WTC Final: ಮತ್ತೆ ಹೆಚ್ಚಾಯ್ತು ಟೀಂ ಇಂಡಿಯಾದ ಟೆನ್ಷನ್: WTC ಫೈನಲ್’ನಿಂದ ಈ 4 ಆಟಗಾರರು ಔಟ್!

Indian Players Injured-WTC Final 2023: ಲಂಡನ್‌ ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಯಾವ ತಂಡ ಗೆದ್ದರೂ ಚೊಚ್ಚಲ ಬಾರಿಗೆ ಟ್ರೋಫಿ ಗೆಲ್ಲಲಿದೆ. ಭಾರತ ಈ ಹಿಂದೆಯೂ ಫೈನಲ್ ತಲುಪಿತ್ತು. ಆದರೆ ನಂತರ ನ್ಯೂಜಿಲೆಂಡ್ ಗೆದ್ದಿತ್ತು. ಇದೀಗ ಟೀಂ ಇಂಡಿಯಾ ದೊಡ್ಡ ಹಿನ್ನಡೆ ಎದುರಿಸುತ್ತಿದೆ.

Written by - Bhavishya Shetty | Last Updated : May 6, 2023, 09:37 AM IST
    • ಜೂನ್ 7 ರಿಂದ ಲಂಡನ್‌ನ ಲ್ಲಿ ಆಸ್ಟ್ರೇಲಿಯಾ ವಿರುದ್ಧ ಡಬ್ಲ್ಯುಟಿಸಿ ಫೈನಲ್ ಪಂದ್ಯವನ್ನು ನಡೆಯಲಿದೆ
    • ಆದರೆ ಐಪಿಎಲ್ ಸಮಯದಲ್ಲಿಯೇ ಒಂದರ ಹಿಂದೆ ಒಂದರಂತೆ ಕೆಟ್ಟ ಸುದ್ದಿಗಳು ಬರುತ್ತಿವೆ
    • ಒಬ್ಬರಲ್ಲ 4 ಆಟಗಾರರು ಗಾಯದಿಂದ ಬಳಲುತ್ತಿದ್ದು, ಪಂದ್ಯದಿಂದ ಹೊರಬೀಳುವ ಸಾಧ್ಯತೆ ಇದೆ
WTC Final: ಮತ್ತೆ ಹೆಚ್ಚಾಯ್ತು ಟೀಂ ಇಂಡಿಯಾದ ಟೆನ್ಷನ್: WTC ಫೈನಲ್’ನಿಂದ ಈ 4 ಆಟಗಾರರು ಔಟ್!  title=
World Test Championship

Indian Players Injured-WTC Final 2023: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ನ ಅಂತಿಮ ಪಂದ್ಯ ಜೂನ್ 7 ರಿಂದ ಲಂಡನ್‌ ನಲ್ಲಿ ನಡೆಯಲಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ಪಂದ್ಯಕ್ಕೆ ತಂಡವನ್ನು ಈಗಾಗಲೇ ಪ್ರಕಟಿಸಿದೆ. ಆದರೆ ಐಪಿಎಲ್ ಸಮಯದಲ್ಲಿಯೇ ಒಂದರ ಹಿಂದೆ ಒಂದರಂತೆ ಕೆಟ್ಟ ಸುದ್ದಿಗಳು ಬರುತ್ತಿದ್ದು, ಇದರಿಂದಾಗಿ ನಾಯಕ ರೋಹಿತ್ ಶರ್ಮಾ ಟೆನ್ಷನ್ ಹೆಚ್ಚಿದೆ.

ಇದನ್ನೂ ಓದಿ: Twitter World Cup 2023: ತಾಂಜಾನಿಯಾದ ಸಿಂಬಾ ಸ್ಪೋರ್ಟ್ಸ್ ಕ್ಲಬ್ ಸೋಲಿಸಿ ಟ್ವಿಟರ್ ವರ್ಲ್ಡ್ ಕಪ್ 2023 ಗೆದ್ದ ಆರ್ಸಿಬಿ 

ಡ್ಯಾಶಿಂಗ್ ಓಪನರ್ ರೋಹಿತ್ ಶರ್ಮಾ ನಾಯಕತ್ವದ ತಂಡವು ಜೂನ್ 7 ರಿಂದ ಲಂಡನ್‌ನ ಲ್ಲಿ ಆಸ್ಟ್ರೇಲಿಯಾ ವಿರುದ್ಧ ಡಬ್ಲ್ಯುಟಿಸಿ ಫೈನಲ್ ಪಂದ್ಯವನ್ನು ಆಡಲಿದೆ. ಲಂಡನ್‌ ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಯಾವ ತಂಡ ಗೆದ್ದರೂ ಚೊಚ್ಚಲ ಬಾರಿಗೆ ಟ್ರೋಫಿ ಗೆಲ್ಲಲಿದೆ. ಭಾರತ ಈ ಹಿಂದೆಯೂ ಫೈನಲ್ ತಲುಪಿತ್ತು. ಆದರೆ ನಂತರ ನ್ಯೂಜಿಲೆಂಡ್ ಗೆದ್ದಿತ್ತು. ಇದೀಗ ಟೀಂ ಇಂಡಿಯಾ ದೊಡ್ಡ ಹಿನ್ನಡೆ ಎದುರಿಸುತ್ತಿದೆ. ಕಾರಣ ಒಬ್ಬರಲ್ಲ 4 ಆಟಗಾರರು ಗಾಯದಿಂದ ಬಳಲುತ್ತಿದ್ದು, ಪಂದ್ಯದಿಂದ ಹೊರಬೀಳುವ ಸಾಧ್ಯತೆ ಇದೆ.

ಜಯದೇವ್ ಉನದ್ಕತ್:

ವೇಗದ ಬೌಲರ್ ಜಯದೇವ್ ಉನದ್ಕತ್ ಇತ್ತೀಚೆಗೆ IPL-2023 ರ ಸಮಯದಲ್ಲಿ ಗಾಯಗೊಂಡರು. ಇದೇ ಕಾರಣದಿಂದ ಇಡೀ ಋತುವಿನಿಂದ ಹೊರಗುಳಿದಿದ್ದಾರೆ. ಈಗ ಅವರು ಡಬ್ಲ್ಯುಟಿಸಿ ಫೈನಲ್‌ ನಲ್ಲಿ ಆಡುವುದು ಕೂಡ ಅನುಮಾನ ಎಂದು ಹೇಳಲಾಗುತ್ತಿದೆ. ಉನದ್ಕತ್ ಅವರ ವೀಡಿಯೊ ಕೂಡ ವೈರಲ್ ಆಗಿತ್ತು. ಇದರಲ್ಲಿ ಅವರು ನೆಟ್ಸ್‌ ನಲ್ಲಿ ಅಭ್ಯಾಸದ ಸಮಯದಲ್ಲಿ ಇದ್ದಕ್ಕಿದ್ದಂತೆ ಕುಸಿದು ಬೀಳುತ್ತಿರುವುದು ಕಂಡುಬಂದಿದೆ. 2010ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ ಗೆ ಪದಾರ್ಪಣೆ ಮಾಡಿದ್ದ ಜಯದೇವ್ ಇದಾದ ಬಳಿಕ 2022ರಲ್ಲಿ ಟೆಸ್ಟ್ ಪಂದ್ಯ ಆಡುವ ಅವಕಾಶ ಪಡೆದರು. ಕಳೆದ ವರ್ಷ ಡಿಸೆಂಬರ್‌ ನಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ಒಂದು ಪಂದ್ಯವನ್ನು ಮಾತ್ರ ಅವರು ಆಡಲು ಸಾಧ್ಯವಾಯಿತು. ಆಗ ಅವರಿಗೆ ವೀಸಾ-ಪಾಸ್‌ಪೋರ್ಟ್‌ಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಎದುರಾಗಿತ್ತು.  IPL-2023 ರಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ಪರವಾಗಿ ಆಡುತ್ತಿದ್ದರು ಆದರೆ ಈಗ ಸಂಪೂರ್ಣ ಋತುವಿನಿಂದ ಹೊರಗುಳಿದಿದ್ದಾರೆ. ಲಕ್ನೋ ತಂಡವೂ ಇದನ್ನು ಖಚಿತಪಡಿಸಿದೆ.

ಕೆ ಎಲ್ ರಾಹುಲ್:

ಇಂಡಿಯನ್ ಪ್ರೀಮಿಯರ್ ಲೀಗ್‌ ನ ಪ್ರಸಕ್ತ ಋತುಹಾಗೂ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ನ (ಡಬ್ಲ್ಯುಟಿಸಿ) ಫೈನಲ್‌ನಿಂದ ಸ್ಟಾರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಹೊರಗುಳಿದಿದ್ದಾರೆ. ಈ ಸುದ್ದಿಯನ್ನು ಸ್ವತಃ ಅವರೇ ಕನ್ಫರ್ಮ್ ಮಾಡಿದ್ದಾರೆ. ಉನದ್ಕತ್ ನಂತರ ಇದು ಮತ್ತೊಂದು ದೊಡ್ಡ ಹಿನ್ನಡೆಯಾಗಿದೆ. ಈ ಋತುವಿನಲ್ಲಿ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕತ್ವವನ್ನು ನಿಭಾಯಿಸುತ್ತಿದ್ದರು. ಆದರೆ ಈಗ ಕೃನಾಲ್ ಪಾಂಡ್ಯ ಅವರಿಗೆ ಈ ಜವಾಬ್ದಾರಿಯನ್ನು ವಹಿಸಲಾಗಿದೆ. ತಮ್ಮ ಫೋಟೋವನ್ನು ಪೋಸ್ಟ್ ಮಾಡಿದ ರಾಹುಲ್, ವೈದ್ಯಕೀಯ ತಂಡದೊಂದಿಗೆ ಮಾತನಾಡಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು Instagram ನಲ್ಲಿ ಬರೆದಿದ್ದಾರೆ. ಶೀಘ್ರದಲ್ಲೇ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ ಎಂದು ತಿಳಿದುಬಂದಿದೆ.

ಈ ಮಧ್ಯೆ, WTC ಫೈನಲ್‌ ಗೆ ಆಯ್ಕೆಯಾದ ಇತರ ಇಬ್ಬರು ಆಟಗಾರರಾದ ಶಾರ್ದೂಲ್ ಠಾಕೂರ್ ಮತ್ತು ಉಮೇಶ್ ಯಾದವ್ ಅವರ ಫಿಟ್‌ ನೆಸ್ ಬಗ್ಗೆ ಕಳವಳ ಹುಟ್ಟಿಕೊಂಡಿದೆ. ಶಾರ್ದೂಲ್ ಗಾಯಗೊಂಡಿದ್ದರಿಂದ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಕೆಲವು ಐಪಿಎಲ್ ಪಂದ್ಯಗಳನ್ನು ಆಡಲಾಗಲಿಲ್ಲ. ಇನ್ನೊಂದೆಡೆ ಉಮೇಶ್ ಯಾದವ್ ಅವರ ಮಂಡಿರಜ್ಜು ಕೂಡ ಹಿಗ್ಗಿತ್ತು. ಕೆಲವು ಪಂದ್ಯಗಳನ್ನು ಆಡಲು ಸಾಧ್ಯವಾಗಿರಲಿಲ್ಲ. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ರಾಷ್ಟ್ರೀಯ ತಂಡದ ಮ್ಯಾನೇಜ್‌ ಮೆಂಟ್ ಮತ್ತು ಆಯ್ಕೆದಾರರು ಉನದ್ಕತ್ ಸೇರಿದಂತೆ ಎಲ್ಲಾ ಆಟಗಾರರ ಆರೋಗ್ಯ ಅಪ್ಡೇಟ್ ಪಡೆಯಲು ಕಾಯುತ್ತಿದ್ದಾರೆ. ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.

ಇದನ್ನೂ ಓದಿ: ICC ODI ವಿಶ್ವಕಪ್ ಆಡಲು ಭಾರತಕ್ಕೆ ಬರುತ್ತಿದೆಯೇ ಪಾಕಿಸ್ತಾನ? ಅಂತಿಮವಾಗಿ ನಿರ್ಧಾರ ತಿಳಿಸಿದ PAK ಸರ್ಕಾರ!

ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಫೈನಲ್‌ ಗೆ ಟೀಂ ಇಂಡಿಯಾ (ಈ ಹಿಂದೆ ಘೋಷಿಸಿದ್ದ ಲಿಸ್ಟ್):

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಲ್ ರಾಹುಲ್, ಕೆಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ , ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ ಮತ್ತು ಜಯದೇವ್ ಉನದ್ಕತ್.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News