ಸೋನಿ ಎಕ್ಸ್ಪೀರಿಯಾ 10 ವಿ

  • May 12, 2023, 12:34 PM IST
1 /8

2 /8

ಈ ಸ್ಮಾರ್ಟ್ ಫೋನ್ ಪ್ರೀಮಿಯಂ ವಿನ್ಯಾಸ ಮತ್ತು ಸ್ಟ್ರಾಂಗ್ ಪ್ರೊಸೆಸರ್, ವೈಡ್ ಡಿಸ್ಪ್ಲೇ ಮತ್ತು ಸೂಪರ್ ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಇದು ಹೊಂದಿದೆ. Xperia 10 V ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.

3 /8

ಸೋನಿ ಈ ಫೋನ್‌ ನಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಈ ಫೋನ್ ಜಸ್ಟ್ 159 ಗ್ರಾಂ ತೂಗುತ್ತದೆ. ಅದರ ಪ್ಲಾಸ್ಟಿಕ್ ಸೈಡ್ ಫ್ರೇಮ್ ಮತ್ತು ಹಿಂಭಾಗದ ಪ್ಯಾನೆಲ್‌ ಇತರ ಫೋನ್ ಗಿಂತ ವಿಭಿನ್ನವಾಗಿದೆ. ಇದು IP65/68 ವಾಟರ್ ಆಂಡ ಡಸ್ಟ್ ರೆಸಿಸ್ಟೆಂಟ್ ಆಗಿದೆ. ಇದರ ಜೊತೆಗೆ ಗೊರಿಲ್ಲಾ ಗ್ಲಾಸ್ ವಿಕ್ಟಸ್ ನಿಮ್ಮ ಫೋನ್’ಗೆ ಭದ್ರತೆಯನ್ನು ಒದಗಿಸುತ್ತದೆ.

4 /8

Xperia 10 V 6.1-ಇಂಚಿನ OLED ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ಟಚ್ ಸ್ಯಾಂಪ್ಲಿಂಗ್ ರೇಟ್ ಮತ್ತು 60Hz ರಿಫ್ರೆಶ್ ರೇಟ್ ನ್ನು ಪೂರ್ಣ HD+ ರೆಸಲ್ಯೂಶನ್ ಜೊತೆಗೆ ಬಂದಿದೆ. Sony Xperia 10 V ಲ್ಯಾವೆಂಡರ್, ಸೇಜ್ ಗ್ರೀನ್, ಬಿಳಿ ಮತ್ತು ಕಪ್ಪು ಬಿಡುಗಡೆ ಮಾಡಲಾಗಿದೆ. ಇದರ ಬೆಲೆ 449 EUR (ರೂ. 40,468).

5 /8

ಫೋನ್ 8GB LPDDR4X RAM ಮತ್ತು 128GB UFS 2.1 ಸ್ಟೋರೇಜ್ ನೊಂದಿಗೆ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 695 SoC ನಿಂದ ನಡೆಸಲ್ಪಡುತ್ತದೆ. ಮೈಕ್ರೊ SD ಕಾರ್ಡ್ ಸ್ಲಾಟ್ ಮೂಲಕ ಮೆಮೊರಿಯನ್ನು 1TB ವರೆಗೆ ವಿಸ್ತರಿಸಬಹುದು. ಈ ಸ್ಮಾರ್ಟ್ ಫೋನ್ 5,000mAh ಬ್ಯಾಟರಿ ಪ್ಯಾಕ್‌ ನಿಂದ ಚಾಲಿತವಾಗಿದೆ,

6 /8

ದೊಡ್ಡ ಬ್ಯಾಟರಿ ಸಾಮರ್ಥ್ಯದೊಂದಿಗೆ ಹಗುರವಾದ 5G ಸಕ್ರಿಯಗೊಳಿಸಿದ ಸ್ಮಾರ್ಟ್‌ಫೋನ್‌ಗಳಲ್ಲಿ ಇದು ಒಂದಾಗಿದೆ. ಬ್ಯಾಟರಿ ಪ್ಯಾಕ್ ವೇಗದ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ,

7 /8

ಗಮನಾರ್ಹ ವೈಶಿಷ್ಟ್ಯಗಳೆಂದರೆ 3.5mm ಆಡಿಯೊ ಜಾಕ್, Qualcomm aptX ಅಡಾಪ್ಟಿವ್, NFC, ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್, 60 ರಿಯಾಲಿಟಿ ಆಡಿಯೊ ಪ್ರಮಾಣೀಕೃತ, 360 ರಿಯಾಲಿಟಿ ಆಡಿಯೊ ಅಪ್‌ಮಿಕ್ಸ್, DSEE ಅಲ್ಟಿಮೇಟ್ ಮತ್ತು ಸ್ಟಿರಿಯೊ ರೆಕಾರ್ಡಿಂಗ್.

8 /8

Xperia 10 V ನ ಟ್ರಿಪಲ್ ಕ್ಯಾಮೆರಾ ಸೆಟಪ್ ಉತ್ತಮ ಛಾಯಾಗ್ರಹಣ ಅನುಭವವನ್ನು ನೀಡಲಿದೆ. ಪ್ರೈಮರಿ ಸೆನ್ಸರ್ 48-ಮೆಗಾಪಿಕ್ಸೆಲ್ Exmor RS ಹೊಂದಿದೆ. ಪ್ರೈಮರಿ ಕ್ಯಾಮರಾ ಜೊತೆಗೆ, 8 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಇದೆ. ಮತ್ತೊಂದು ಸೆನ್ಸರ್ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಆಗಿದೆ. ಮುಂಭಾಗದಲ್ಲಿ 8-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ