Grah Gochar In May: ಮೇ ತಿಂಗಳಿನಲ್ಲಿ ಶುಕ್ರ ಸೇರಿದಂತೆ ಈ ಗ್ರಹಗಳ ರಾಶಿ ಪರಿವರ್ತನೆ, 5 ರಾಶಿಗಳ ಜನರಿಗೆ ಅಪಾರ ಧನ-ಘನತೆ-ಗೌರವ ಪ್ರಾಪ್ತಿ!

Planatery Transits In May: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಮೇ ತಿಂಗಳಿನಲ್ಲಿ ಮಂಗಳ, ಶುಕ್ರ ಗ್ರಹಗಳ ಸಿಂಹ ಗೋಚರ ನೆರವೇರಲಿದೆ. ಈ ಗ್ರಹಗಳ ರಾಶಿ ಪರಿವರ್ತನೆಯಿಂದ ಹಲವು ರಾಶಿಗಳ ಜನರಿಗೆ ಬಿಸ್ನೆಸ್, ನೌಕರಿಯಲ್ಲಿ ಅಪಾರ ಯಶಸ್ಸು ಸಿಗುವ ಸಾಧ್ಯತೆ ಇದೆ.
 

Planatery Transits In May: ವೈದಿಕ ಜೋತಿಷ್ಯ ಪಂಚಾಂಗದ ಪ್ರಕಾರ ವರ್ಷ 2023ರ ಮೇ ತಿಂಗಳಿನಲ್ಲಿ ಹಲವು ಗ್ರಹ ಹಾಗೂ ನಕ್ಷತ್ರಗಳ ಸ್ಥಿತಿಗತಿ ಲೆಕ್ಕಾಚಾರಕ್ಕೆ ಸಂಬಂಧಿಸಿದಂತೆ ತುಂಬಾ ವಿಶೇಷವಾಗಿರುವ ಸಾಧ್ಯತೆ ಇದೆ. ಏಕೆಂದರೆ ಈ ತಿಂಗಳು ಸೂರ್ಯ, ಶುಕ್ರ ಸೇರಿದಂತೆ ಮಂಗಳ ಗ್ರಹ ಕೂಡ ತನ್ನ ರಾಶಿಯನ್ನು ಪರಿವರ್ತಿಸಲಿದೆ. ಮೇ ತಿಂಗಳ ಆರಂಭದಲ್ಲಿ ಶುಕ್ರನ ಮಿಥುನ ರಾಶಿ ಗೋಚರ ನೆರವೇರಲಿದೆ. ಇದರಿಂದ ಮಿಥುನ ರಾಶಿಯಲ್ಲಿ ಶುಕ್ರ ಹಾಗೂ ಮಂಗಳನ ಯುತಿ ನೆರವೇರಲಿದೆ. ಇದಾದ ಬಳಿಕ ಗ್ರಹಗಳ ಸೇನಾಪತಿ ಮಂಗಳನ ಗೋಚರ ನೆರವೇರಲಿದೆ. ಇದಲ್ಲದೆ ಬುದ್ಧನ ಉದಯದ ಜೊತೆಗೆ ಮೇಷ ರಾಶಿಯಲ್ಲಿ ಆತನ ನೇರ ನಡೆ ಕೂಡ ಆರಂಭಗೊಳ್ಳಲಿದೆ, ಗ್ರಹಗಳ ಈ ರಾಶಿ ಪರಿವರ್ತನೆಯಿಂದ ಯಾವ ರಾಶಿಗಳಿಗೆ ಲಾಭ ಉಂಟಾಗಲಿದೆ ತಿಳಿದುಕೊಳ್ಳೋಣ ಬನ್ನಿ,

 

ಇದನ್ನೂ ಓದಿ-Jupiter Rise 2023: ಮೇಷ ರಾಶಿಯಲ್ಲಿ ಉದಯಿಸಿದ ಗುರು, ವಿವಾಹಗಳ ಸುಗ್ಗಿ ಆರಂಭ, ಇಲ್ಲಿದೆ ಶುಭ ಮುಹೂರ್ತಗಳ ವಿವರ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

1 /5

1. ಶುಕ್ರ ಗೋಚರ ಮೇ 2023 - ಜೋತಿಷ್ಯ ಪಂಚಾಂಗದ ಪ್ರಕಾರ ಮೇ 2, 2023 ರಂದು ಮಧ್ಯಾಹ್ನ 1 ಗಂಟೆ 46 ನಿಮಿಷಕ್ಕೆ ಶುಕ್ರ ವೃಷಭ ರಾಶಿಯನ್ನು ತೊರೆದು ಮಿಥುನ ರಾಶಿಗೆ ಪ್ರವೇಶಿಸಲಿದ್ದಾನೆ. ಇದಾದ ಬಳಿಕ 30 ಮೇ 2023 ರಂದು ಸಂಜೆ 7 ಗಂಟೆ 39 ನಿಮಿಷಕ್ಕೆ ಆಟ ಕರ್ಕ ರಾಶಿಯನ್ನು ಪ್ರವೇಶಿಸಲಿದ್ದಾನೆ. ಅಲ್ಲಿ ಆತ ಜುಲೈ 7, 2023ರ ಬೆಳಗ್ಗೆ 4 ಗಂಟೆ 28 ನಿಮಿಷದವರೆಗೆ ಇರಲಿದ್ದಾನೆ. ಮೇ ತಿಂಗಳಿನಲ್ಲಿ ಶುಕ್ರ ಒಟ್ಟು ಎರಡು ಬಾರಿ ತನ್ನ ರಾಶಿಯನ್ನು ಪರಿವರ್ತಿಸಲಿದ್ದಾನೆ. ಶುಕ್ರನ ಈ ರಾಶಿ ಪರಿವರ್ತನೆಯಿಂದ ಹಲವು ಜಾತಕದವರಿಗೆ ಲಾಭಗಳು ಪ್ರಾಪ್ತಿಯಾಗಲಿವೆ. ಶುಕ್ರನಾ ಕೃಪೆಯಿಂದ ಜೀವನದಲ್ಲಿ ಅಪಾರ ಶುಖ ಸಮೃದ್ಧಿಯ ಜೊತೆಗೆ ಖುಷಿಗಳ ಆಗಮನವಾಗುವ ಸಾಧ್ಯತೆ ಇದೆ.    

2 /5

2. ಮಂಗಳ ಗೋಚರ ಮೇ 2023: ಗ್ರಹಗಳ ಸೇನಾಪತಿ ಮಂಗಳ ಗ್ರಹ ಕೂಡ ಮೇ ತಿಂಗಳಿನಲ್ಲಿ ತನ್ನ ರಾಶಿಯನ್ನು ಪರಿವರ್ತಿಸಲಿದ್ದಾನೆ, ಆತ ಮೇ 10, 2023 ರಂದು ಮಧ್ಯಾಹ್ನ 1 ಗಂಟೆ 44 ನಿಮಿಷಕ್ಕೆ ಮಿಥುನ ರಾಶಿಯನ್ನು ತೊರೆದು ಚಂದ್ರನ ರಾಶಿಯಾಗಿರುವ ಕರ್ಕ ರಾಶಿಗೆ ಪ್ರವೇಶಿಸಲಿದ್ದಾನೆ. ಈ ರಾಶಿಯಲ್ಲಿ ಆತ ಜೂನ್ 1, 2023ರ ಬೆಳಗ್ಗೆ 1 ಗಂಟೆ 52 ನಿಮಿಷದವರೆಗೆ ಇರಲಿದ್ದಾನೆ ಮತ್ತು ನಂತರ ಆತ ಸಿಂಹ ರಾಶಿಗೆ ಪ್ರವೇಶಿಸಲಿದ್ದಾನೆ. ವೈಯಕ್ತಿಕ ಜೀವನದಲ್ಲಿ ಮಂಗಳ ಸಾಹಸ-ಪರಾಕ್ರಮ ದಯಪಾಲಿಸುತ್ತಾನೆ. ಹೀಗಿರುವಾಗ ಮಂಗಳನ ಈ ಗೋಚರ ಕೂಡ ಹಲವು ರಾಶಿಗಳ ಜೀವನವನ್ನು ಖುಷಿಗಳಿಂದ ತುಂಬಲಿದೆ.   

3 /5

3. ಸೂರ್ಯ ಗೋಚರ ಮೇ 2023: ಗ್ರಹಗಳ ರಾಜ ಸೂರ್ಯ ಮೇ 15, 2023 ರಂದು ಬೆಳಗ್ಗೆ 11 ಗಂಟೆ 58 ನಿಮಿಷಕ್ಕೆ ಮೇಷ ರಾಶಿಯನ್ನು ತೊರೆದು ವೃಷಭ ರಾಶಿಗೆ ಪ್ರವೇಶಿಸಲಿದ್ದಾನೆ. ಸಂಪೂರ್ಣ ಒಂದು ತಿಂಗಳು ಅದೇ ರಾಶಿಯಲ್ಲಿ ಇದ್ದು ಬಳಿಕ ಆತ ಜೂನ್ 15, 2023ರ ಸಂಜೆ 6 ಗಂಟೆ 25 ನಿಮಿಷಕ್ಕೆ ಮಿಥುನ ರಾಶಿಯನ್ನು ಪ್ರವೇಶಿಸಲಿದ್ದಾನೆ.   

4 /5

4. ಮೇ ತಿಂಗಳಲ್ಲಿ ಯಾವ ರಾಶಿಗಳ ಜನರ ಭಾಗ್ಯ ಹೊಳೆಯಲಿದೆ : ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಮೇ ತಿಂಗಳಿನಲ್ಲಿ ದೈತ್ಯಗುರು ಎಂದೇ ಕರೆಯಲಾಗುವ ಶುಕ್ರ ಒಟ್ಟು ಎರಡು ಬಾರಿ ತನ್ನ ರಾಶಿಯನ್ನು ಪರಿವರ್ತಿಸಲಿದೆ. ಇದಾದ ಬಳಿಕ ಸೂರ್ಯ ಹಾಗೂ ಮಂಗಳರ ರಾಶಿ ಪರಿವರ್ತನೆಯಿಂದ ಮಿಥುನ, ಕರ್ಕ, ಸಿಂಹ, ವೃಶ್ಚಿಕ, ಮಕರ ಹಾಗೂ ಮೀನ ರಾಶಿಗಳ ಜಾತಕದ್ವಾರಿಗೆ ವಿಶೇಷ ಲಾಭ ಸಿಗಲಿದೆ.   

5 /5

5. ಗ್ರಹಗಳ ಈ ರಾಶಿ ಪರಿವರ್ತನೆಯಿಂದ ಈ ರಾಶಿಗಳ ಜೀವನದಲ್ಲಿ ಒಳ್ಳೆಯ ದಿನಗಳು ಕದ ತಟ್ಟಲಿವೆ. ಕುಟುಂಬ ಸದಸ್ಯರ ಜೊತೆಗೆ ಈ ರಾಶಿಗಳ ಜನರು ಉತ್ತಮ ಸಮಯ ಕಳೆಯುವರು, ಕಾರ್ಯ ಸ್ಥಳದಲ್ಲಿ ಈ ಜನರಿಗೆ ಅವರ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಲಿದೆ. ಹೀಗಿರುವಾಗ ಉನ್ನತ ವರ್ಘದ ಅಧಿಕಾರಿಗಳು ನಿಮ್ಮ ಕೆಲಸಕ್ಕೆ ಮೆಚ್ಚಿಕೊಂಡು ನಿಮಗೆ ಪದೋನ್ನತಿ ಹಾಗೂ ಇಂಕ್ರಿಮೆಂಟ್ ನೀಡುವ ಸಾಧ್ಯತೆ ಇದೆ. ಇದರ ಜೊತೆಗೆ ವ್ಯಾಪಾರ ವರ್ಗದ ಜನರಿಗೂ ಕೂಡ ಅಪಾರ ಲಾಭ ಸಿಗುವ ಎಲ್ಲಾ ನೀರಿಕ್ಷೆಗಳಿವೆ. ಗ್ರಹಗಳ ಸ್ಥಿತಿಯಲ್ಲಿ ಪರಿವರ್ತನೆಯ ಕಾರಣ 5 ರಾಶಿಗಳ ಜನರಿಗೆ ಬಿಸ್ನೆಸ್ ನಲ್ಲಿ ಅಪಾರ ಯಶಸ್ಸು ಸಿಗುವ ಸಾಧ್ಯತೆ ಇದೆ. ಹಣದ ಹೂಡಿಕೆ ಕೂಡ ನಿಮಗೆ ಲಾಭದಾಯಕ ಸಿದ್ಧ ಸಾಬೀತಾಗಲಿದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)