ICC World Test Championship 2023: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ (WTC) ನ ಅಂತಿಮ ಪಂದ್ಯವು ಜೂನ್ 7 ರಿಂದ ಜೂನ್ 11 ರವರೆಗೆ ಇಂಗ್ಲೆಂಡ್ ನ ಕೆನ್ನಿಂಗ್ಟನ್ ಓವಲ್ (ಲಂಡನ್) ಮೈದಾನದಲ್ಲಿ ನಡೆಯಲಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ನಲ್ಲಿ ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ಫೈನಲ್ ಗೆ ಲಗ್ಗೆ ಇಟ್ಟಿದೆ. ಈ ದೊಡ್ಡ ಪಂದ್ಯಕ್ಕೆ ಟೀಂ ಇಂಡಿಯಾದ 15 ಸದಸ್ಯರ ತಂಡವನ್ನು ಈಗಾಗಲೇ ಪ್ರಕಟಿಸಲಾಗಿದೆ. ಈ ನಡುವೆ ಟೀಂ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಎಂ ಎಸ್ ಧೋನಿ ಬಗ್ಗೆ ಹೇಳಿಕೆ ನೀಡಿದ್ದು ಎಲ್ಲರ ಗಮನ ಸೆಳೆದಿದೆ.
ಇದನ್ನೂ ಓದಿ: ಮೊದಲು ಮೂಗಿನೊಳಗೆ ಬೆರಳಿಟ್ಟ… ಆಮೇಲೆ ಬಾಯಿಗೆ ಹಾಕಿದ! ಅರ್ಜುನ್ ತೆಂಡೂಲ್ಕರ್ ಅಸಹ್ಯ ವಿಡಿಯೋ ವೈರಲ್
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ನ (WTC Final 2023) ಫೈನಲ್ ಗೆ ಆಯ್ಕೆಯಾದ 15 ಆಟಗಾರರ ತಂಡದಲ್ಲಿ KS ಭರತ್ ವಿಕೆಟ್ ಕೀಪರ್ ಆಗಿ ಸೇರ್ಪಡೆಗೊಂಡಿದ್ದಾರೆ. ಮತ್ತೊಂದೆಡೆ ಕೆ ಎಲ್ ರಾಹುಲ್ ವಿಕೆಟ್ ಕೀಪಿಂಗ್ ಅನ್ನು ನೋಡಿಕೊಳ್ಳಬಹುದು. ಆದರೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಎಂಎಸ್ ಧೋನಿ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಈ ಪ್ರಶಸ್ತಿ ಪಂದ್ಯಕ್ಕೆ ಟೀಮ್ ಇಂಡಿಯಾಕ್ಕೆ ಮರಳಿ ಕರೆತರಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಇವೆಲ್ಲದರ ನಡುವೆ, ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಎಂಎಸ್ ಧೋನಿ ವಾಪಸ್ಸಗುವ ಬಗ್ಗೆ ಒಪ್ಪಿಕೊಂಡಿದ್ದಾರೆ.
ಇ ಎಸ್ ಪಿ ಎನ್ ಕ್ರಿಕ್ ಇನ್ಫೋದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ನಲ್ಲಿ ಎಂಎಸ್ ಧೋನಿ ಅವರ ಮಾರ್ಗದರ್ಶನದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರವಿಶಾಸ್ತ್ರಿ, “ಖಂಡಿತವಾಗಿಯೂ ಹೌದು, ಅವರು ಬಹಳಷ್ಟು ಯುವ ವಿಕೆಟ್ ಕೀಪರ್ಗಳಿಗೆ ಕೆಲವು ರೀತಿಯಲ್ಲಿ, ವಿಶೇಷವಾಗಿ ಐಪಿಎಲ್ ಮೂಲಕ ಹೇಗೆ ಕೀಪಿಂಗ್ ಮಾಡಬೇಕೆಂದು ತೋರಿಸಿದ್ದಾರೆ. ಅವರು ಎಂದಿಗೂ ದಾಖಲೆಗಳು ಅಥವಾ ಅಂಕಿಅಂಶಗಳಿಗಾಗಿ ಆಡುವುದಿಲ್ಲ. ಟೆಸ್ಟ್ ಕ್ರಿಕೆಟ್ ತ್ಯಜಿಸಲು ಮನಸ್ಸು ಮಾಡಿದಾಗ, ಯಾರೂ ಅವರ ನಿರ್ಧಾರವನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ” ಎಂದು ಹೇಳಿದರು.
“ಒಮ್ಮೆ ಧೋನಿ ಮನಸ್ಸು ಮಾಡಿದರೆ ಯಾರೂ ತಡೆಯಲಾರರು. ಒಂದರಿಂದ ಒಂದೂವರೆ ವರ್ಷಗಳ ಕಾಲ ಅವರು ಸುಲಭವಾಗಿ ಟೆಸ್ಟ್ ಕ್ರಿಕೆಟ್ ಆಡಬಹುದಿತ್ತು. ದೊಡ್ಡ ಪ್ರೇಕ್ಷಕರ ಮುಂದೆ 100 ಟೆಸ್ಟ್ ಗಳನ್ನು ಆಡಿದ ನಂತರ ಅವರು ಈ ಸ್ವರೂಪಕ್ಕೆ ವಿದಾಯ ಹೇಳಬಹುದಿತ್ತು. ಆದರೆ ಅವರು ಅದನ್ನು ಬಯಸಲಿಲ್ಲ. ತಮ್ಮ ಶೈಲಿಯಲ್ಲಿ ಹಠಾತ್ತನೆ ಕೈ ಎತ್ತಿ ನಿವೃತ್ತಿ ಪಡೆದು ಮತ್ತೊಬ್ಬ ಹೊಸ ಆಟಗಾರನಿಗೆ ಅವಕಾಶ ನೀಡಿದರು” ಎಂದರು.
ಇದನ್ನೂ ಓದಿ: 150 ವರ್ಷ ಹಳೆಯ ಪೇಂಟಿಂಗ್’ನಲ್ಲಿದ್ದ ಹುಡುಗಿ ಕೈಯಲ್ಲಿದೆ ಸ್ಮಾರ್ಟ್ ಫೋನ್! ಅದ್ಹೇಗೆ ಸಾಧ್ಯ?
WTC ಫೈನಲ್ ಗೆ ಭಾರತೀಯ ತಂಡ:
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಸ್ ಭರತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್, ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ ಮತ್ತು ಜೈದೇವ್ ಉನ್ದ್ಕತ್ .
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.