The Kerala story : ವಿವಾದಾತ್ಮಕ ʼದಿ ಕೇರಳ ಸ್ಟೋರಿ’ ಚಿತ್ರಕ್ಕೆ ಮಧ್ಯಪ್ರದೇಶ ಸರ್ಕಾರ ತೆರಿಗೆ ವಿನಾಯಿತಿ ಘೋಷಿಸಿದೆ. ಈ ಕುರಿತು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಟ್ವಿಟ್ಟರ್‌ನಲ್ಲಿ ವೀಡಿಯೊ ಹಂಚಿಕೊಳ್ಳುವ ಮೂಲಕ ಮಾಹಿತಿ ಘೋಷಿಸಿದ್ದಾರೆ. ಕೇರಳ ಸ್ಟೋರಿ ಭಯೋತ್ಪಾದನೆಯ ಭಯಾನಕಯ ಸತ್ಯವನ್ನು ತೆರೆದಿಟ್ಟ ಚಿತ್ರ ಹಾಗಾಗಿ ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಹೌದು.. ಮತಾಂತರ ಕಥಾ ಹಂದರ ಹೊಂದಿರುವ ಈ ಸಿನಿಮಾಗೆ ಕೇರಳ ಮತ್ತು ತಮಿಳುನಾಡಿನಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ಅಲ್ಲದೆ, ವಿರೋಧದ ನಡುವೆಯೂ ನಿನ್ನೆ ತಮಿಳುನಾಡಿನ ಕೆಲ ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆ ಕಂಡಿದೆ. ಇದೀಗ ವಿವಾದಾತ್ಮಕ ಚಿತ್ರಕ್ಕೆ ಮಧ್ಯ ಪ್ರದೇಶ ಸರ್ಕಾರ ವಿನಾಯಿತಿ ಘೊಷಿಸಿದೆ. ಈ ಕುರಿತು ಸ್ವತಃ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮಾಹಿತಿ ನೀಡಿದ್ದಾರೆ. ಅಲ್ಲದೆ, ಇದು ಭಯೋತ್ಪಾದನೆಯ ಭಯಾನಕ ಸತ್ಯವನ್ನು ಬಿಚ್ಚಿಡುವ ಸಿನಿಮಾ ಎಂದು ಹೊಗಳಿದ್ದಾರೆ.
आतंकवाद की भयावह सच्चाई को उजागर करती फिल्म 'The Kerala Story' मध्यप्रदेश में टैक्स फ्री की जा रही है। pic.twitter.com/l5oizjqK7j
— Shivraj Singh Chouhan (@ChouhanShivraj) May 6, 2023
ಇದನ್ನೂ ಓದಿ: ʼದಿ ಕೇರಳ ಸ್ಟೋರಿʼ ನಿಮಗೆ ಅನ್ವಯಿಸುತ್ತದೆ ಅಂತ ತಿಳಿದ್ರೆ ʼನೀವು ಭಯೋತ್ಪಾದಕರುʼ..!
ಸುದೀಪ್ತೋ ಸೇನ್ ನಿರ್ದೇಶನದ, ʼದಿ ಕೇರಳ ಸ್ಟೋರಿʼ ನಿನ್ನೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಈ ಚಿತ್ರ ರಿಲೀಸ್‌ಗೂ ಮುನ್ನವೇ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದೀಗ ದಿ ಕೇರಳ ಸ್ಟೋರಿ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದ್ರೆ, ಕೇರಳ ಸ್ಟೋರಿ ಸಿನಿಮಾ ಕಲೆಕ್ಷನ್ ವಿಚಾರಕ್ಕೆ ಬಂದ್ರೆ, ಭಾರತದಲ್ಲೇ ಮೊದಲ ದಿನವೇ 8.03 ಕೋಟಿ ರೂ. ಕಲೆಕ್ಷನ್ ಗಳಿಸಿದೆ ಎಂದು ಪ್ರಮುಖ ವ್ಯಾಪಾರ ವಿಶ್ಲೇಷಕರಾದ ತರಣ್ ಆದರ್ಶ್ ಅವರು ತಿಳಿಸಿದ್ದಾರೆ. ಈ ಪೈಕಿ ದೇಶದ ಮಲ್ಟಿಪ್ಲೆಕ್ಸ್‌ಗಳ ಮೂಲಕವೇ ಸುಮಾರು 4 ಕೋಟಿ ರೂ. ಬಂದಿದೆ.
ಮೊದಲ ದಿನದ ಸಂಗ್ರಹವನ್ನು ನೋಡಿದಾಗ, ವಾರಾಂತ್ಯದಲ್ಲಿ ಕಲೆಕ್ಷನ್ ಮೊತ್ತ ಹೆಚ್ಚುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಇಂದು ಮತ್ತು ನಾಳೆ ಭಾನುವಾರ ರಜೆ ಇರುವುದರಿಂದ ಈ ದಿನಗಳಲ್ಲಿ ಹೆಚ್ಚಿನ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವ ಸಾಧ್ಯತೆ ಇದೆ. ಕಾಶ್ಮೀರ ಫೈಲ್ಸ್ ಕಳೆದ ವರ್ಷ ಇದೇ ರೀತಿಯಲ್ಲಿ ಬಿಡುಗಡೆಯಾಗಿ ಭಾರೀ ವಿವಾದಕ್ಕೆ ಕಾರಣವಾಗಿತ್ತು. ನಂತರ 252 ಕೋಟಿ ಕಲೆಕ್ಷನ್ ಮಾಡಿತ್ತು. ಕೇರಳ ಸ್ಟೋರಿ ಸಹ ಇದೇ ದಾರಿಯಲ್ಲಿ ನಡೆಯಬುದು ಎಂದು ಹೇಳಲಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.