ಕೇಂದ್ರ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ. ನೌಕರರ ತುಟ್ಟಿಭತ್ಯೆಯನ್ನು ಮತ್ತೆ ಹೆಚ್ಚಿಸಲಾಗುವುದು. ಇತ್ತೀಚೆಗಷ್ಟೇ ಈ ವರ್ಷದ ತುಟ್ಟಿಭತ್ಯೆಯನ್ನು ಏರಿಸಲಾಗಿದೆ. ವೆಚ್ಚಕ್ಕೆ ಅನುಗುಣವಾಗಿ ಶೇ. 4ರಷ್ಟು ತುಟ್ಟಿಭತ್ಯೆಯನ್ನು ಹೆಚ್ಚಿಸಲಾಗಿದೆ. ಇದರಿಂದಾಗಿ ಉದ್ಯೋಗಿಗಳ ಡಿಎ ಶೇ. 38ರಿಂದ ಶೇ. 42ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಪಿಂಚಣಿದಾರರ ಡಿಆರ್ ಕೂಡಾ ಶೇ. 4ರಷ್ಟು ಹೆಚ್ಚಿಸಲಾಗಿದೆ. ಇದೀಗ ಮತ್ತೊಮ್ಮೆ ತುಟ್ಟಿ ಭತ್ಯೆ ಹೆಚ್ಚಿಸಲು ಸರ್ಕಾರ ಸಿದ್ಧತೆ ನಡೆಸಿದೆ.