದಿನವಿಡೀ ಎಸಿ ಬಳಸಿದರೂ ಏರುವುದಿಲ್ಲ ಕರೆಂಟ್ ಬಿಲ್ !

ಟುಲಿಪ್ ಟರ್ಬೈನ್ ಹೇಗೆ ಕಾರ್ಯನಿರ್ವಹಿಸುತ್ತದೆ? 
ಲಭ್ಯವಿರುವ ಮಾಹಿತಿಗಳ ಪ್ರಕಾರ, ಈ ಸಾಧನವು ವಾಯು ಚಕ್ರದಲ್ಲಿ ಲಭ್ಯವಿರುವ ಶಕ್ತಿಯನ್ನು ಬಳಸುತ್ತದೆ ಮತ್ತು ಅದರಿಂದ ವಿದ್ಯುತ್ ಉತ್ಪಾದಿಸುತ್ತದೆ. ಟುಲಿಪ್ ಟರ್ಬೈನ್ ಸಾಧನವು ಜೋರಾಗಿ ಗಾಳಿ ಬೀಸಿದಾಗ ತಿರುಗಲು ಆರಂಭಿಸುತ್ತದೆ. ಇದರಿಂದ ವಿದ್ಯುತ್ ಉತ್ಪಾದನೆಯಾಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News